ಅನರ್ಹ ಶಾಸಕರ ಸ್ಪರ್ಧೆ ವಿವಾದ: ಪ್ರತಿಕ್ರಿಯೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ನಕಾರ

ರಾಜ್ಯದ ಅನರ್ಹ ಶಾಸಕರು ಉಪ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು ಎಂದು ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ನಲ್ಲಿ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಲು ರಾಜ್ಯ ಮುಖ್ಯ ಚುನಾವನಾಧಿಕಾರಿ ಸಂಜೀವ್ ಕುಮಾರ್ ನಿರಾಕರಿಸಿದ್ದಾರೆ.
ಸಂಜೀವ್ ಕುಮಾರ್
ಸಂಜೀವ್ ಕುಮಾರ್

ಬೆಂಗಳೂರು: ರಾಜ್ಯದ ಅನರ್ಹ ಶಾಸಕರು ಉಪ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು ಎಂದು ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ನಲ್ಲಿ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಲು ರಾಜ್ಯ ಮುಖ್ಯ ಚುನಾವನಾಧಿಕಾರಿ ಸಂಜೀವ್ ಕುಮಾರ್ ನಿರಾಕರಿಸಿದ್ದಾರೆ.
  
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಈ ಹಿಂದೆ ಕೂಡ ತಾವು ಅನರ್ಹರು ಚುನಾವಣೆಗಳಲ್ಲಿ ಸ್ಪರ್ಧಿಸಬಹುದು ಎಂದು ಹೇಳಿಕೆ ನೀಡಿಲ್ಲ. ಕೆಲವು ಪತ್ರಿಕೆಗಳು ಕೆಲವು ರೀತಿಯಲ್ಲಿ ಬಿಂಬಿಸಿವೆ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ  ಆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. 
  
ಸದ್ಯ ಸ್ಪೀಕರ್ ಆದೇಶ ಚಾಲ್ತಿಯಲ್ಲಿದೆ. ಮುಂದಿನ ನಡೆಯ ಕುರಿತು ತಾವು ಪ್ರತಿಕ್ರಿಯೆ ನೀಡುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿದರು. 
  
ಅನರ್ಹರು ಸ್ಪರ್ಧೆಗೆ ನಾಮಪತ್ರ ಸಲ್ಲಿಸಬಹುದೇ ಎಂಬ ಪ್ರಶ್ನೆಗೆ ಅವರು, ಉಮೇದುವಾರಿಕೆ ಸಲ್ಲಿಸದಂತೆ ಯಾರನ್ನು ತಡೆಯಲಾಗದು. ಆದರೆ, ಅದನ್ನು ಪರಿಶೀಲಿಸಿ, ಪರಿಗಣಿಸುವುದು ಬಿಡುವುದು ನಂತರದ ಪ್ರಶ್ನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com