ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ: ಚಾಲಕರಿಗೆ ನೆರವಾಯ್ತು ಪೊಲೀಸರು ತಂದ ಡಿಎಲ್, ವಿಮಾ ಮೇಳ!

ವಾಹನ ಸವಾರರ ಅನುಕೂಲಕ್ಕಾಗಿ ಪೊಲೀಸ್ ಇಲಾಖೆ ಹಮ್ಮಿಕೊಂಡಿರುವ ಡಿಎಲ್, ಎಲ್ಎಲ್, ವಿಮಾ ಮೇಳೆ ಸಾಕಷ್ಟು ನೆರವಾಗುತ್ತಿದ್ದು, ಮೇಳಕ್ಕೆ ದಾಖಲೆ ಪ್ರಮಾಣದಲ್ಲಿ ಜನರು ಹರಿದು ಬರುತ್ತಿದ್ದಾರೆ. 
ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ: ಚಾಲಕರಿಗೆ ನೆರವಾಯ್ತು ಪೊಲೀಸರು ತಂದ ಡಿಎಲ್, ವಿಮಾ ಮೇಳ!
ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ: ಚಾಲಕರಿಗೆ ನೆರವಾಯ್ತು ಪೊಲೀಸರು ತಂದ ಡಿಎಲ್, ವಿಮಾ ಮೇಳ!

ಬೆಂಗಳೂರು: ವಾಹನ ಸವಾರರ ಅನುಕೂಲಕ್ಕಾಗಿ ಪೊಲೀಸ್ ಇಲಾಖೆ ಹಮ್ಮಿಕೊಂಡಿರುವ ಡಿಎಲ್, ಎಲ್ಎಲ್, ವಿಮಾ ಮೇಳೆ ಸಾಕಷ್ಟು ನೆರವಾಗುತ್ತಿದ್ದು, ಮೇಳಕ್ಕೆ ದಾಖಲೆ ಪ್ರಮಾಣದಲ್ಲಿ ಜನರು ಹರಿದು ಬರುತ್ತಿದ್ದಾರೆ. 

ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಪೊಲೀಸರು ಇದೀಗ ವಾಹನ ಸವಾರರಿಗೆ ನೆರವಾಗಿದ್ದು, ಸವಾರರು ಡಿಎಲ್, ಎಲ್ಎಲ್ ಹಾಗೂ ವಿಮೆಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತಿದ್ದಾರೆ. ಇದಲ್ಲದೆ ಮೇಳದಲ್ಲಿ ಸವಾರರು ಉನ್ನತ ಮಟ್ಟದ ಹೆಲ್ಮೆಟ್ ಗಳನ್ನು ಖರೀದಸಲು ಅವಕಾಶ ಮಾಡಿಕೊಡಲಾಗಿದೆ. 

ಬೆಂಗಳೂರು ಜಿಲ್ಲಾ ಎಸ್'ಪಿ ರವಿ ಡಿ.ಚನ್ನಣ್ಣನವರ್ ನೇತೃತ್ವದಲ್ಲಿ ಆರಂಭವಾದ ಈ ಮೇಳೆ ಇದೀಗ ಹೊಸಕೋಟೆ, ನೆಲಮಂಗಲ ಮತ್ತು ಆನೇಕಲ್ ತಾಲೂಕುಗಳಲ್ಲಿಯೂ ನಡೆಯುತ್ತಿದೆ. ಶೀಘ್ರದಲ್ಲಿಯೇ ವಿಜಯಪುರ ಸೇರಿದಂತೆ ಇತರೆ ಪ್ರದೇಶಗಳಲ್ಲೂ ಮೇಳ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಬೆಂಗಳೂರು ಗ್ರಾಮಾಂತರ ಪ್ರದೇಶದ ನಿವಾಸಿಗಳು ಪರವಾನಗಿ ಹಾಗೂ ಇತರೆ ದಾಖಲೆಗಳನ್ನು ಪಡೆದುಕೊಳ್ಳುವವರೆಗೂ ಮೇಳ ಮುಂದುವರೆಯಲಿದೆ ಎಂದು ಚನ್ನಣ್ಣನವರ್ ಹೇಳಿದ್ದಾರೆ. 

10ನೇ ತರಗತಿ ಪೂರ್ಣಗೊಳಿಸಿದ ಬಳಿಕ ಸಾರಿಗೆ ನಿಗಮ ನಿರ್ವಾಹಕ ಹುದ್ದೆಗಾಗಿ ಡಿಎಲ್'ಗೆ ಅರ್ಜಿ ಸಲ್ಲಿಸಿದ್ದೆ ಈ ವೇಳೆ ಡಿಎಲ್ ಪಡೆಯಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿತ್ತು. ಜನರು ಅಂತಹ ಸಮಸ್ಯೆಗಳನ್ನು ಎದುರಿಸಬಾರದು ಎಂಬ ಕಾರಣಕ್ಕೆ ಮೇಳ ನಡೆಸಲು ನಿರ್ಧಾರ ಕೈಗೊಂಡೆ, 

ಗ್ರಾಮೀಣ ಪ್ರದೇಶದ ಸಾಕಷ್ಟು ಜನರಿಗೆ ಇಂಟರ್ನೆಟ್ ಹೇಗೆ ಬಳಕೆ ಮಾಡಬೇಕೆಂಬುದು ತಿಳಿದಿರುವುದಿಲ್ಲ. ಇ-ಪರಿವಾಹನದ ಮೂಲಕ ಜನರು ಪರವಾನಗಿಗೆ ಅರ್ಜಿ ಸಲ್ಲಿಸಬಹುದು. ಆದರೆ, ಈ ಬಗ್ಗೆ ಜನರಿಗೆ ಅರಿವಿಲ್ಲ. ವಾಹನಗಳ ಪರೀಕ್ಷಗಳ ಬಗ್ಗೆಯೂ ಅರಿವಿಲ್ಲ. ಹೀಗಾಗಿ ಮೇಳದೊಂದಿಗೆ ಜನರಿಗೆ ಸಹಾಯ ಮಾಡಲು ಹಾಗೂ ಅರಿವು ಮೂಡಿಸಲು ಮುಂದಾದೆವು ಎಂದು ಚನ್ನಣ್ಣನವರ್ ಹೇಳಿದ್ದಾರೆ. 

ಹೊಸ ನಿಯಮದ ಪ್ರಕಾರ ನಾವೇನು ದಂಡವನ್ನು ಹಾಕುತ್ತೇವೆ, ಪ್ರಕರಣಗಳನ್ನು ದಾಖಲಿಸುತ್ತೇವೆ. ಆದರೆ, ಗ್ರಾಮೀಣ ಪ್ರದೇಶಗಳ ಜನರ ದಿನಗೂಲಿ ರೂ.500ಕ್ಕಿಂತಲೂ ಕಡಿಮೆ ಇರುತ್ತದೆ. ಅಂತಹ ಜನರಿಗೆ ರೂ.1000 ದಂಡ ಹಾಕಿದರೆ ಏನು ಮಾಡುತ್ತಾರೆ? ಹೀಗಾಗಿ ಜನರು ತಮ್ಮ ದಾಖಲೆಗಳನ್ನು ಅಪ್'ಡೇಟ್ ಮಾಡಿಸಿಕೊಳ್ಳಲು ಹಾಗೂ ಅವರಿಗೆ ಕಾನೂನು ಬಗ್ಗೆ ಅವರಿಗೆ ಮೇಳದ ಮೂಲಕ ಶಿಕ್ಷಣ ನೀಡುತ್ತಿದ್ದೇವೆ. ಅವಕಾಶ ಕೊಟ್ಟು ನಂತರ ಪ್ರಕರಣ ದಾಖಲಿಸುತ್ತೇವೆಂದು ತಿಳಿಸಿದ್ದಾರೆ. 

ಶುಕ್ರವಾರ ಒಂದೇ ದಿನ 13,500 ಅರ್ಜಿಗಳು ಬಂದಿವೆ. 250 ವಾಹನ ಸವಾರರು ತಮ್ಮ ಪರವಾನಗಿಗಳನ್ನು ನವೀಕರಣಗೊಳಿಸಿಕೊಂಡಿದ್ದಾರೆ. 1,200 ಜನರು ಹೆಲ್ಮೆಟ್ ಗಳನ್ನು ಖರೀದಿ ಮಾಡಿದ್ದು, 75 ವಾಹನ ಸವಾರರು ತಮ್ಮ ತಮ್ಮ ವಾಹನಗಳಿಗೆ ಎಮಿಷನ್ ಟೆಸ್ಟ್ ಗಳನ್ನು ಮಾಡಿಸಿದ್ದಾರೆಂದು ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್'ಪೆಕ್ಟರ್ ರಾಘವ ಎಸ್ ಗೌಡ ಹೇಳಿದ್ದಾರೆ. 

ದೊಡ್ಡಬಳ್ಳಾಪುರದ ಆಟೋಚಾಲಕ ಚಂದ್ ಪಾಷಾ ಮಾತನಾಡಿ, ಕಳೆದ 15 ವರ್ಷಗಳಿಂದ ನಾನು ಆಟೋ ಓಡಿಸುತ್ತಿದ್ದೇನೆ. ನಾನು ಶಾಲೆಗೆ ಹೋಗದ ಕಾರಣ ನನ್ನ ಬಳಿ ಪರವಾನಗಿ ಇಲ್ಲ. ಇದೀಗ ಪೊಲೀಸರು ನನಗೆ ಸಹಾಯ ಮಾಡಿದ್ದಾರೆ. ದಾಖಲೆಗಳ ಆಧಾರದ ಮೇಲೆ ಪರವಾನಗಿಗೆ ಅರ್ಜಿ ಸಲ್ಲಿಸಿದ್ದೆ, ಇದೀಗ ಪರವಾನಗಿ ದೊರೆತಿದೆ. ಎಲ್ಎಲ್ ಪಡೆಯಲು ರೂ.350 ಖರ್ಚು ಮಾಡಿದೆ. ದೊಡ್ಡಬಳ್ಳಾಪುರ ಪೊಲೀಸರಿಗೆ ಹಾಗೂ ಎಸ್'ಪಿ'ಗೆ ಧನ್ಯವಾದಗಳನ್ನು ಹೇಳುತ್ತೇನೆ. ಆರ್'ಟಿಒಗೆ ನೇರವಾಗಿ ಹೋಗಿದ್ದರೆ, ಕನಿಷ್ಟ ಎಂದರೂ ರೂ.3,500 ಖರ್ಚಾಗುತ್ತಿತ್ತು. ಮೇಳದಲ್ಲಿ ಗ್ರಾಮಸ್ಥರು, ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಳ್ಳಬೇಕೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com