ಪಾವಗಡ: ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ!

ಪರಸ್ಪರ ಪ್ರೀತಿಸುತ್ತಿದ್ದ ಹಳೆಯ ಪ್ರೇಮಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಗಿರುವ ಘಟನೆ ತುಮಕೂರು ಜಿಲ್ಲೆ ಪಾವಗಡದಲ್ಲಿ ನಡೆದಿದೆ. 

Published: 16th September 2019 03:47 PM  |   Last Updated: 16th September 2019 03:47 PM   |  A+A-


ಪಾವಗಡ: ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ!

Posted By : Raghavendra Adiga
Source : Online Desk

ಪಾವಗಡ: ಪರಸ್ಪರ ಪ್ರೀತಿಸುತ್ತಿದ್ದ ಹಳೆಯ ಪ್ರೇಮಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಗಿರುವ ಘಟನೆ ತುಮಕೂರು ಜಿಲ್ಲೆ ಪಾವಗಡದಲ್ಲಿ ನಡೆದಿದೆ. 

ಪಾವಗಡದ ಅರಸಿಕೆರೆ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಸಿರಾ ತಾಲೂಕು ಕ್ಯಾದಿಗುಂಟೆ ಗ್ರಾಮದ ಮಂಜುನಾಥ (35) ಮತ್ತು ಆತನ ಪ್ರೇಯಸಿ (ಗುರುತು ಪತ್ತೆಯಾಗಿಲ್ಲ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮಿಗಳು ನಿಡಗಲ್ ಗ್ರಾಮದ ಸಮೀಪ ಒಂದೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನೆ ವಿವರ

ಇಬ್ಬರೂ ಸಿರಾದ ಕ್ಯಾದಿಗುಂಟೆ ಗ್ರಾಮದವರೆನ್ನಲಾಗಿದೆ.ಆದರೆ ಕಾರಣಾಂತರದಿಂದ ಮಂಜುನಾಥ್ ಬೇರೆ ಯುವತಿಯೊಡನೆ ವಿವಾಹವಾಗಿದ್ದ. ಅಲ್ಲದೆ ಪ್ರೇಯಸಿ ಸಹ ಆಂಧ್ರ ಮೂಲದ ಯುವಕನೊಡನೆ ಮದುವೆಯಾಗಿದ್ದಳು. ಆದರೆ ಕೆಲ ದಿನಗಳ ಹಿಂದೆ ಆಂಧ್ರದಿಂದ ಬಂದಿದ್ದ ಪ್ರೇಯಸಿ ಕ್ಯಾದಿಗುಂಟೆ ಗ್ರಾಮದಲ್ಲೇ ವಾಸವಿದ್ದಳು. ಇತ್ತ ಮಂಜುನಾಥ್ ಸಹ ತನ್ನ ಪತ್ನಿಯನ್ನು ಬಿಟ್ಟು ಹಳೆ ಗೆಳತಿಯ ಹಿಂದೆ ತಿರುಗುತ್ತಿದ್ದ. 

ಕಳೆದ ರಾತ್ರಿ ಬೈಕ್ ನಲ್ಲಿ ನಿಡಗಲ್ ಗ್ರಾಮಕ್ಕೆ ಆಗಮಿಸಿದ್ದ ಇಬ್ಬರೂ ಒಂದೇ ಮರದಲ್ಲಿ ಒಂದೇ ವೇಳ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಜಾನೆ ಗ್ರಾಮಸ್ಥರು ಮರದಲ್ಲಿ ಪ್ರೇಮಿಗಳಿಬ್ಬರ ಶವ ಕಂಡು ಗಾಬರಿಗೊಂಡಿದ್ದು ಪೋಲೀಸರಿಗೆ ಮಾಹಿತಿ ದೊರಕಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಅರಸಿಕೆರೆ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಮಾತ್ರ ಇನ್ನೂ ಪತ್ತೆಯಾಗಿಲ್ಲ.
 

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp