ಮಂಗಳೂರಿನಲ್ಲಿ ದರೋಡೆ: 2 ಆಫ್ಘನ್ ಪ್ರಜೆಗಳು ಸೇರಿ ಮೂವರ ಬಂಧನ

ಮಂಗಳೂರಿನ ಭವಂತಿ ಸ್ಟ್ರೀಟ್'ನ ಅರುಣ್ ಜ್ಯುವೆಲ್ಲರಿ ಸ್ಟೋರ್ಸ್ ನಲ್ಲಿ ಸೆ.2ರ ತಡರಾತ್ರಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಫ್ಘಾನಿಸ್ತಾನದ ಇಬ್ಬರು ಪ್ರಜೆಗಳು ಸೇರಿ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಮಂಗಳೂರಿನ ಭವಂತಿ ಸ್ಟ್ರೀಟ್'ನ ಅರುಣ್ ಜ್ಯುವೆಲ್ಲರಿ ಸ್ಟೋರ್ಸ್ ನಲ್ಲಿ ಸೆ.2ರ ತಡರಾತ್ರಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಫ್ಘಾನಿಸ್ತಾನದ ಇಬ್ಬರು ಪ್ರಜೆಗಳು ಸೇರಿ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. 

ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಈ ಕುರಿತು ಮಾಹಿತಿ ನೀಡಿದ್ದರು. ಪ್ರಕರಣದ ಪ್ರಮುಖ ಆರೋಪಿ ಕೇರಳ ಮೂಲಕ ಕುಖ್ಯಾತ ಕ್ರಿಮಿನಲ್ ಮುತ್ತಸ್ಸಿಮು ಸಿಎಂ ಅಲಿಯಾಸ್ ತಸ್ಲಿಂ (39) ಹಾಗೂ ಆಫ್ಘಾನಿಸ್ತಾನದ ವಲಿ ಮುಹಮ್ಮದ್ ಸಫಿ ಅಲಿಯಾಸ್ ಸಫಿ (45), ಮುಹಮ್ಮದ್ ಆಝೀಮ್ ಖುರಂ ಅಲಿಯಾಸ್ ಅಜೀಮ್ (25) ಬಂಧಿತರು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 12 ದಿನಗಳ ಪೊಲೀಸ್ ವಶಕ್ಕೆ ಪಡೆಯಲಾಗಿದೆ. 

ಕೇರಳದಲ್ಲಿ ಸೆ.23ರಂದು ಈ ಮೂವರುನ್ನು ಬಂಧಿಸಲಾಗಿದೆ. ರೂ.1 ಕೋಟಿ ಮೌಲ್ಯದ 2.8 ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 

ಪ್ರಕರಣದಲ್ಲಿ ಆಫ್ಘನ್ ಮೂಲದ ಮತ್ತೋರ್ವ ಕ್ರಿಮಿನಲ್ ಸೇರಿದಂತೆ ಇಬ್ಬರು ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಬಂಧಿತ ಪ್ರಮುಖ ಆರೋಪಿ ಕಾಸರಗೋಡಿನ ಮುತ್ತಸ್ಸಿಮು ಸಿಎಂ ಅಲಿಯಾಸ್ ತಸ್ಲಿಂಗೆ ಭೂಗತ ಜಗತ್ತಿನ ಜೊತೆಗೆ ನಂಟು ಹೊಂದಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಆಫ್ಘಾನ್ ಇಬ್ಬರು ಅಂತರಾಷ್ಟ್ರೀಯ ವೃತ್ತಿಪರ ಕ್ರಿಮಿನಲ್ ಗ್ಯಾಂಗ್'ನವರಾಗಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com