ಸಾವು ಬದುಕಿನ ನಡುವೆ ಹೋರಾಟ: ರಸ್ತೆಯಲ್ಲಿ ಬಿದ್ದಿದ್ದ ಮಹಿಳೆ ಜೀವ ರಕ್ಷಿಸಿದ ಸಚಿವ ಶ್ರೀರಾಮುಲು

ತೀವ್ರ ಅನಾರೋಗ್ಯದಿಂದಾಗಿ ರಸ್ತೆಯಲ್ಲಿ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಹಿಳೆಯೊಬ್ಬರನ್ನು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸುವ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ಅವರು ಮಾನವೀಯತೆ ಮೆರೆದಿದ್ದಾರೆ.

Published: 26th September 2019 07:56 AM  |   Last Updated: 26th September 2019 07:56 AM   |  A+A-


Sriramulu helps shift unconscious woman at MM Hills to health centre

ಸಾವು ಬದುಕಿನ ನಡುವೆ ಹೋರಾಟ: ರಸ್ತೆಯಲ್ಲಿ ಬಿದ್ದಿದ್ದ ಮಹಿಳೆ ಜೀವ ರಕ್ಷಿಸಿದ ಸಚಿವ ಶ್ರೀರಾಮುಲು

Posted By : Manjula VN
Source : The New Indian Express

ಚಾಮರಾಜನಗರ: ತೀವ್ರ ಅನಾರೋಗ್ಯದಿಂದಾಗಿ ರಸ್ತೆಯಲ್ಲಿ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಹಿಳೆಯೊಬ್ಬರನ್ನು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸುವ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ಅವರು ಮಾನವೀಯತೆ ಮೆರೆದಿದ್ದಾರೆ. 

ಮಲೆಮಹದೇಶ್ವರ ಬೆಟ್ಟಕ್ಕೆ ಹೋಗುವ ದಾರಿ ಮಧ್ಯೆ ಈ ಘಟನೆ ನಡೆದಿರುವುದಾಗಿ ವರದಿಗಳು ತಿಳಿಸಿವೆ. 

ಕಾಡಿನಲ್ಲಿರುವ ದಾರಿ ಮಧ್ಯೆ ಮಹಿಳೆಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಇದೇ ಮಾರ್ಗದಲ್ಲಿ ಚಲಿಸುತ್ತಿದ್ದ ಶ್ರೀರಾಮುಲು ಅವರು ಮಹಿಳೆ ಬಿದ್ದಿರುವುದನ್ನು ಕಂಡು ಕಾರು ನಿಲ್ಲಿಸುವಂತೆ ಚಾಲಕನಿಗೆ ತಿಳಿಸಿದ್ದಾರೆ. 

ಈ ವೇಳೆ ಮಹಿಳೆಗೆ ಸಹಾಯ ಮಾಡಿ, ಕೂಡಲೇ ತಮ್ಮ ಕಾರಿನಲ್ಲಿಯೇ ಮಹಿಳೆಯನ್ನು ಕರೆದುಕೊಂಡು ಹೋಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. 

ಈ ಮಾರ್ಗದಲ್ಲಿ ವಾಹನ ಸಂಚಾರ ವಿರಳವಾಗಿರುವ ಹಿನ್ನಲೆಯಲ್ಲಿ ಮಹಿಳೆ ಸಾಕಷ್ಟು ಸಮಯದಿಂದ ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದರು. ಸಚಿವರು ಸಕಾಲಕ್ಕೆ ನೆರವು ನೀಡಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp