ಸೋಮವಾರ ಮಂಗೋಲಿಯಾ ಅಧ್ಯಕ್ಷ ಖಾಲ್ತಾಮಾಗಿನ್ ಬಟುಲ್ಗಾ ಬೆಂಗಳೂರಿಗೆ

ಮಂಗೋಲಿಯಾ ಅಧ್ಯಕ್ಷ ಖಾಲ್ತಾಮಾಗಿನ್ ಬಟುಲ್ಗಾ ಭಾನುವಾರ ಎರಡು ದಿನಗಳ ಭೇಟಿಗಾಗಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎಂದು ಶನಿವಾರ ಅಧಿಕೃತ ಹೇಳಿಕೆ ತಿಳಿಸಿದೆ.

Published: 22nd September 2019 08:02 AM  |   Last Updated: 22nd September 2019 08:02 AM   |  A+A-


Mongolian president

ಮಂಗೋಲಿಯಾ ಅಧ್ಯಕ್ಷ ಖಾಲ್ತಾಮಾಗಿನ್ ಬಟುಲ್ಗಾ

Posted By : Manjula VN
Source : UNI

ಬೆಂಗಳೂರು: ಮಂಗೋಲಿಯಾ ಅಧ್ಯಕ್ಷ ಖಾಲ್ತಾಮಾಗಿನ್ ಬಟುಲ್ಗಾ ಭಾನುವಾರ ಎರಡು ದಿನಗಳ ಭೇಟಿಗಾಗಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎಂದು ಶನಿವಾರ ಅಧಿಕೃತ ಹೇಳಿಕೆ ತಿಳಿಸಿದೆ.

ರಾಜ್ಯಪಾಲ ವಜುಬಾಯ್ ವಾಲಾ ಅಧ್ಯಕ್ಷರನ್ನು ಸ್ವಾಗತಿಸಲಿದ್ದಾರೆ. ಅವರ ಗೌರವಾರ್ಥವಾಗಿ ರಾಜ್ಯಪಾಲರು ಏರ್ಪಡಿಸಲಿರುವ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ.

ಸೋಮವಾರ, ಮಂಗೋಲಿಯನ್ ಅಧ್ಯಕ್ಷರು ಟಾಟಾ ಸೋಲಾರ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್‌, ಅಂತರಿಕ್ಷ ಭವನದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪ್ರಧಾನ ಕಚೇರಿಗೆ ಭೇಟಿ ನೀಡುತ್ತಾರೆ. ಮಧ್ಯಾಹ್ನದ ಬಳಿಕ ದೆಹಲಿಗೆ ತೆರಳಲಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp