ಬೆಂಗಳೂರು: ಡಿಕೆ ಶಿವಕುಮಾರ್ ಗನ್ ಮ್ಯಾನ್ ಎಂದು ಹೇಳಿಕೊಂಡು ಲಕ್ಷಾಂತರ ವಂಚನೆ 

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಗನ್ ಮ್ಯಾನ್ ಎಂದು ಹೇಳಿಕೊಂಡ  ವ್ಯಕ್ತಿಯೊಬ್ಬ ಕೆಲಸ ಕೊಡಿಸುವುದಾಗಿ ಹೇಳಿ ಹಣ ವಂಚಿಸಿದ ಆರೋಪಿಯನ್ನು  ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಗನ್ ಮ್ಯಾನ್ ಎಂದು ಹೇಳಿಕೊಂಡ  ವ್ಯಕ್ತಿಯೊಬ್ಬ ಕೆಲಸ ಕೊಡಿಸುವುದಾಗಿ ಹೇಳಿ ಹಣ ವಂಚಿಸಿದ ಆರೋಪಿಯನ್ನು  ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಹೊಳೇನರಸೀಪುರ ನಿವಾಸಿ ವೀರಭದ್ರ  ಮೋಸ ಹೊದವರು, ಮೆಜೆಸ್ಟಿಕ್ ನಲ್ಲಿ ಜ್ಯೂಸ್ ಅಂಗಡಿ ಇಟ್ಟುಕೊಂಡಿದ್ದಾರೆ.ಈ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಲಾಗಿದೆ, ವೀರಭದ್ರ ಅವರ ಅಂಗಡಿಗೆ ಜ್ಯೂಸ್ ಕುಡಿಯಲು ಬಂದಾಗ ಅವರ ಬಗ್ಗೆ ಆರೋಪಿ ಮಾಹಿತಿ ಪಡೆದುಕೊಂಡಿದ್ದಾನೆ.

ನನ್ನ ಹೆಸರು ಸುನೀಲ್, ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾಗಿ ಹೇಳಿದ್ದಾನೆ, ಜೊತೆಗೆ ಆತನಿಗೆ ನಂಬಿಕೆ ಬರುವಂತೆ ಮಾಡಲು ಡಿಕೆ ಶಿವಕುಮಾರ್ ಅವರ ಜೊತೆಗೆ ತೆಗೆಸಿಕೊಂಡಿರುವ ಫೋಟೆ ತೋರಿಸಿದ್ದಾನೆ. ಕೆಇಬಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ.

ಕೆಲಸಕ್ಕಾಗಿ ಸರ್ಕಾರಕ್ಕೆ ಮೂರು ಲಕ್ಷ ಲಂಚ ಕೊಡಬೇಕು ಎಂದು ಹೇಳಿದ್ದಾನೆ, ಜೊತೆಗೆ ಮೂರು ಕಂತಿನಲ್ಲಿ ನೀಡುವಂತೆ ತಿಳಿಸಿದ್ದಾನೆ, ಮೊದಲ ಕಂತಿನಲ್ಲಿ ವೀರಭದ್ರ ಹಣ ನೀಡಿದ್ದಾರೆ. ಜೊತೆಗೆ ಇದಾದ 15 ದಿನಗಳ ನಂತರ ಕರೆ ಮಾಡಿದ ಸುನೀಲ್, ಈ ಸಂಬಂಧ ಶಿವಕುಮಾರ್ ಜೊತೆ ಮಾತನಾಡಿದ್ದೇನೆ, 60 ಸಾವಿರ ರು ರೆಡಿ ಮಾಡಿಟ್ಟುಕೊಂಡಿರು ಎಂದು ಹೇಳಿದ್ದಾನೆ, ಆದರೆ ಹ ಕೊಡಲು  ವೀರಭದ್ರ ನಿರಾಕರಿಸಿದ್ದಾನೆ, ಆದರೆ ಈ ವೇಳೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

ಅದಾದ ನಂತರ ವೀರಭದ್ರ ಪೊಲೀಸರಿಗೆ ದೂರು ದಾಖಲಿಸಿದ್ದಾರೆ, 28 ವರ್ಷದ ಸುನೀಲ್ ನನ್ನು ಬಂಧಿಸಿದ್ದಾರೆ, ಮಾಜಿ ಸಚಿವ ಶಿವಕುಮಾರ್ ಅವರ ಹೆಸರನ್ನು ಬಳಸಿಕೊಂಡು ಉದ್ಯೋಗ ಕೊಡಿಸುವುದಾಗಿ ಹಲವರಿಗೆ ವಂಚಿಸಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com