ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದಸರಾಗೆ ಕೆಎಸ್ಆರ್ ಟಿಸಿಯಿಂದ ವಿಶೇಷ ಪ್ಯಾಕೆಜ್ ಸೇವೆ 

ಮೈಸೂರು ದಸರಾ ವೀಕ್ಷಣೆಗೆ ಹೋಗುವವರಿಗೆ ಈ ವರ್ಷ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್ ಟಿಸಿ)ರಾಜಹಂಸ, ಐರಾವತ ಮತ್ತು ಐರಾವತ ಕ್ಲಬ್ ದರ್ಜೆಯ ಹೆಚ್ಚುವರಿ ಬಸ್ ಸೇವೆ ನೀಡಲಿದೆ. 

ಬೆಂಗಳೂರು: ಮೈಸೂರು ದಸರಾ ವೀಕ್ಷಣೆಗೆ ಹೋಗುವವರಿಗೆ ಈ ವರ್ಷ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್ ಟಿಸಿ)ರಾಜಹಂಸ, ಐರಾವತ ಮತ್ತು ಐರಾವತ ಕ್ಲಬ್ ದರ್ಜೆಯ ಹೆಚ್ಚುವರಿ ಬಸ್ ಸೇವೆ ನೀಡಲಿದೆ.


ಒಂದು ದಿನದ ಈ ಬಸ್ಸು ಸೇವೆಯಲ್ಲಿ ಬೆಳಿಗ್ಗೆ ಮೈಸೂರಿನಿಂದ 6 ಗಂಟೆಗೆ ಹೊರಟು ಸಾಯಂಕಾಲ ಹಿಂತಿರುಗಿ ಮೈಸೂರಿಗೆ ಬರಲಿದೆ. ಈ ತಿಂಗಳ 29ರಿಂದ ಅಕ್ಟೋಬರ್ 10ರವರೆಗೆ ಬಸ್ ಸಂಚಾರವಿರುತ್ತದೆ. www.ksrtc.in ಅಥವಾ ಕೆಎಸ್ ಆರ್ ಟಿಸಿ ಟಿಕೆಟ್ ಬುಕ್ಕಿಂಗ್ ಕೇಂದ್ರಗಳಲ್ಲಿ ಟಿಕೆಟ್ ಗಳನ್ನು ಕಾಯ್ದಿರಿಸಿಕೊಳ್ಳಬಹುದು.


ಕರ್ನಾಟಕ ಸಾರಿಗೆ ವಾಹನಗಳಾದ ಗಿರಿದರ್ಶಿನಿಯಲ್ಲಿ ಬಂಡೀಪುರ ಗೋಪಾಲಸ್ವಾಮಿ ಬೆಟ್ಟ, ಬಿಆರ್ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟಗಳನ್ನು ಸುತ್ತಲಿದ್ದು ವಯಸ್ಕರಿಗೆ 350 ರೂಪಾಯಿ ಹಾಗೂ ಮಕ್ಕಳಿಗೆ 175 ರೂಪಾಯಿ ದರಗಳಿರುತ್ತದೆ.


ಜಲದರ್ಶಿನಿಯಡಿ ಗೋಲ್ಡನ್ ಟೆಂಪಲ್(ಬ್ಯಾಲಕುಪ್ಪೆ), ದುಬಾರೆ ಫಾರೆಸ್ಟ್, ನಿಸರ್ಗದಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆಆರ್ ಎಸ್ ನ್ನು ಸುತ್ತಲಿದೆ. ಇದರಡಿ ವಯಸ್ಕರಿಗೆ 375 ರೂಪಾಯಿ ಹಾಗೂ ಮಕ್ಕಳಿಗೆ 190 ರೂಪಾಯಿ ಇರುತ್ತದೆ. 
ದೇವದರ್ಶಿನಿ ಬಸ್ಸಿನಲ್ಲಿ ನಂಜನಗೂಡು, ಮುಡುಕುತೊರೆ, ತಲಕಾಡು, ಸೋಮನಾಥಪುರ ಮತ್ತು ಶ್ರೀರಂಗಪಟ್ಟಣಗಳನ್ನು ಸುತ್ತಲಿದ್ದು ವಯಸ್ಕರಿಗೆ 275 ರೂಪಾಯಿ ಹಾಗೂ ಮಕ್ಕಳಿಗೆ 140 ರೂಪಾಯಿಗಳಿರುತ್ತದೆ.


ಒಂದು ದಿನದ ವಿಶೇಷ ಪ್ಯಾಕೇಜ್ ನಲ್ಲಿ ನಾಲ್ಕು ವೊಲ್ವೊ ಮಲ್ಟಿ ಆಕ್ಸ್ಲ್ ವಾಹನಗಳಾದ ಮರ್ಸೆರಾ ಪ್ಯಾಕೆಜ್ ನಿಸರ್ಗಧಾಮ-ಗೋಲ್ಡನ್ ಟೆಂಪಲ್, ಹಾರಂಗಿ ಅಣೆಕಟ್ಟು-ರಾಜಾ ಸೀಟ್, ಅಬ್ಬಿ ಜಲಪಾತಗಳನ್ನು ಒಳಗೊಂಡು ವಯಸ್ಕರಿಗೆ 1200 ರೂಪಾಯಿ ಹಾಗೂ ಮಕ್ಕಳಿಗೆ 750 ರೂಪಾಯಿಗಳಿರುತ್ತದೆ.


ಶಿಂಶಾ ಪ್ಯಾಕೆಜ್ ನಡಿ ಶಿವನ ಸಮುದ್ರ-ಶ್ರೀರಂಗಪಟ್ಟಣ, ರಂಗನತಿಟ್ಟು, ಬಲ್ಮುರಿ ಜಲಪಾತ ಒಳಗೊಂಡು 800 ರೂಪಾಯಿ ವಯಸ್ಕರಿಗೆ ಮತ್ತು 600 ರೂಪಾಯಿ ಮಕ್ಕಳಿಗೆ ಇರುತ್ತದೆ.


ಊಟಿ ಪ್ಯಾಕೆಜ್ ನಡಿ ಊಟಿ-ಬೊಟಾನಿಕಲ್ ಗಾರ್ಡನ್, ಇಟಾಲಿಯನ್ ಮತ್ತು ರೋಸ್ ಗಾರ್ಡನ್ ಒಳಗೊಂಡು 1600 ರೂಪಾಯಿ ವಯಸ್ಕರಿಗೆ ಮತ್ತು ಮಕ್ಕಳಿಗೆ 1200 ರೂಪಾಯಿಗಳಿರುತ್ತದೆ.

Related Stories

No stories found.

Advertisement

X
Kannada Prabha
www.kannadaprabha.com