ಕಸದಿಂದ ರಸ: ಏರ್'ಪೋರ್ಟ್'ನಲ್ಲಿ ರಸ್ತೆಯಾಗಿ ನಿರ್ಮಾಣವಾಗುತ್ತಿದೆ ಪ್ಲಾಸ್ಟಿಕ್ ರಸ್ತೆ

ಕಸದಿಂದ ರಸ ತೆಗೆಯುವುದನ್ನು ಕೇಳಿದ್ದೇವೆ. ಇದನ್ನೇ ಬಳಸಿಕೊಂಡು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ರಸ್ತೆಗಳ ಡಾಂಬರಿಗೆ ಪ್ಲಾಸ್ಟಿಕ್ ಗಳನ್ನು ಚಿನ್ನದಂತೆ ಬಳಕೆ ಮಾಡಲು ಮುಂದಾಗಿದೆ. 
ಚಿನ್ನವಾಯ್ತು ಕಸ: ಏರ್'ಪೋರ್ಟ್'ನಲ್ಲಿ ರಸ್ತೆಯಾಗಿ ನಿರ್ಮಾಣವಾಗುತ್ತಿದೆ ಪ್ಲಾಸ್ಟಿಕ್
ಚಿನ್ನವಾಯ್ತು ಕಸ: ಏರ್'ಪೋರ್ಟ್'ನಲ್ಲಿ ರಸ್ತೆಯಾಗಿ ನಿರ್ಮಾಣವಾಗುತ್ತಿದೆ ಪ್ಲಾಸ್ಟಿಕ್

ದೇವನಹಳ್ಳಿ: ಕಸದಿಂದ ರಸ ತೆಗೆಯುವುದನ್ನು ಕೇಳಿದ್ದೇವೆ. ಇದನ್ನೇ ಬಳಸಿಕೊಂಡು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ರಸ್ತೆಗಳ ಡಾಂಬರಿಗೆ ಪ್ಲಾಸ್ಟಿಕ್ ಗಳನ್ನು ಚಿನ್ನದಂತೆ ಬಳಕೆ ಮಾಡಲು ಮುಂದಾಗಿದೆ. 

ದೇವನಹಳ್ಳಿ ಬಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎಲ್ಲಾ ರಸ್ತೆಗಳಿಗೆ ಹಳೇ ಪ್ಲಾಸ್ಟಿಕ್ ಮಿಶ್ರಣ ಬಳಸಿಕೊಂಡು ಡಾಂಬರ್ ರಸ್ತೆ ಮಾಡಲು ಸಂಸ್ಥೆ ನಿರ್ಧರಿಸಿದೆ. 

ವಿಮಾನ ನಿಲ್ದಾಣದ ರಸ್ತೆಗಳನ್ನು ಹಳೆ ಪ್ಲಾಸ್ಟಿಕ್ ಮಿಶ್ರಣದ ಡಾಂಬರೀಕರಣ ಮಾಡುತ್ತಿದ್ದು, ಇದಕ್ಕೆ ಐಟಿಸಿ ಕಂಪನಿ ಹಾಗೂ ಬಿಬಿಎಂಪಿಯವರು ಸಹಕಾರ ನೀಡುತ್ತಿದ್ದಾರೆಂಮದು ಉಪಾಧ್ಯಕ್ಷ ಸುಂದರ್ ಚಂದ್ರಮೌಳಿ ತಿಳಿಸಿದ್ದಾರೆ. 

ಶಾಲೆಗಳ ಮಕ್ಕಳಿಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಹಳೇ ಪ್ಲಾಸ್ಟಿಕ್ ಸಂಗ್ರಹಣಾ ಅಭಿಯಾನ ಆರಂಭಿಸಲಾಗಿದೆ. ಯಾವುದೇ ರೀತಿಯ ಹಳೇ ಪ್ಲಾಸ್ಟಿಕ್ ಗಳನ್ನು ಬಿಐಎಎಲ್'ಗೆ ನೀಡಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಸಿವಿಲ್ ಎಂಜಿನಿಯರ್ ಡಾ.ಕಿರಣ್ ಎಂಬುವವರು ಮಾತನಾಡಿ, ಡಾಂಬರಿನೊಂದಿಗೆ ಹಳೇ ಪ್ಲಾಸ್ಟಿಕ್ ಮಿಶ್ರಣ ಮಾಡಿದರೆ, ರಸ್ತೆಗಳಲ್ಲಿ ಗುಂಡಿಗಳು ಬೀಳುವುದಿಲ್ಲ. ಮೊದಲ ಹಂತದಲ್ಲಿ 50 ಕಿಮೀ ರಸ್ತೆ ನಿರ್ಮಾಣವಾಗಲಿದೆ. 1 ಕಿಮೀ ರಸ್ತೆಗೆ 1 ಟನ್ ಹಳೇ ಪ್ಲಾಸ್ಟಿಕ್ ಬಳಸಲಾಗುವುದು. ಡಾಂಬರ್ ಮಿಶ್ರಣದೊಂದಿಗೆ 150 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಕಾಯಿಸಿ ರಸ್ತೆಯ ಮೇಲೆ ಹರಡುವ ಮುನ್ನ ಶೇ.6-8ರಷ್ಟು ಪುಡಿ ಪ್ಲಾಸ್ಟಿಕನ್ನು ಮಿಶ್ರಣ ಮಾಡಲಾಗುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com