ಸವಾರರಿಗೆ ಸಿಹಿ ಸುದ್ದಿ: ಸಂಚಾರಿ ನಿಯಮ ಉಲ್ಲಂಘನೆ ದಂಡದ ಮೊತ್ತ ಇಳಿಸಿ ರಾಜ್ಯ ಸರ್ಕಾರ ಆದೇಶ

ವಾಹನ ಸವಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಸಂಚಾರ ನಿಯಮ ಉಲ್ಲಂಘನೆಯ ದುಬಾರಿ ದಂಡಕ್ಕೆ ರಾಜ್ಯ ಸರ್ಕಾರ ಕೊನೆಗೂ ಬ್ರೇಕ್‌ ಹಾಕಿದೆ.

Published: 21st September 2019 06:44 PM  |   Last Updated: 21st September 2019 06:44 PM   |  A+A-


Traffic Police

ಸಂಚಾರಿ ಪೊಲೀಸರು

Posted By : Lingaraj Badiger
Source : Online Desk

ಬೆಂಗಳೂರು: ವಾಹನ ಸವಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಸಂಚಾರ ನಿಯಮ ಉಲ್ಲಂಘನೆಯ ದುಬಾರಿ ದಂಡಕ್ಕೆ ರಾಜ್ಯ ಸರ್ಕಾರ ಕೊನೆಗೂ ಬ್ರೇಕ್‌ ಹಾಕಿದೆ.

ರಾಜ್ಯ ಸರ್ಕಾರ ಇಂದು ಸಂಚಾರ ನಿಯಮ ಉಲ್ಲಂಘನೆಯ ದಂಡ ಮೊತ್ತವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದ್ದು, ಹೆಲ್ಮೆಟ್ ಧರಿಸದಿದ್ದರೆ 500 ರೂ., ಮದ್ಯ ಸೇವಿಸಿ ವಾಹನ ಚಲಾಯಿಸಿದರೆ 10 ಸಾವಿರ ರೂ. ದಂಡ (ಇದನ್ನು ಹಾಗೆ ಉಳಿಸಿಕೊಳ್ಳಲಾಗಿದೆ) ಹಾಗೂ ಲೈಸೆನ್ಸ್‌ ಇಲ್ಲದಿದ್ದರೆ ಈ ಮೊದಲು 5 ಸಾವಿರ ರೂ. ದಂಡ ವಿಧಿಸಲಾಗಿತ್ತು. ಅದನು ಈಗ 1 ಸಾವಿರ ರೂ.ಗೆ ಇಳಿಕೆ ಮಾಡಲಾಗಿದೆ.

ನೂತನ ಆದೇಶದ ಪ್ರಕಾರ ಯಾವುದಕ್ಕೆ ಎಷ್ಟು ದಂಡ?

 • ಹೆಲ್ಮೆಟ್ ಧರಿಸದಿದ್ರೆ 500 ರೂಪಾಯಿ ದಂಡ
 • ಸೀಟ್ ಬೆಲ್ಟ್ ಧರಿಸದಿದ್ರೆ 500 ರೂ. ದಂಡ
 • ಸುರಕ್ಷತಾ ಕ್ರಮ ಅನುಸರಿಸದಿದ್ರೆ ₹500 ದಂಡ
 • ರಸ್ತೆ ನಿಯಮ ಉಲ್ಲಂಘನೆಗೆ 1000 ರೂ. ದಂಡ
 • ಇನ್ಶೂರೆನ್ಸ್ ಇಲ್ಲದಿದ್ರೆ(ಬೈಕ್, ಆಟೋ)-₹2000 ದಂಡ
 • ಇನ್ಶೂರೆನ್ಸ್ ಇಲ್ಲದಿದ್ರೆ(ಕಾರು, ಜೀಪ್)-₹3000 ದಂಡ
 • ಇನ್ಶೂರೆನ್ಸ್ ರಹಿತ(ಭಾರಿ ವಾಹನ)-₹5000 ದಂಡ
 • ಲೈಸೆನ್ಸ್ ಇಲ್ಲದಿದ್ರೆ 1,000 ರೂಪಾಯಿ ದಂಡ
 • ಆಂಬುಲೆನ್ಸ್​ಗೆ ದಾರಿ ಬಿಡದಿದ್ರೆ ₹1,000 ದಂಡ
 • ಅನಧಿಕೃತ ವ್ಯಕ್ತಿ ಚಾಲನೆ(ಬೈಕ್, ತ್ರಿಚಕ್ರ)-1000 ರೂ.
 • ಅನಧಿಕೃತ ವ್ಯಕ್ತಿ ಚಾಲನೆ(ಕಾರು, ಜೀಪ್)-2000 ರೂ.
 • ಅನಧಿಕೃತ ವ್ಯಕ್ತಿ ಚಾಲನೆ(ಭಾರಿ ವಾಹನ)-5000 ರೂ.
 • ಅತಿವೇಗ ಚಾಲನೆ(ಬೈಕ್, ತ್ರಿಚಕ್ರ)-1,500 ರೂ.
 • ಅತಿವೇಗ ಚಾಲನೆ(ಕಾರು, ಜೀಪ್)-3000 ರೂ.
 • ಅತಿವೇಗ ಚಾಲನೆ(ಭಾರಿ ವಾಹನ)-5000 ರೂ.
 • ನೋಂದಣಿರಹಿತ ಚಾಲನೆ(ಬೈಕ್, ತ್ರಿಚಕ್ರ)-2000 ರೂ.
 • ನೋಂದಣಿರಹಿತ ಚಾಲನೆ(ಕಾರು, ಜೀಪ್)-3000 ರೂ.
 • ನೋಂದಣಿರಹಿತ ಚಾಲನೆ(ಕಾರು, ಜೀಪ್)-3000 ರೂ.
 • ನೋಂದಣಿರಹಿತ ಚಾಲನೆ(ಭಾರಿ ವಾಹನ)-5000 ರೂ.

ಸೆಪ್ಟೆಂಬರ್‌ 3ರಿಂದ ಮೋಟಾರು ವಾಹನ ಕಾಯಿದೆಯನ್ವಯ ದುಬಾರಿ ದಂಡವನ್ನು ವಿಧಿಸಲಾಗುತ್ತಿತ್ತು. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp