ದಸರಾ ಸಿದ್ಧತೆ ಮೇಲೆ ಬಿತ್ತು ಉಪಚುನಾವಣೆ ನೀತಿ ಸಂಹಿತೆ ಕರಿನೆರಳು

ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಕರಿನೆರಳು ಇದೀಗ ದಸರಾ ಉತ್ಸವದ ಸಿದ್ಧತೆಗಳ ಮೇಲೆ ಬಿದ್ದಿದ್ದು, ಚುನಾವಣೆ ಹಿನ್ನಲೆಯಲ್ಲಿ ಇಡೀ ಹುಣಸೂರು ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಕರಿನೆರಳು ಇದೀಗ ದಸರಾ ಉತ್ಸವದ ಸಿದ್ಧತೆಗಳ ಮೇಲೆ ಬಿದ್ದಿದ್ದು, ಚುನಾವಣೆ ಹಿನ್ನಲೆಯಲ್ಲಿ ಇಡೀ ಹುಣಸೂರು ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. 

ನೀತಿ ಸಂಹಿತೆ ಪ್ರಕಾರ ಮುಂದಿನ ಆದೇಶದವರೆಗೂ ಜನಪ್ರತಿನಿಧಿಗಳು ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಿಲ್ಲ. ಮೈಸೂರು ದಸರಾ ಪೋಸ್ಟರ್ ಸೇರಿದಂತೆ ಎಲ್ಲಿಯೂ ಜನಪ್ರತಿನಿಧಿಗಳ ಭಾವಚಿತ್ರ ಬಳಸುವಂತಿಲ್ಲ. ಹುಣಸೂರು ಗ್ರಾಮೀಣ ದಸರಾ ಬಗ್ಗೆ ಇನ್ನಷ್ಟೇ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಮೈಸೂರು ದಸರಾಕ್ಕಾಗಿ ವಿನಾಯಿತಿ ಕೇಳಲಾಗಿದೆ. ಚುನಾವಣಾ ಆಯೋಗದಿಂದ ಇನ್ನೆರಡು ದಿನಗಳಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದ್ದಾರೆ. 

ದಸರಾ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ, ವಿನಾಯಿತಿ ಪಡೆದು ಕಾರ್ಯಕ್ರಮಗಳನ್ನು ನಡೆಸುತ್ತೇವೆ. ದಸರಾ ಉಪಸಮಿತಿಗಳ ಮೇಲೂ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಸದ್ಯಕ್ಕೆ ನೀತಿಸಂಹಿತೆ ಇಡೀ ಜಿಲ್ಲೆಗೆ ಅನ್ವಯಿಸಲಿದೆ. ಮುಂದಿನ ಆದೇಶ ಬಂದ ನಂತರವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಿದ್ದೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com