ಚಿಕ್ಕಮಗಳೂರು ಜಿಲ್ಲೆಯ ಶೇ.75 ಮಂದಿ ಬಿಪಿಎಲ್ ಕಾರ್ಡು ಹೊಂದಿರುವವರು!
ಬಿಪಿಎಲ್ ಕಾರ್ಡು ಇರುವುದು ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರದ ಸೌಲಭ್ಯ ಪಡೆಯಲು. ಸರ್ಕಾರ ನೀಡಿರುವ ಬಿಪಿಎಲ್ ಕಾರ್ಡುಗಳ ಸಂಖ್ಯೆಯ ಪ್ರಕಾರವೇ ಹೋಗುವುದಾದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ.
Published: 17th September 2019 10:23 AM | Last Updated: 17th September 2019 10:23 AM | A+A A-

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು; ಬಿಪಿಎಲ್ ಕಾರ್ಡು ಇರುವುದು ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರದ ಸೌಲಭ್ಯ ಪಡೆಯಲು. ಸರ್ಕಾರ ನೀಡಿರುವ ಬಿಪಿಎಲ್ ಕಾರ್ಡುಗಳ ಸಂಖ್ಯೆಯ ಪ್ರಕಾರವೇ ಹೋಗುವುದಾದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ.
ಪ್ರಸ್ತುತ ಜಿಲ್ಲೆಯಲ್ಲಿ 8.62 ಲಕ್ಷ ಬಿಪಿಎಲ್ ಮಂದಿ ಇದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಂಕಿಅಂಶ ಪ್ರಕಾರ ಅನ್ಯ ಅಂತ್ಯೋದಯ ಯೋಜನೆಯಡಿ ರೇಷನ್ ಕಾರ್ಡು ಹೊಂದಿರುವ ಕುಟುಂಬಗಳ ಸಂಖ್ಯೆ 12 ಸಾವಿರದ 460. ಜಿಲ್ಲೆಯಲ್ಲಿ ಒಟ್ಟಾರೆ 44 ಸಾವಿರದ 36 ಮಂದಿ ಸರ್ಕಾರದಿಂದ 25 ಕೆಜಿ ಅಕ್ಕಿ, 10ಕೆಜಿ ರಾಗಿ ಅಥವಾ 35 ಕೆಜಿ ಅಕ್ಕಿಯನ್ನು ಉಚಿತವಾಗಿ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ 2 ಲಕ್ಷದ 52 ಸಾವಿರದ 765 ಬಿಪಿಎಲ್ ಕುಟುಂಬಗಳಿದ್ದು 8 ಲಕ್ಷದ 19 ಸಾವಿರದ 641 ಮಂದಿ ಸರ್ಕಾರದಿಂದ ಸೌಲಭ್ಯ ಪಡೆಯುತ್ತಿದ್ದಾರೆ. ಜಿಲ್ಲೆಯ ಒಟ್ಟು ಜನಸಂಖ್ಯೆ 11.40 ಲಕ್ಷ. ಬಡತನ ರೇಖೆಗಿಂತ ಕೆಳಗಿರುವ ಫಲಾನುಭವಿಗಳ ಸಂಖ್ಯೆ 8.63 ಲಕ್ಷ ಅಂದರೆ ಶೇಕಡಾ 75ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು.
ಬಿಪಿಎಲ್ ಕಾರ್ಡು ಪಡೆಯಲು ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷವಿರಬೇಕು. ಕಂದಾಯ ಇಲಾಖೆ ಸಮಗ್ರವಾಗಿ ಕುಟುಂಬದ ಆರ್ಥಿಕ ಹಿನ್ನಲೆ ಪರಿಶೀಲಿಸಿ ಬಿಪಿಎಲ್ ಕಾರ್ಡು ನೀಡಬೇಕು. ಬಿಪಿಎಲ್ ಕಾರ್ಡು ನೀಡಿದ ನಂತರ ಕೂಡ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡಿ ಅನಧಿಕೃತವಾಗಿ ಬಿಪಿಎಲ್ ಕಾರ್ಡು ಪಡೆದಿದ್ದರೆ ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿದ ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದು.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಬಗಡಿ ಗೌತಮ್, ಬಿಪಿಎಲ್ ಕಾರ್ಡು ಹೊಂದಿದವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರೆ ಕಂದಾಯ ಇಲಾಖೆ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರ್ಥ ಎಂದರು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ ಮಾತನಾಡಿ, ಆದಾಯ ಪ್ರಮಾಣಪತ್ರ ಮತ್ತು ಬೇರೆ ದಾಖಲೆಗಳ ಸುಳ್ಳು ಮಾಹಿತಿ ನೀಡುವುದನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.