ಉಡುಪಿ- ಮಂಗಳೂರು ಬಸ್ಸಿನಲ್ಲಿ ಜಾಗವಿಲ್ಲದೆ ನೇತಾಡುತ್ತಾ ತೆರಳಿದ ಪ್ರಯಾಣಿಕರು! 

ಉಡುಪಿ- ಮಂಗಳೂರು ಮಾರ್ಗದ ಖಾಸಗಿ ಬಸ್ ವೊಂದರಲ್ಲಿ ಜಾಗವಿಲ್ಲದೆ  ಬಸ್ಸಿನ ಹಿಂಭಾಗ ಹಾಗೂ ಮುಂಭಾಗ  ನೇತಾಡುತ್ತಾ ಪ್ರಯಾಣಿಕರು ತೆರಳಿರುವ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನೇತಾಡುತ್ತಿರುವ ಪ್ರಯಾಣಿಕರು
ನೇತಾಡುತ್ತಿರುವ ಪ್ರಯಾಣಿಕರು

ಉಡುಪಿ:  ಉಡುಪಿ- ಮಂಗಳೂರು ಮಾರ್ಗದ ಖಾಸಗಿ ಬಸ್ ವೊಂದರಲ್ಲಿ ಜಾಗವಿಲ್ಲದೆ  ಬಸ್ಸಿನ ಹಿಂಭಾಗ ಹಾಗೂ ಮುಂಭಾಗ  ನೇತಾಡುತ್ತಾ ಪ್ರಯಾಣಿಕರು ತೆರಳಿದ್ದಾರೆ.

ಉಡುಪಿಯಿಂದ ಮಂಗಳೂರಿಗೆ ಪ್ರಯಾಣಿಸಲು ಒಂದೂವರೆ ತಾಸು ಬೇಕಾಗುತ್ತದೆ. ಆದರೆ, ಕಳೆದ ವಾರ 18 ಪ್ರಯಾಣಿಕರು ಖಾಸಗಿ ಬಸ್ಸಿನ ವಿವಿಧ ಕಡೆಗಳಲ್ಲಿ ಅಂಟಿಕೊಂಡ ರೀತಿಯಲ್ಲಿ ನಿಂತು ಪ್ರಯಾಣಿಸಿದ್ದಾರೆ. ಈ ಬಸ್ಸಿನ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಲ ಪ್ರಯಾಣಿಕರು ಪುಟ್ ಬೋರ್ಡಿನಲ್ಲಿ ನಿಂತಿದ್ದರೆ ಮತ್ತೆ ಕೆಲವರು ಬಸ್ಸಿನ ಹಿಂಭಾಗದಲ್ಲಿ ನೇತಾಡಿಕೊಂಡು ಹೋಗಿದ್ದಾರೆ.ರಾತ್ರಿ 9-35 ಕ್ಕೆ ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಇದಾಗಿದೆ. ಇದನ್ನು ಬಿಟ್ಟರೆ ರಾತ್ರಿ 10-15ಕ್ಕೆ ಮತ್ತೊಂದು ಬಸ್ ಇದ್ದಿತ್ತು ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಆದಾಗ್ಯೂ, ಅಂದು ಕೊನೆಯ ಬಸ್ ರದ್ದುಗೊಂಡಿದ್ದ ಹಿನ್ನೆಲೆಯಲ್ಲಿ ಇದರ ಬಗ್ಗೆ ಮೊದಲೇ ತಿಳಿದ ಬಹುತೇಕ ಪ್ರಯಾಣಿಕರು ಈ ರೀತಿಯಲ್ಲಿ ಬಸ್ ನಲ್ಲಿ ನೇತಾಡಿಕೊಂಡು ಮಂಗಳೂರಿಗೆ ತೆರಳಿದ್ದಾರೆ. 

ಈ ಸಂಬಂಧ ಬಸ್ ಚಾಲಕ ಶೈಲೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನ ಲೈಸೆನ್ಸ್ ರದ್ದುಪಡಿಸಲಾಗಿದೆ. ಬಸ್ ಮಾಲೀಕರಿಗೆ ಕೋರ್ಟ್ ನೋಟಿಸ್ ನೀಡಲಾಗಿದೆ. ಅಲ್ಲದೇ 13. 500 ರೂಪಾಯಿಯನ್ನು ದಂಡ ಕಟ್ಟಿದ್ದಾರೆ. ಪೊಲೀಸರಿಂದ ಆ ಬಸ್ಸನ್ನು ವಶಕ್ಕೆ ಪಡೆಸಲಾಗಿದೆ ಎಂದು ಉಡುಪಿ ಎಸ್ ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com