ಸಂಚಾರಿ ಪೊಲೀಸ್ ಹಲ್ಲೆ ಪ್ರಕರಣ: ಗುಂಪೊಂದರಿಂದ ಮಿನಿ ಟ್ರಕ್ ಚಾಲಕನ ತಾಯಿಗೆ ಬೆದರಿಕೆ 

ಹಲಸೂರು ಗೇಟ್ ಸಂಚಾರಿ ಠಾಣೆ ಮುಖ್ಯಪೇದೆಯೊಬ್ಬರಿಂಗ ಹಲ್ಲೆಗೊಳಗಾಗಿದ್ದ ಮಿನಿಟ್ರಕ್  ಚಾಲಕನಿಗೆ ಗುಂಪೊಂದು ಜೀವ ಬೆದರಿಕೆ ಹಾಕಿದೆ ಎಂದು ಸೋಮವಾರ ತಿಳಿದುಬಂದಿದೆ. 
ಚಾಲಕನ ತಾಯಿ
ಚಾಲಕನ ತಾಯಿ

ಬೆಂಗಳೂರು: ಹಲಸೂರು ಗೇಟ್ ಸಂಚಾರಿ ಠಾಣೆ ಮುಖ್ಯಪೇದೆಯೊಬ್ಬರಿಂಗ ಹಲ್ಲೆಗೊಳಗಾಗಿದ್ದ ಮಿನಿಟ್ರಕ್  ಚಾಲಕನಿಗೆ ಗುಂಪೊಂದು ಜೀವ ಬೆದರಿಕೆ ಹಾಕಿದೆ ಎಂದು ಸೋಮವಾರ ತಿಳಿದುಬಂದಿದೆ. 

ಜರಗನಹಳ್ಳಿಯಲ್ಲಿರುವ ಟ್ರಕ್ ಚಾಲಕ ಸುನೀಲ್ ಮನೆಗೆ ಬಂದಿರುವ ಅಪರಿಚತ ವ್ಯಕ್ತಿಗಳು ಆತನ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಸುನೀಲ್ ತಾಯಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಕೈಗೆ ಸಿಕ್ಕರೆ, ಆತನ ಕೈ-ಕಾಲು ಮುರಿದು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆಂದು ತಿಳಿದುಬಂದಿದೆ. 

ಈ ಬಗ್ಗೆ ಆತಂಕಗೊಂಡಿರುವ ಸುನೀಲ್ ತಾಯಿ ರತ್ನಮ್ಮ ಅವರು ಕೂಡಲೇ ತಮ್ಮ ಮಗನಿಗೆ ಕರೆ ಮಾಡಿ, ಮನೆಗೆ ಬರದಂತೆ ತಿಳಿಸಿದ್ದಾರೆ. ಅಲ್ಲದೆ, ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ,  

ದೂರಿನಲ್ಲಿ ಬೆದರಿಕೆ ಹಾಕಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.  

ಬೆಂಗಳೂರಿನ ಟೌನ್ ಹಾಲ್ ಬಳಿ ಸುನೀಲ್ ಮಿನಿ ಟ್ರಂಕ್ ಚಾಲನೆ ಮಾಡುತ್ತಿದ್ದ. ಈ ವೇಳೆ ವಾಹನವನ್ನು ತಡೆದಿದ್ದ ಸಂಚಾರಿ ಪೊಲೀಸರು ತಪಾಸಣೆ ಮಾಡಿದ್ದರು. ಮುಖ್ಯಪೇದೆ ಮಹಾಸ್ವಾಮಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಟ್ರಕ್ ಚಾಲಕನನ್ನು ಠಾಣೆಗೆ ಕರೆದೊಯ್ಯುತ್ತಿದ್ದರು. ಮಾರ್ಗದ ಮಧ್ಯೆ ಚಾಲಕನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಇದನ್ನು ಚಾಲಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com