ಮೈಸೂರ್ ಪಾಕ್ ನಮ್ದೆ: ತಮಿಳುನಾಡಿಗರಿಗೆ ಚಳಿ ಬಿಡಿಸಿದ ವಾಟಲ್ ನಾಗರಾಜ್!

ಮೈಸೂರು ಪಾಕ್ ಎಂಬುದು ಕೇವಲ ಸಿಹಿ ತಿನಿಸು ಮಾತ್ರವಲ್ಲ. ಇದು ಕನ್ನಡಿಗರ ಭಾವನೆಯೊಂದಿಗೆ ಬೆಸೆದುಕೊಂಡಿದೆ.
ವಾಟಲ್ ನಾಗರಾಜ್
ವಾಟಲ್ ನಾಗರಾಜ್

ಬೆಂಗಳೂರು: ಮೈಸೂರು ಪಾಕ್ ಎಂಬುದು ಕೇವಲ ಸಿಹಿ ತಿನಿಸು ಮಾತ್ರವಲ್ಲ. ಇದು ಕನ್ನಡಿಗರ ಭಾವನೆಯೊಂದಿಗೆ ಬೆಸೆದುಕೊಂಡಿದೆ.

ಆದರೆ ಕಳೆದ ಎರಡು ವರ್ಷಗಳಿಂದ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ. ಈ ಮಧ್ಯೆ ತಮಿಳುನಾಡು ಲೇಖಕನೊಬ್ಬ ಮಾಡಿರುವ ಟ್ವೀಟ್ ಕನ್ನಡಿಗರು ಮತ್ತು ತಮಿಳು ಭಾಷಿಕರ ನಡುವೆ ಕಿತ್ತಾಡುಕೊಳ್ಳುವಂತೆ ಮಾಡಿತ್ತು. ಈ ಮಧ್ಯೆ ಕನ್ನಡ ಪರ ಹೋರಾಟಗಾರ ವಾಟಲ್ ನಾಗರಾಜ್ ಅವರು ತಮಿಳುನಾಡು ವಿರುದ್ಧ ತಿರುಗಿಬಿದ್ದಿದ್ದಾರೆ.

ತಮಿಳುನಾಡಿನವರು ಮೈಸೂರ್ ಪಾಕ್ ಅನ್ನು ತಿನ್ನಬೇಕು ಅಂತಾ ಒದ್ದಾಡಬೇಕು. ನಿಮಗೆ ಕಳುಹಿಸುವುದಿಲ್ಲ. ಹುಡುಗಾಟ ಆಡುತ್ತಿದ್ದೀರಾ ನೀವು. ಕಾವೇರಿ ಹೊಯ್ತು ಹೋಗ್ಲಿ, ಮೇಕೆದಾಟು ಸುಮ್ಮನಿದ್ದೀವಿ. ಈಗ ಸ್ವೀಟ್ ಗೂ ಬಂದಿದ್ದೀರಾ. ಚನ್ನಾಗಿದೆ. ಮೈಸೂರ್ ಪಾಕ್ ಹೆಸರು ಬದಲಾವಣೆ ಇಲ್ಲ. ಇಡೀ ಪ್ರಪಂಚದಲ್ಲೇ ಮೈಸೂರ್ ಪಾಕ್, ಮೈಸೂರ್ ಪಾಕ್ ಎಂದು ಹೇಳಿದ್ದಾರೆ. 

ಮೈಸೂರು ಪಾಕ್ ನ ಇತಿಹಾಸ
ಮೈಸೂರು ಪಾಕ್‌ ಮೊದಲು ತಯಾರಾಗಿದ್ದು ಮೈಸೂರು ಅರಮನೆ ಅಡುಗೆಮನೆಯಲ್ಲಿ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಳ್ವಿಕೆಯ ಸಂದರ್ಭದಲ್ಲಿ ಅರಮನೆಯ ಅಡುಗೆ ಭಟ್ಟರು ಈ ಸಿಹಿಯನ್ನು ತಯಾರಿಸಿದರು. ಕಡಲೆ ಹಿಟ್ಟಿನ ಜತೆ ತುಪ್ಪ ಮತ್ತು ಸಕ್ಕರೆ ಮಿಶ್ರಣದ ಪಾಕ ತಯಾರಿಸಿ ಅದನ್ನು ಬೇಕೆಂದ ಆಕಾರಕ್ಕೆ ತುಂಬಿದರು. ಒಣಗಿದ ನಂತರ ಅದು ಮಿಠಾಯಿ ರೀತಿಯಲ್ಲಿ ಕಂಡುಬಂತು. ಅದರ ಹೆಸರು ಕೇಳಿದಾಗ, ಮಾದಪ್ಪನವರು ಮನಸ್ಸಿನಲ್ಲಿ ಏನೂ ಆಲೋಚಿಸದ ಅವರು ಇದು ಕೇವಲ 'ಮೈಸೂರು ಪಾಕ್‌' ಎಂದು ಕರೆದರು. (ಪಾಕ್‌ ಅಥವಾ ಪಾಕ, ಎಂದರೆ ಸಂಸ್ಕೃತ ಅಥವಾ ಭಾರತದ ಬೇರೆ ಯಾವುದೇ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ). 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com