ಎಚ್ಚರಿಕೆಯ ನಡುವೆಯೂ ಮಿತಿ ಮೀರುತ್ತಿದೆ ಸೈಬರ್ ಕ್ರೈಂ ಪ್ರಕರಣ!

ಸಾಮಾಜಿಕ ಜಾಲತಾಣಗಳಲ್ಲಾಗುತ್ತಿರುವ ಅಪರಾಧ ಪ್ರಕರಣಗಳ ಕುರಿತಂತೆ ಪೊಲೀಸರು ಎಷ್ಟೇ ಎಚ್ಚರಿಕೆ ಕೊಡುತ್ತಿದ್ದರೂ, ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಾಗುತ್ತಿರುವ ಅಪರಾಧ ಪ್ರಕರಣಗಳ ಕುರಿತಂತೆ ಪೊಲೀಸರು ಎಷ್ಟೇ ಎಚ್ಚರಿಕೆ ಕೊಡುತ್ತಿದ್ದರೂ, ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. 

ಪ್ರತೀನಿತ್ಯ 2-3 ಸೈಬರ್ ಕ್ರೈಂ ಪ್ರಕರಣಗಳು ದಾಖಲಾತ್ತಿರುತ್ತದೆ. ಇದರಲ್ಲಿ ಪ್ರಮುಖವಾಗಿ ವಿದ್ಯಾವಂತರೇ ಹೆಚ್ಚು ಮೋಸ ಹೋಗುತ್ತಿದ್ದಾರೆಂದು ಸೈಬರ್ ಕ್ರೈಂ ಪೊಲೀಸರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 

2019ರ ಮೊದಲ 8 ತಿಂಗಳುಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಆನ್'ಲೈನ್ ನಲ್ಲಿ ಆಕರ್ಷಣೆಗೊಳಗಾಗುವ ಜನರು ಹೆಚ್ಚು ಮೋಸ ಹೋಗುತ್ತಿದ್ದಾರೆ. ಮ್ಯಾಟ್ರಿಮೋನಿಯಿಂದಲೇ 335 ವಂಚನೆ ಪ್ರಕರಣಗಳು ದಾಖಲಾಗಿವೆ. ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ನಕಲಿ ಖಾತೆ ತೆರೆದು ಜನರಿಗೆ ಮೋಸ ಮಾಡಲಾಗುತ್ತಿದೆ. 

ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದು, ಬಂಧನದಿಂದ ಹೊರಬರಲು ಆರ್ಥಿಕ ಸಹಾಯದ ಅಗತ್ಯವಿದೆ ಎಂದು ಸುಸಾನ್ ಎಂಬ ಮಹಿಳೆಯೊಬ್ಬರು ನನ್ನ ಬಳಿ ಹಣ ಕೇಳಿದ್ದರು. ಮಹಿಳೆಯ ನೋವನ್ನು ನೋಡಿ ರೂ.55,000 ಹಣವನ್ನು ನೀಡಿ, ಮೋಸ ಹೋಗಿದ್ದೆ ಎಂದು ಹೆಚ್ಎಎಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಜೀವನ್ ಭೀಮಾ ನಗರ ನಿವಾಸಿಯಾಗಿರುವ ರಾಜೇಂದ್ರ (ಹೆಸರು ಬದಲಿಸಲಾಗಿದೆ) ಎಂಬುವವರು ಹೇಳಿದ್ದಾರೆ. 

ಮಹಿಳೆ ಸಹಾಯ ಕೇಳಿದ ಸಂದರ್ಭದಲ್ಲಿ ನನ್ನ ಸಹೋದರ ದೆಹಲಿಯಲ್ಲಿ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಂಪರ್ಕಿಸುವಂತೆ ತಿಳಿಸಿದ್ದೆ. ಇದಾದ ಬಳಿಕ ಆ ಮಹಿಳೆ ನನ್ನನ್ನು ಬ್ಲಾಕ್ ಮಾಡಿದ್ದಳು ಎಂದು ತಿಳಿಸಿದ್ದಾರೆ. 

ರಾಜೇಂದ್ರ ಅವರು ಮೋಸ ಹೋಗುತ್ತಿರುವುದು ಇದು ಮೊದಲೇನಲ್ಲ. 6 ತಿಂಗಳ ಹಿಂದೆ ಕೂಡ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದರು. 

ನೆಟ್ ವರ್ಕ್ ಸರ್ವರ್ ಗಳನ್ನು ಸ್ಥಳೀಯ ಅಥವಾ ವಿದೇಶಗಳಿಂದ ಬರುತ್ತಿರುವ ಕುರಿತು ಕಂಡು ಹಿಡಿಯುವುದು ಬಹಳ ಕಷ್ಟವಾಗಿರುತ್ತದೆ. ವಂಚಕರ ಗುರ್ತಿಗೆ ತಿಳಿಯದ ಕಾರಣ, ವ್ಯಕ್ತಿಗಳ ಕುರಿತು ಮಾಹಿತಿ ಕಲೆ ಹಾಕಲು ಕನಿಷ್ಟ ಎಂದರೂ 2 ದಿನ ಕಾಲಾವಕಾಶ ಬೇಕಾಗುತ್ತದೆ ಎಂದು ಸೈಬರ್ ಕ್ರೈಮ್ ಅಧಿಕಾರಿ ಯಶವಂತ್ ಕುಮಾರ್ ಹೇಳಿದ್ದಾರೆ. 

ಹಣವನ್ನು ಕಳುಹಿಸುವ ವೇಳೆ ಜನರು ಮೊದಲು ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸಬೇಕು. ಪೇಮೆಂಟ್ ಲಿಂಕ್ ಗಳನ್ನು ಕಣ್ಣುಮುಚ್ಚಿಕೊಂಡು ಒತ್ತಬಾರದು. ಆನ್ ಲೈನ್ ಮೂಲಕ ಹಣವನ್ನು ವರ್ಗಾಯಿಸುವುದನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com