ಸೆ. 19ರಂದು ತೇಜಸ್‌ನಲ್ಲಿ ರಕ್ಷಣ ಸಚಿವ ರಾಜನಾಥ್ ಸಿಂಗ್ ಹಾರಾಟ

ಬೆಂಗಳೂರಿನಲ್ಲಿ ದೇಶಿಯವಾಗಿ ಅಭಿವೃದ್ದಿಪಡಿಸಿರುವ ಲಘು ಸಮರ ವಿಮಾನ (ಎಲ್‌ಸಿಎ) ತೇಜಸ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೇ 19 ರಂದು (ಗುರುವಾರ) ಹಾರಾಟ ನಡೆಸಲಿದ್ದಾರೆ ಎಂದು ರಕ್ಷಣಾ ಇಲಾಖೆಯ ಮೂಲಗಳು ಹೇಳಿವೆ.
ತೇಜಸ್‌
ತೇಜಸ್‌

ಬೆಂಗಳೂರು: ಬೆಂಗಳೂರಿನಲ್ಲಿ ದೇಶಿಯವಾಗಿ ಅಭಿವೃದ್ದಿಪಡಿಸಿರುವ ಲಘು ಸಮರ ವಿಮಾನ (ಎಲ್‌ಸಿಎ) ತೇಜಸ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೇ 19 ರಂದು (ಗುರುವಾರ) ಹಾರಾಟ ನಡೆಸಲಿದ್ದಾರೆ ಎಂದು ರಕ್ಷಣಾ ಇಲಾಖೆಯ ಮೂಲಗಳು ಹೇಳಿವೆ.

ರಕ್ಷಣಾ ಸಚಿವರೊಬ್ಬರು ಇದೇ ಮೊದಲ ಬಾರಿಗೆ ಸಂಪೂರ್ಣ ದೇಶಿ ನಿರ್ಮಿತ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವುತ್ತಿದ್ದಾರೆ.

ತೇಜಸ್ ನಾಲ್ಕುವರೆ ತಲೆಮಾರಿನ ಲಘು ಸಮರ ವಿಮಾನವಾಗಿದ್ದು, ಇದನ್ನು ಸರ್ಕಾರಿ ಏರೋಸ್ಪೇಸ್ ಬೆಹೆಮೊಥ್ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅಭಿವೃದ್ಧಿಪಡಿಸಿದೆ. ಕಳೆದ ಶುಕ್ರವಾರ ಗೋವಾದಲ್ಲಿ ಇದರ ನಿರ್ಣಾಯಕ ಪರೀಕ್ಷೆ ನಡೆಸಲಾಗಿತ್ತು ಇದು ವಿಮಾನವಾಹಕ ನೌಕೆಯಿಂದ ತೇಜಸ್ ತನ್ನ ಕಾರ್ಯಾಚರಣೆ ನಡೆಸಲು ಕೇವಲ ಇನ್ನು ಒಂದು ಹೆಜ್ಜೆಯಷ್ಟೇ ಮಾತ್ರ ಬಾಕಿಯಿದೆ.

ಭಾರತೀಯ ನೌಕಾಪಡೆಗಾಗಿಯೇ ಇದನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ತೇಜಸ್ ಯುದ್ಧ ವಿಮಾನ ತಯಾರಿಕಾ ಸರಣಿಯ ಒಂದು ಭಾಗವಾಗಿದೆ.ಯಶಸ್ವಿಯಾಗಿ ಕಾರ್ಯಗತಗೊಳಿಸುವ ಮೂಲಕ ಭಾರತೀಯ ನೌಕೆ ವಿಕ್ರಮಾದಿತ್ಯದಲ್ಲಿ ತೇಜಸ್ ಸಮರ ವಿಮಾನ ಮುಂದಿನ ಕಾರ್ಯಾಚರಣೆ ನಡೆಸಲು ಈ ಮೂಲಕ ಹಾದಿ ಸುಗಮವಾಗಲಿದೆ ಎಂದೂ ಇಲಾಖೆ ಹೇಳಿಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com