ಧಾರವಾಡ: ಚಲಿಸುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ, ಖಾಸಗಿ ಕಂಪನಿ ಉದ್ಯೋಗಿಯ ಬರ್ಬರ ಹತ್ಯೆ

ಅಪರಿಚಿತ ವ್ಯಕ್ತಿಗಳು ಚಲಿಸುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿ, 40 ವರ್ಷದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ಬೆಳಗ್ಗೆ ಧಾರವಾಡ ಸಮೀಪ ನಡೆದಿದೆ.

Published: 25th September 2019 03:55 PM  |   Last Updated: 25th September 2019 03:55 PM   |  A+A-


sham

ಶ್ಯಾಮಸುಂದರ್

Posted By : lingaraj
Source : The New Indian Express

ಧಾರವಾಡ: ಅಪರಿಚಿತ ವ್ಯಕ್ತಿಗಳು ಚಲಿಸುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿ, 40 ವರ್ಷದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ಬೆಳಗ್ಗೆ ಧಾರವಾಡ ಸಮೀಪ ನಡೆದಿದೆ.

ಪೊಲೀಸರು ಹತ್ಯೆಯಾದ ವ್ಯಕ್ತಿಯನ್ನು ದಾಂಡೇಲಿ ನಿವಾಸಿ ಶ್ಯಾಮಸುಂದರ್ ದೇವರಾಜ್  4೦)ಎಂದು ಗುರುತಿಸಿದ್ದಾರೆ.

ಶ್ಯಾಮಸುಂದರ್ ಅವರು ಇಂದು ಬೆಳಗ್ಗೆ ದಾಂಡೇಲಿಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಪಲ್ಸರ್ ಬೈಕ್ ನಲ್ಲಿ ಕಾರು ಹಿಂಬಾಲಿಸಿ ಬಂದ ಮೂವರು ದುಷ್ಕರ್ಮಿಗಳು ನಿಗದಿ ಬಳಿ ಬೈಪಾಸ್ ರಸ್ತೆಯಲ್ಲಿ ತಿರುವು ತೆಗೆದುಕೊಳ್ಳುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.

ಬೆಳಗ್ಗೆ 9.45ರ ಸುಮಾರಿಗೆ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಗುಂಡು ಹಾರಿಸಿದರೂ ಚಾಲಕ ಕಾರು ನಿಲ್ಲಿಸದೇ ಗಾಯಗೊಂಡ ಶ್ಯಾಮಸುಂದರ್ ಅವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆ ಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಶ್ಯಾಮಸುಂದರ್ ಅವರು ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. 

ಶ್ಯಾಮಸುಂದರ್ ಅವರ ಕುಟುಬಂದ ಪ್ರಕಾರ, ಅವರು ದೆಹಲಿಗೆ ತೆರಳಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಆದರೆ ಅವರಿಗೆ ಯಾರೊಂದಿಗೂ ವೈರತ್ವ ಇರಲಿಲ್ಲ ಎಂದು ಹೇಳಿದ್ದಾರೆ.

ಶ್ಯಾಮಸುಂದರ್ ಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಧಾರವಾಡ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಮತ್ತು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Stay up to date on all the latest ರಾಜ್ಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp