ಸುತ್ತಾಡಲು ನಿರಾಕರಿಸಿದ ಪ್ರಿಯಕರ: ಆತ್ಮಹತ್ಯೆಗೆ ಶರಣಾದ ಪ್ರಿಯತಮೆ

ಪ್ರಿಯಕರ ಹೊರಗಡೆ ಸುತ್ತಾಡಲು ಒಪ್ಪದಿರುವುದಕ್ಕೆ ಮನನೊಂದ ಪ್ರಿಯತಮೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ  ಜಯನಗರದಲ್ಲಿ ನಡೆದಿದೆ.

Published: 23rd September 2019 01:13 PM  |   Last Updated: 23rd September 2019 01:13 PM   |  A+A-


Representative image

ಸಾಂದರ್ಭಿಕ ಚಿತ್ರ

Posted By : Manjula VN
Source : UNI

ಬೆಂಗಳೂರು: ಪ್ರಿಯಕರ ಹೊರಗಡೆ ಸುತ್ತಾಡಲು ಒಪ್ಪದಿರುವುದಕ್ಕೆ ಮನನೊಂದ ಪ್ರಿಯತಮೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಯನಗರದಲ್ಲಿ ನಡೆದಿದೆ.

ಮೂಲತಃ ತಮಿಳುನಾಡಿನ ತಂಜಾವೂರಿನ ಗಾಯತ್ರಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಎಸ್ಸಿ ಓದುತ್ತಿದ್ದಳು. ತನ್ನದೇ ಊರಿನ ಸುದರ್ಶನ್ ಎಂಬುವವನನ್ನು ಪ್ರೀತಿಸುತ್ತಿದ್ದಳು.

ಸುದರ್ಶನ್ ಹಾಗೂ ಗಾಯತ್ರಿ ಒಂದೇ ಊರಿನವರಾಗಿದ್ದು, ಪಿಯುಸಿಯಿಂದ ಒಟ್ಟಿಗೆ ವ್ಯಾಸಂಗ ಮಾಡಿದ್ದರು.

ಗಾಯತ್ರಿ ಭಾನುವಾರ ಮುಂಜಾನೆಯಿಂದ ಸಂಜೆವರೆಗೆ ಸುದರ್ಶನ್ ಜೊತೆ ಸುತ್ತಾಡಿದ್ದಳು. ಮತ್ತೆ ಭಾನುವಾರ ಸಂಜೆಯೂ ಸಹ ಸುದರ್ಶನ್‍ನನ್ನು ಸುತ್ತಾಡಲು ಕರೆದಿದ್ದಾಳೆ. ಆದರೆ, ಮತ್ತೆ ಹೊರಗಡೆ ಸುತ್ತಾಡಲು ಸುದರ್ಶನ್  ನಿರಾಕರಿಸಿದ್ದನು.  ಇದರಿಂದ ಬೇಸರಗೊಂಡ ಗಾಯತ್ರಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುದರ್ಶನ್‍ಗೆ ಮೊಬೈಲ್ ಸಂದೇಶ ಕಳುಹಿಸಿದ್ದಳು.  ಗಾಯತ್ರಿ ಮೆಸೇಜ್ ನೋಡಿ ಕೋಪಗೊಂಡ ಸುದರ್ಶನ್ ಆಕೆಯ ನಂಬರ್ ಬ್ಲಾಕ್ ಮಾಡಿದ್ದಾನೆ. 

ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ಗಾಯತ್ರಿ ತಾನು ನೆಲೆಸಿದ್ದ ಪಿಜಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಬನಶಂಕರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp