ಲಂಚದ ಆರೋಪ: ಕೆಐಎಡಿಬಿ ಸಹಾಯಕ ಕಾರ್ಯದರ್ಶಿ ಬಂಧನ

ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಕೆಐಎಡಿಬಿ ಸಹಾಯಕ ಕಾರ್ಯದರ್ಶಿ ಹಾಗೂ ಕಚೇರಿ ಸಹಾಯಕನನ್ನು  ಭ್ರಷ್ಟಾಚಾರ ನಿಗ್ರಹ ದಳ - ಎಸಿಬಿ ಪೋಲೀಸರು ಬಂಧಿಸಿದ್ದಾರೆ.
ಎಸಿಬಿ
ಎಸಿಬಿ

ಬೆಂಗಳೂರು: ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಕೆಐಎಡಿಬಿ ಸಹಾಯಕ ಕಾರ್ಯದರ್ಶಿ ಹಾಗೂ ಕಚೇರಿ ಸಹಾಯಕನನ್ನು  ಭ್ರಷ್ಟಾಚಾರ ನಿಗ್ರಹ ದಳ - ಎಸಿಬಿ ಪೋಲೀಸರು ಬಂಧಿಸಿದ್ದಾರೆ.

ಕೆಐಎಡಿಬಿ ಕಚೇರಿ ಸಹಾಯಕ ಕಾರ್ಯದರ್ಶಿ ಶೀಲಾ ಹಾಗೂ ಕಚೇರಿ ಸಹಾಯಕ ಸಿ.ಎಂ.ಸ್ವಾಮಿ ಎಂಬುವವರನ್ನು ಎಸಿಬಿ ಬಂಧಿಸಿದ್ದು ಇವರು ನಿವೇಶನ ನೊಂದಣಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಬೆಂಗಳೂರು ನಿವಾಸಿಯೊಬ್ಬರು ಕೋಲಾರದ ವೇಮಗಲ್‌ನಲ್ಲಿ ನಿರ್ಮಿಸಿರುವ ಇಂಡಸ್ಟ್ರೀಯಲ್ ಎಸ್ಟೇಟ್‌ನಲ್ಲಿ ತಮಗೆ ಮಂಜೂರಾಗಿದ್ದ ನಿವೇಶನವನ್ನು ನೊಂದಣಿ ಮಾಡಿಸಿಕೊಳ್ಳಲಿಕ್ಕಾಗಿ ಅಗತ್ಯ ದಾಖಲಾತಿಗಳ ಮಾಹಿತಿ ನೀಡಲು ಕೆಐಎಡಿಬಿ ಕಚೇರಿಗೆ ಭೇಟಿ ಕೊಟ್ಟಿದ್ದಾರೆ.  ಆ ವೇಳೆ ಸಹಾಯಕ ಕಾರ್ಯದರ್ಶಿ ಶೀಲಾ ಹಾಗೂ ಸ್ವಾಮಿ ಅವರಿಂದ ಲಂಚ ಸ್ವೀಕರಿಸಿದ್ದಾರೆ.

ಹಾಗೆ ಲಂಚದ ಹಣ ಸ್ವೀಕರಿಸುವಾಗಲೇ ಎಸಿಬಿ ಅಧಿಕಾರಿಗಳು ದಾಳಿ ಂಆಡಿದ್ದು ಇವರಿಬ್ಬರನ್ನು ಬಂಧಿಸಿ ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com