ಕಾರವಾರ: ಮಗನ ಮೃತದೇಹವನ್ನು ಕುವೈತ್ ನಿಂದ ತರಿಸಲು ಸರ್ಕಾರದ ಮೊರೆ ಹೋದ ತಾಯಿ!

ಇತ್ತೀಚೆಗೆ ಕುವೈತ್ ನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಗನ ಮೃತದೇಹವನ್ನು ಮನೆಗೆ ತರಲು ಸರ್ಕಾರದ ಮೊರೆ ಹೋದ ಅಸಹಾಯಕ ತಾಯಿಯ ಕಥೆಯಿದು. 
ಕುವೈತ್ ನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕ
ಕುವೈತ್ ನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕ

ಕಾರವಾರ: ಇತ್ತೀಚೆಗೆ ಕುವೈತ್ ನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಗನ ಮೃತದೇಹವನ್ನು ಮನೆಗೆ ತರಲು ಸರ್ಕಾರದ ಮೊರೆ ಹೋದ ಅಸಹಾಯಕ ತಾಯಿಯ ಕಥೆಯಿದು.


ಕಾರವಾರ ಬಳಿಯ ಕದ್ವಾಡ್ ನ ರಾಬಿನ್ಸನ್ ರೊಸಾರಿಯೊ ಎಂಬ ಯುವಕ ಕುವೈತ್ ನ ಡಜೀಜ್ ನಲ್ಲಿರುವ ಕುವೈತ್ ಫುಡ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೊನ್ನೆ 15ರಂದು ಕಚೇರಿಗೆ ಹೋಗುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕುವೈತ್ ನ ಆಸ್ಪತ್ರೆಯಲ್ಲಿ ಮೃತದೇಹವಿದ್ದು ಭಾರತಕ್ಕೆ ಇನ್ನೂ ಹಸ್ತಾಂತರಗೊಂಡಿಲ್ಲ.


ಕಾರವಾರದಲ್ಲಿರುವ ರಾಬಿನ್ಸನ್ ತಾಯಿ ಮೇರಿ ಫ್ರಾನ್ಸಿಸ್ ರಸಾರಿಯೊ ಆರ್ಥಿಕವಾಗಿ ಹಿಂದುಳಿದಿದ್ದು ಕುವೈತ್ ನಲ್ಲಿ ಯಾವ ಅಧಿಕಾರಿಯನ್ನು ಸಂಪರ್ಕಿಸುವ ಸ್ಥಿತಿಯಲ್ಲಿಲ್ಲ. ಮೃತ ಯುವಕನ ದೇಹ ದೆಹಲಿಗೆ ವಿಮಾನದಲ್ಲಿ ಬರಬೇಕಾಗಿತ್ತು. ನಂತರ ಅಲ್ಲಿಂದ ಗೋವಾಕ್ಕೆ ಅಲ್ಲಿಂದ ಕಾರವಾರಕ್ಕೆ ರಸ್ತೆಯ ಮೂಲಕ ಬರಬೇಕಾಗಿತ್ತು.


ಮಗನ ಮೃತದೇಹವನ್ನು ಭಾರತಕ್ಕೆ ತರಿಸುವಷ್ಟು ಹಣವಿಲ್ಲವೆಂದು ತಾಯಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಕೆ ಅವರನ್ನು ಸಂಪರ್ಕಿಸಿ ಸಮಸ್ಯೆ ಹೇಳಿಕೊಂಡರು. ಜಿಲ್ಲಾಧಿಕಾರಿ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿ ಮಹಿಳೆಯ ಪುತ್ರನ ಮೃತದೇಹವನ್ನು ತರಿಸಲು ಸಹಾಯ ಮಾಡುವಂತೆ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com