ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಐಎಂಎಯಿಂದ ಸಾವಿರಾರು ನಕಲಿ ಗೋಲ್ಡ್ ಬಿಸ್ಕೆಟ್'ಗಳು ವಶಕ್ಕೆ

ನಗರದಲ್ಲಿ ನಕಲಿ ಚಿನ್ನದ ಹಾವಳಿ ಹೆಚ್ಚಾಗಿದ್ದು, ಐಎಂಎಗೆ ಸೇರಿದ ಸಾವಿರಾರು ನಕಲಿ ಗೋಲ್ಡ್ ಬಿಸ್ಕೆಟ್ ಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದುಕೊಂಡಿದ್ದಾರೆ. 

ಬೆಂಗಳೂರು: ನಗರದಲ್ಲಿ ನಕಲಿ ಚಿನ್ನದ ಹಾವಳಿ ಹೆಚ್ಚಾಗಿದ್ದು, ಐಎಂಎಗೆ ಸೇರಿದ ಸಾವಿರಾರು ನಕಲಿ ಗೋಲ್ಡ್ ಬಿಸ್ಕೆಟ್ ಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದುಕೊಂಡಿದ್ದಾರೆ. 

ರೂ.1.5 ಲಕ್ಷ ಮೌಲ್ಯದ ಎಂಎಂಟಿಸಿ ಪಿಎಎಂಪಿ ಚಿನ್ನ 999 ಹೊಂದಿರುವ 303.07ಕೆಜಿಯುಳ್ಳ 5,880 ನಕಲಿ ಬಿಸ್ಕೆಟ್ ಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. 

ಇದಲ್ಲದೆ, ಚಾಲನೆ ಹೊಂದಿರುವ ಹಾಗೂ ಚಾಲನೆ ರಹಿತವಾಗಿರುವ ಐಎಂಎಗೆ ಸೇರಿದ ಹಲವಾರು ಆಸ್ತಿಗಳನ್ನು ಸರ್ಕಾರ ವಶಕ್ಕೆ ಪಡೆದುಕೊಂಡಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಂದಾಯ ಸಚಿವ ಆರ್. ಅಶೋಕ್ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಐಎಂಎಗೆ ಸೇರಿದ ರೂ.21.73 ಕೋಟಿ ಮೊತ್ತದ 12 ಆಸ್ತಿಗಳನ್ನು ವಶಕ್ಕೆಪಡೆಯಲಾಗಿದೆ ಎಂದು ಹೇಳಿದ್ದಾರೆ. 

ಮಾಹಿತಿಗಳ ಪ್ರಕಾರ ಅಧಿಕಾರಿಗಳು ರೂ.60 ಲಕ್ಷ ಹೊಂದಿರುವ ದುಬಾರಿಯಾದ ಫಾರ್ಚುನರ್, ಇನ್ನೋವಾ ಕ್ರೆಸ್ಟಾ ಮತ್ತು ಹೊಂಡಾ ಜಾಝ್ ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. 

Related Stories

No stories found.

Advertisement

X
Kannada Prabha
www.kannadaprabha.com