ಉದ್ಯಮಿ ಕೊಲೆಗೆ ಪ್ರೇಯಸಿ ಯತ್ನ; ದೂರು ದಾಖಲು

ಆಸ್ತಿಗಾಗಿ ಪ್ರೇಯಸಿಯೊಬ್ಬಳು ತನ್ನ ಪ್ರಿಯತಮನನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದ ನೈಸ್ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Published: 24th September 2019 11:46 AM  |   Last Updated: 24th September 2019 11:46 AM   |  A+A-


Bizman Lover Arrested

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : UNI

ಬೆಂಗಳೂರು: ಆಸ್ತಿಗಾಗಿ ಪ್ರೇಯಸಿಯೊಬ್ಬಳು ತನ್ನ ಪ್ರಿಯತಮನನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದ ನೈಸ್ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಸೆ.20 ರಂದು ನೈಸ್​ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿಯ ಕಡೆಗೆ ಉದ್ಯಮಿ ಪ್ರಭಾಕರ್ ರೆಡ್ಡಿ ತಮ್ಮ ಪ್ರೇಯಸಿ ಪವಿತ್ರಾ ಜೊತೆಗೆ ಕಾರಿನಲ್ಲಿ ಹೊರಟಿದ್ದಾಗ ಆಸ್ತಿ ತನ್ನ ಹೆಸರಿಗೆ ವರ್ಗಾಯಿಸುವಂತೆ ಪವಿತ್ರಾ ಕೇಳಿದ್ದಾರೆ. ಆದರೆ ಅದಕ್ಕೆ ಪ್ರಭಾಕರ್ ರೆಡ್ಡಿ ಒಪ್ಪದಿದ್ದಾಗ ಆಕ್ರೋಶಗೊಂಡ ಪವಿತ್ರಾ, ಕಾರಿನ ಸೀಟ್​ಬೆಲ್ಟ್​ನಿಂದ ಅವರ ಕುತ್ತಿಗೆ ಬಿಗಿದು ಕೊಲ್ಲಲು ಯತ್ನಿಸಿದ್ದಲ್ಲದೇ ನೀರಿನ ಬಾಟಲಿಯಿಂದ ಹಲ್ಲೆ‌‌ಮಾಡಿದ್ದರು. 

ಈ ಸಂಬಂಧ ಪ್ರಭಾಕರ ರೆಡ್ಡಿ ಎಲೆಕ್ಟ್ರಾನಿಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಪವಿತ್ರಾಳನ್ನು 2ನೇ ಪತ್ನಿ ಎಂದು ಹೇಳಿಕೊಂಡಿದ್ದ ಪ್ರಭಾಕರ್ ರೆಡ್ಡಿ, ಅವರೊಂದಿಗೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದರು.  2015ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ‌ ಪ್ರಭಾಕರ್ ಸ್ಪರ್ಧಿಸಿದ್ದರು. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Stay up to date on all the latest ರಾಜ್ಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp