ಮತದಾರ ಪಟ್ಟಿ ಪರಿಷ್ಕರಣಾ ಆಂದೋಲನ; ಅ.15ದವರೆಗೆ ಸೇರ್ಪಡೆ, ತಿದ್ದುಪಡಿಗೆ ಅವಕಾಶ- ಅನಿಲ್ ಕುಮಾರ್

ಭಾರತೀಯ ಚುನಾವಣಾ ಆಯೋಗ ಅ.15 ವರೆಗೆ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಆಂದೋಲನ ಹಮ್ಮಿಕೊಂಡಿದ್ದು, ಅದರಲ್ಲಿ ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೇ.3 ರಷ್ಟು ಯುವ ಮತದಾರರು ಹೊಸದಾಗಿ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲೆ ಚುನಾವಣಾಧಿಕಾರಿ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು:  ಭಾರತೀಯ ಚುನಾವಣಾ ಆಯೋಗ ಅ.15 ವರೆಗೆ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಆಂದೋಲನ ಹಮ್ಮಿಕೊಂಡಿದ್ದು, ಅದರಲ್ಲಿ ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೇ.3 ರಷ್ಟು ಯುವ ಮತದಾರರು ಹೊಸದಾಗಿ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲೆ ಚುನಾವಣಾಧಿಕಾರಿ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, 2020ಕ್ಕೆ ಮತದಾನ ಪಟ್ಟಿ ಪರಿಷ್ಕರಿಸುವ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗ ರಾಜ್ಯಾದ್ಯಂತ ಸೆ.1 ರಿಂದ ಅ.15ದ ವರೆಗೆ ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ ಆಂದೋಲನ ಆರಂಭಿಸಿದೆ. ಈ ಅವಧಿಯಲ್ಲಿ ಬೆಂಗಳೂರಿನ ಮತದಾರರು ಹೊಸದಾಗಿ ಮತಚೀಟಿ ಪಡೆಯಲು ಹಾಗೂ ತಮ್ಮ ಗುರುತಿನ ಚೀಟಿಗಳಲ್ಲಿನ ದೋಷಗಳನ್ನು ಸರಿಪಡಸಿಕೊಳ್ಳಲು ಅವಕಾಶವಿದೆ ಎಂದರು. 

ವೋಟರ್ ಹೆಲ್ಪ್‍ಲೈನ್ ಅಥವಾ ಎನ್‍ವಿಎಚ್‍ಪಿ, ಪೋರ್ಟಲ್‍ನಲ್ಲಿ ಲಾಗಿನ್ ಆಗಿ ಖಾತ್ರಿಪಡಿಸಿಕೊಳ್ಳಬಹುದು. ವಿಶೇಷ ಚೇತನರ ಹಾಗೂ ಮತದಾರರು ಅಲ್ಲದವರು 1950ಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ವಿವರಿಸಿರುವ್ಚ ಅನಿ;ಲ್ ಕುಮಾರ್ ನಗರದಲ್ಲಿ ಈ ಬಾರಿ ಶೇ. ಮೂರರಷ್ಟು ಹೊಸ ಹೆಸರುಗಳ ಸೇರ್ಪಡೆಗೆ ಅವಕಾಶ ನಿಡಲಾಗುತ್ತದೆ ಎಂದಿದ್ದಾರೆ. ನಗರದಲ್ಲಿ ನಾಲ್ಕು ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಇರಲಿದ್ದು ಪ್ರತಿಯೊಬ್ಬರಿಗೆ ಏಳು ವಿಧಾನಸಭೆ ಕ್ಷೇತ್ರಗಳು ಬರಲಿದೆ.28 ವಿಧಾನಸಭಾ ಕ್ಷೇತ್ರಗಳ 8514 ಮತಗಟ್ಟೆಗಳಿದ್ದು ಹೆಸರು ಸೇರ್ಪಡೆ ಹಾಗೂ ಪರಿಷ್ಕರಣೆಗಾಗಿ ಒಂದೊಂದು ವಿಧಾನಸಭೆ ವ್ಯಾಪ್ತಿಯಲ್ಲಿ ಒಬ್ಬೊಬ್ಬ ಚುನಾವಣಾಧಿಕಾರಿ ನೇಮಕ ಂಆಡಲಾಗುತ್ತದೆ ಎಂದು ವಿವರಿಸಿದ್ದಾರೆ.

ಇನ್ನು ಈ ಬಾರಿ ಒಂದು ಕುಟುಂಬದ ಎಲ್ಲಾ ಮತದಾರರ ಹೆಸರೂ ಒಂದೇ ಮತಗಟ್ಟೆಯಲ್ಲಿರುವಂತೆ ಜಾಗೃತಿ ವಹಿಸಲಾಗುತ್ತದೆ. ಅಲ್ಲದೆ ಮತದಾರರಿಗೆ ಮತಗಟ್ಟೆ ಎರಡು ಕಿಮಿ ವ್ಯಾಪ್ತಿಯೊಳಗೆ ಇರಬೇಕೆಂದು ಸಹ ನಿಗಾ ವಹಿಸಲಾಗುತ್ತದೆ. ಜಿಪಿಎಸ್ ಬಳಸಿ ಮನೆಗಳ ಸಂಖ್ಯೆಯನ್ನು ಮರುವ್ಯವಸ್ಥೆ ಮಾಡಲಾಗುತ್ತದೆ. ಮೃತರು, ಕಾಯಂ ವಿಳಾಸ ಬದಲಾವ್ದವರ ಹೆಸರನ್ನು ಮತಪಟ್ಟಿಯಿಂದ ಶಾಶ್ವತವಾಗಿ ತೆಗೆದುಹಾಕುವ ಕುರಿತಂತೆ ಗಮನ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕಳೆದ ಲೋಕಸಭೆ ಚುನಾವಣೆ ವೇಳೆ ಮತದಾರರಿಂದ ಮತಪಟ್ಟಿಯಲ್ಲಿನ ದೋಷಗಳ ಬಗ್ಗೆ ಬಹಳಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಮತದಾದರು ಮತಪಟ್ಟಿಯಲ್ಲಿನ ತಮ್ಮ ವಿವರಗಳನ್ನು ಖಾತ್ರಿಪಡಿಸಿಕೊಂಡು ದೋಷಗಳ ತಿದ್ದುಪಡಿ ಮಾಡಿಕೊಳ್ಲಲು ಅನುಕೂಲವಾಗಲೆಂದು ಆಯೋಗವು ಈ ವಿಶೇಷ ಮತದಾನ ಪಟ್ಟಿ ಪರಿಶೀಲನಾ ಕಾರ್ಯಕ್ರಮ ಆಯೋಜನೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com