ಮಂಗಳೂರು: ಸಂಚಾರಿ ಪೊಲೀಸರಿಂದ ದುಬಾರಿ ದಂಡಕ್ಕೆ ಯುವಕ ಮಾಡಿದ್ದೇನು ಗೊತ್ತೆ?

ಸಂಚಾರಿ ನಿಯಮ ಪೊಲೀಸರ ದುಬಾರಿ ದಂಡ ಈಗ ದೇಶದೆಲ್ಲಡೆ ಬಹು ಚರ್ಚಿತ ವಿಚಾರ. ಕೇಂದ್ರ ಮೋಟಾರು ವಾಹನ ಕಾಯ್ದೆ ಪ್ರಕಾರ ಮಂಗಳೂರು ನಗರದ ಯುವಕನೊಬ್ಬನಿಗೆ ಪೊಲೀಸರು  ಭಾರೀ ದಂಡ ವಿಧಿಸಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಸಂಚಾರಿ ನಿಯಮ ಪೊಲೀಸರ ದುಬಾರಿ ದಂಡ ಈಗ ದೇಶದೆಲ್ಲಡೆ ಬಹು ಚರ್ಚಿತ ವಿಚಾರ.  ಕೇಂದ್ರ ಮೋಟಾರು ವಾಹನ ಕಾಯ್ದೆ ಪ್ರಕಾರ ಮಂಗಳೂರು ನಗರದ ಯುವಕನೊಬ್ಬನಿಗೆ ಪೊಲೀಸರು  ಭಾರೀ ದಂಡ ವಿಧಿಸಿದ್ದಾರೆ.

ಮಂಗಳೂರಿನ 21 ವರ್ಷದ ವಿದ್ಯಾರ್ಥಿಯೊಬ್ಬ ಹೆಲ್ಮೆಟ್ ಹಾಕದೇ  ಲೈಸೆನ್ಸ್ ಮತ್ತು ಇನ್ಸ್ಯೂರೆನ್ಸ್, ಇಲ್ಲದೆ ತನ್ನ ಚಿಕ್ಕಪ್ಪನ ಬೈಕ್ ಓಡಿಸುವಾಗ ಸಿಕ್ಕಿ ಹಾಕಿಕೊಂಡಿದ್ದಾನೆ. ಈವೇಳೆ ಆತನ ಬಳಿ ಹಣವೂ ಇರಲಿಲ್ಲ, ಹಾಗೂ ಬೈಕ್ ಮಾಲೀಕ ಆತನ ಚಿಕ್ಕಪ್ಪ ಸಹಾಯ ಮಾಡಲು ಹಿಂದೇಟು ಹಾಕಿದರು.

ಬೈಕ್ ಬಿಡಿಸಿಕೊಳ್ಳಲು ತನ್ನ ಬಳಿಯಿದ್ಮದ ಚಿನ್ನದ ಚೈನು ಹಾಗೂ ವಾಚ್ ಅಣನ್ಮನು ಗಿರವಿ ಇಟ್ಟು ಹಣ ಹೊಂದಿಸಿಕೊಟ್ಟು ಸೀಜ್  ಮಾಡಿದ್ದ ಬೈಕ್ ವಾಪಾಸ್ ತೆಗೆದುಕೊಂಡಿದ್ದಾನೆ.

ವಿದ್ಯಾರ್ಥಿ ಮತ್ತು ಆತನ ಸ್ನೇಹಿತ ಇಬ್ಮಬರು ಹೆಲ್ಮೆಟ್ ಇಲ್ಲದೇ ಹೋಗುತ್ತಿದ್ದರು. ಈ ವೇಳೆ ಪೊಲೀಸರನ್ನು ನೋಡಿದ ಆತ ಪರಾರಿಯಾಗಲು ಯತ್ನಿಸಿ ಕೆಳಗೆ ಬಿದ್ದಿದ್ದಾನೆ.ಈ ವೇಳೆ ಟ್ರಾಫಿಕ್ ಪೊಲೀಸರು, ಆತನ ಬೈಕ್ ಕೀ ತೆಗೆದುಕೊಂಡಿದ್ದಾರೆ. ದಾಖಲಾತಿ ಗಳ ಬಗ್ಗೆ ಕೇಳಿದಾಗ  ವಿದ್ಯಾರ್ಥಿ ಬಳಿ ಯಾವುದೇ ದಾಖಲಾತಿಗಳು ಇರಲಿಲ್ಲ,  ಹೀಗಾಗಿ 7 ಸಾವಿರ ರು ದಂಡ ಪಾವತಿಸುವಂತೆ ಪೊಲೀಸರು ತಿಳಿಸಿದ್ದಾರೆ,

ಆದರೆ ಆತನ ಬಳಿ ಹಣವಿರದ ಕಾರಣ ತನ್ಮನ ಚಿಕ್ಕಪ್ಮನ ಸಹಾಯ ಕೇಳಿದ, ಆದರೆ ಅಣವರು ಸಹಾಯ ಮಾಡಲು ನಿರಾಕರಿಸಿದ ಕಾರಣ ತನ್ಮನ ಬಳಿಯಿದ್ದ ಚಿನ್ನದ ಚೈನು ಮತ್ತು ವಾಚ್ ಅಡವಿಟ್ಟು ಹಣ ಪಾವತಿಸಿದ್ದಾನೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com