ಚಿಕ್ಕಮಗಳೂರು: ಬಾಲ್ಯ ಸ್ನೇಹಿತನಿಂದ ಇರಿತಕ್ಕೊಳಗಾಗಿದ್ದ ಯುವತಿ ಸಾವು  

ಐದು ದಿನಗಳ ಹಿಂದೆ ಭಗ್ನ ಪ್ರೇಮಿಯಿಂದ ಇರಿತಕ್ಕೊಳಗಾಗಿದ್ದ 23 ವರ್ಷದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಆಸ್ಪತ್ರೆಯಲ್ಲಿ  ಸಾವನ್ನಪ್ಪಿದ್ದಾಳೆ.

Published: 24th September 2019 09:02 AM  |   Last Updated: 24th September 2019 09:02 AM   |  A+A-


Mithun

ಆರೋಪಿ ಮಿಥುನ್

Posted By : Shilpa D
Source : The New Indian Express

ಚಿಕ್ಕಮಗಳೂರು: ಐದು ದಿನಗಳ ಹಿಂದೆ ಭಗ್ನ ಪ್ರೇಮಿಯಿಂದ ಇರಿತಕ್ಕೊಳಗಾಗಿದ್ದ 23 ವರ್ಷದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಆಸ್ಪತ್ರೆಯಲ್ಲಿ  ಸಾವನ್ನಪ್ಪಿದ್ದಾಳೆ.

ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಬಸಾಪುರದ ಇಪ್ಪತ್ಮೂರು ವರ್ಷದ ಯುವತಿ ಬಿಂದು ಮೃತ ಯುವತಿ. ಮೂಡಿಗೆರೆ ತಾಲೂಕಿನ ಮಹಲ್ಗೋಡಿನಲ್ಲಿ ಕೆಲ ದಿನಗಳ ಹಿಂದೆ ಮಿಥುನ್ ಎಂಬಾತ ಆಕೆಗೆ ಚಾಕುವಿನಿಂದ ಇರಿದಿದ್ದ.

ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಿಂದುಗೆ ಚಾಕುವಿನಿಂದ ಇರಿದಿದ್ದ ಮಿಥುನ್ ಆ ನಂತರ ನಾಪತ್ತೆಯಾಗಿದ್ದ. ಆ ಮೇಲೆ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದ. ಚಾಕು ಇರಿತಕ್ಕೆ ಒಳಗಾಗಿದ್ದ ಬಿಂದುವಿನ ಸ್ಥಿತಿ ಗಂಭೀರವಾಗಿತ್ತು. ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬಿಂದು ಶನಿವಾರ ಮೃತಪಟ್ಟಿದ್ದಾಳೆ. 

ಆರೋಪಿ ಮಿಥುನ್ ಮತ್ತು ಮೃತ ಯುವತಿ ಬಿಂದು ಇಬ್ಬರು ಕ್ಲಾಸ್ ಮೇಟ್ಸ್ ಆಗಿದ್ದರು, 10ನೇ ತರಗತಿ ವರೆಗೂ ಜೊತೆಗೆ ಓದಿದ್ದರು. ಅದಾದ ನಂತರ ಇಬ್ಬರು ಬೇರೆ ಬೇರೆ ಯಾಗಿದ್ದರು, ಮತ್ತೆ ಫೇಸ್ ಬುಕ್ ನಲ್ಲಿ ಮತ್ತೆ ಒಂದಾಗಿದ್ದರು. ಕೆಲಸ ವರ್ಷಗಳ ನಂತರ ಭೇಟಿಯಾದ ಇಬ್ಬರು ಜೊತೆಯಾಗಿ ಓಡಾಡುತ್ತಿದ್ದರು,.ಆರೋಪಿ ಬಿಂದುವನ್ನು ಪ್ರೀತಿ ಮಾಡುತ್ತಿದ್ದ ಎನ್ನಲಾಗಿದೆ,

ಐದು ದಿನಗಳ ಹಿಂದೆ ಬಿಂದು ಮತ್ತು ಮಿಥುನ್  ಕಳಸ ಮತ್ತು ಹೊರನಾಡಿಗೆ ಬೈಕ್ ನಲ್ಲಿ ಹೋಗಿದ್ದರು, ಈ ವೇಳೆ  ಬಿಂದು ತನ್ನ ಮಾಜಿ ಗೆಳೆಯನ ಬಗ್ಗೆ ಹೇಳಿಕೊಂಡಿದ್ದಾಳೆ. ಇದರಿಂದ ಕೋಪಗೊಂಡ ಮಿಥುನ್ ಆಕೆಯನ್ನು ನದಿಗೆ ತಳ್ಳಿದ್ದಾನೆ, ಆಕೆ ನದಿಯಂದ ಎದ್ದು ಬಂದ ಮೇಲೆ ಆಕೆ ಮೇಲೆ ಕಲ್ಲು ತೂರಿದ್ದಾನೆ. ನಂತರ ಸ್ಕ್ರೂ ಡ್ರೈವರ್ ನಿಂದ ಆಕೆಯ ಹೊಟ್ಟೆ ಮತ್ತು ಖಾಸಗಿ ಭಾಗಗಳಿಗೆ ಚುಚ್ಚಿ ಅಲ್ಲಿಂದ ಪರಾರಿಯಾಗಿದ್ದನು. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp