ಬೆಂಗಳೂರಿನ ಶೇ.60ರಷ್ಟು ಮಹಿಳೆಯರು, ಯುವಕರು ಸಂತೋಷದಲ್ಲಿದ್ದಾರೆ: ಸಂಶೋಧನೆ

ರಾಜ್ಯ ರಾಜಾಧಾನಿ, ಉದ್ಯಾನನಗರಿ ಬೆಂಗಳೂರು ದಿನದಿಂದ ದಿನಕ್ಕೆ ಎತ್ತರಕ್ಕೆ ಬೆಳೆಯುತ್ತಿದ್ದು, ನಗರದಲ್ಲಿರುವ ಶೇ.60ರಷ್ಟು ಯುವ ಜನತೆ ಹಾಗೂ ಮಹಿಳೆಯರು ಸಂತೋಷದಲ್ಲಿದ್ದಾರೆಂದು ಸಂಶೋಧನೆಯೊಂದು ತನ್ನ ವರದಿಯಲ್ಲಿ ತಿಳಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ರಾಜಾಧಾನಿ, ಉದ್ಯಾನನಗರಿ ಬೆಂಗಳೂರು ದಿನದಿಂದ ದಿನಕ್ಕೆ ಎತ್ತರಕ್ಕೆ ಬೆಳೆಯುತ್ತಿದ್ದು, ನಗರದಲ್ಲಿರುವ ಶೇ.60ರಷ್ಟು ಯುವ ಜನತೆ ಹಾಗೂ ಮಹಿಳೆಯರು ಸಂತೋಷದಲ್ಲಿದ್ದಾರೆಂದು ಸಂಶೋಧನೆಯೊಂದು ತನ್ನ ವರದಿಯಲ್ಲಿ ತಿಳಿಸಿದೆ. 

ಸುಸ್ಥಿರ ಅಭಿವೃದ್ಧಿ ಕೇಂದ್ರ (ಸೆಂಟರ್ ಫಾರ್ ಸಸ್ಟೇನಬಲ್ ಡೆವಲಪ್'ಮೆಂಟ್) ಎಂಬ ನಗರ ಮೂಲದ ಎನ್'ಜಿಒ ಸಂಸ್ಥೆಯೊಂದು ಬೆಂಗಳೂರು 'ಸ್ಟೇಟ್ ಆಫ್ ಹ್ಯಾಪಿನೆಸ್ ರಿಪೋರ್ಟ್' ತಯಾರಿಸಿದ್ದು, ವರದಿಯಲ್ಲಿ ಶೇ.60ರಷ್ಟು ಮಹಿಳೆಯರು ಹಾಗೂ ಯುವಜನತೆ ನಗರದಲ್ಲಿ ಸಂತಸದಲ್ಲಿದ್ದಾರೆಂದು ತಿಳಿಸಿದೆ. 

ಸಮೀಕ್ಷೆಯನ್ನು ಆನ್'ಲೈನ್ ಹಾಗೂ ಆಫ್'ಲೈನ್ ಎರಡರಲ್ಲೂ ನಡೆಸಿದ್ದು, ಒಟ್ಟು 1,800 ನಗರವಾಸಿಗಳ ಪ್ರತಿಕ್ರಿಯೆಯನ್ನು ಸಂಗ್ರಹಿಸಲಾಗಿದೆ. ಆರ್ಥಿಕತೆ, ಸಾಮಾಜಿಕತೆ, ಮೂಲಭೂತ ಸೌಕರ್ಯಗಳಾದ ಶಾಲೆ, ಆಸ್ಪತ್ರೆ, ಸಾರಿಗೆ ಹಾಗೂ ವೈಯಕ್ತಿಯ ಮಾಹಿತಿಗಳ ಕುರಿತು ನಗರ ಜನತೆಯಲ್ಲಿ ಪ್ರಶ್ನೆಗಳನ್ನು ಕೇಳಿ, ಪ್ರತಿಕ್ರಿಯೆ ಪಡೆಯಲಾಗಿದೆ. 

ಶೇ.60ರಷ್ಟು 35-44 ವಯಸ್ಸಿನ ಮಹಿಳೆಯರು, 18-25 ವಯಸ್ಸಿನ ಯುವಕರು ನಗರದಲ್ಲಿ ಸಂತೋಷದಲ್ಲಿ ಜೀವನ ನಡೆಸುತ್ತಿದ್ದಾರೆ. ಮಧ್ಯಮ ಆದಾಯವುಳ್ಳವರು, ವಿವಾಹಿತ ಜನರು, ಸ್ವತಂತ್ರವಾಗಿ ಉದ್ಯೋಗ ಮಾಡುತ್ತಿರುವವರು, ಕುಟುಂಬದಿಂದ ಬಂದ ಆರ್ಥಿಕ ಬಲ ಹಾಗೂ ಬೆಂಬಲವಿರುವ ಜನರು ನಗರದಲ್ಲಿ ಅತೀ ಹೆಚ್ಚು ಸಂತೋಷದಲ್ಲಿದ್ದಾರೆಂದು ಸಿಎಸ್'ಡಿ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಆರ್.ಶ್ರೀನಿವಾಸ್ ಹೇಳಿದ್ದಾರೆ. 

2018ರ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುವುದಕ್ಕೂ ಮುನ್ನವೇ ಸಮೀಕ್ಷೆಯನ್ನು ನಡೆಸಲಾಗಿತ್ತು. ಆದರೆ, ಸಂತೋಷದ ಮಟ್ಟವು ಜನರ ಮತದಾನದ ಮಾದರಿಯ ಮೇಲಾಗಲೀ ಅಥವಾ ಅವರು ಮತ ಚಲಾಯಿಸಿದವರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಎಂಬುದನ್ನು ನಾವು ವರದಿಯಲ್ಲಿ ಕಂಡುಕೊಂಡಿದ್ದೇವೆ. ಸರ್ಕಾರದ ಆಡಳಿತ ಮೇಲಾಗಲೀ ಅಥವಾ ಆರ್ಥಿಕತೆಯ ಮೇಲೆ ಜನರು ಬೇಸರಗೊಂಡಿದ್ದರೂ. ಅದರು ಅವರ ಮತದಾನದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ. 

ವೈಯಕ್ತಿಕ (ಶೇ.35.1), ಸಾಮಾಜಿಕ ಅಂಶಗಳಾದ ಶಿಕ್ಷಣ, ಆರೋಗ್ಯ, ಸಾರಿಗೆಯಲ್ಲಿ (26.1), ಆರ್ಥಿಕತೆ (ಶೇ.7.9), ಆಡಳಿತ (15.4) ಜನರ ಸಂತೋಷವನ್ನು ಕಡಿಮೆ ಮಾಡುತ್ತದೆ. ಶೇ.60ರಲ್ಲಿ ಶೇ.74ರಷ್ಟು ಜನರು ಸಂತೋಷದಲ್ಲಿದ್ದಾರೆ. ಶೇ.26ರಷ್ಟು ಮಂದಿ ಅತ್ಯಂತ ಸಂತೋಷದಲ್ಲಿದ್ದಾರೆಂಬುದು ವರದಿಯಲ್ಲಿ ತಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com