ಬೆಂಗಳೂರಿನಲ್ಲಿ ಗೂಗಲ್ ಕೃತಕ ಬುದ್ಧಿಮತ್ತೆ ಪ್ರಯೋಗಾಲಯ ಸ್ಥಾಪನೆ!

ಜಾಗತಿಕ ದೈತ್ಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಗೂಗಲ್ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ  ಕೃತಕ ಬುದ್ದಿಮತ್ತೆ ಪ್ರಯೋಗಾಲಯವನ್ನು (ಅರ್ಟಿಫಿಶಿಯಲ್ ಇಂಟೆಲಿಜೆನ್ಸಿ ಲ್ಯಾಬ್) ಸ್ಥಾಪಿಸುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜಾಗತಿಕ ದೈತ್ಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಗೂಗಲ್ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ  ಕೃತಕ ಬುದ್ದಿಮತ್ತೆ ಪ್ರಯೋಗಾಲಯವನ್ನು (ಅರ್ಟಿಫಿಶಿಯಲ್ ಇಂಟೆಲಿಜೆನ್ಸಿ ಲ್ಯಾಬ್) ಸ್ಥಾಪಿಸುತ್ತಿದೆ. 

ಗೂಗಲ್ ರಿಸರ್ಜ್ ಇಂಡಿಯಾ  ಬೆಂಗಳೂರಿನಲ್ಲಿ ಸ್ಥಾಪನೆಯಾಗುತ್ತಿದ್ದು, ದೇಶದಲ್ಲಿ ಕೃತಕ ಬುದ್ದಿಮತ್ತೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರಗಳನ್ನು ಈ ಸಂಸ್ಥೆ ನೀಡಲಿದೆ. 

ದೇಶಾದ್ಯಂತ ವೈಜ್ಞಾನಿಕ ಹಾಗೂ ಅಕಾಡೆಮಿಕ್ ಸಂಸ್ಥೆಗಳೊಂದಿಗೆ ವಿಲೀನಗೊಳ್ಳುವ ಉದ್ದೇಶವನ್ನು ಹೊಂದಲಾಗಿದೆ. 

ಬೆಂಗಳೂರಿನ ಗೂಗಲ್ ರಿಸರ್ಜ್ ಇಂಡಿಯಾದ ನೂತನ ಸಂಶೋಧನಾ ತಂಡ ಅಡ್ವಾನ್ಸಿಂಗ್ ಕಂಪ್ಯೂಟರ್ ಸೈನ್ಸ್ ಮತ್ತು ಅಪ್ಲೈಯಿಂಗ್  ಇಂಟೆಲಿಜೆನ್ಸಿ ತಂಡದಿಂದ ಆರೋಗ್ಯ, ಕೃಷಿ, ಶಿಕ್ಷಣ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದ ದೊಡ್ಡ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲಾಗುವುದು ಎಂದು ಗೂಗಲ್ ಎಐ ಸಿಇಓ ಸುಂದರ್ ಪಿಚೈ ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ ಐಐಐಟಿಯ ಇನ್ಪೂಸಿಸ್ ಫೌಂಡೇಷನ್ ಮುಖ್ಯ ಪ್ರೊಫೆಸರ್ ಮನೀಶ್ ಗುಪ್ತಾ  ಗೂಗಲ್  ಇಂಟೆಲಿಜೆನ್ಸಿ  ಲ್ಯಾಬ್ ನ ಮುಖ್ಯಸ್ಥರಾಗಲಿದ್ದು, ಹಾರ್ವಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮಿಲಿಂದ್ ತಂಬೆ ಇದರ ನಿರ್ದೇಶಕರಾಗಲಿದ್ದಾರೆ 

ಬೆಂಗಳೂರಿನ ಲ್ಯಾಬ್ ನಿಂದ ಗೂಗಲ್ ಜಾಲದಲ್ಲಿನ ಸಂಶೋಧಕರು, ಸಮ್ಮೇಳನಗಳಲ್ಲಿ ಪಾಲ್ಗೊಳ್ಳಲು, ವೈಜ್ಞಾನಿಕ ಪ್ರಬಂಧಗಳನ್ನು ಮಂಡಿಸಲು ನೆರವಾಗಲಿದೆ ಎಂದು ಗೂಗಲ್ ಎಐಸಿ ಉಪಾಧ್ಯಕ್ಷ ಜಯ್ ಯಾಗ್ನಿಕ್ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com