ಆನೆ ಸಂಘರ್ಷ ಕಾರ್ಯಾಚರಣೆಯಲ್ಲಿ ಕರ್ನಾಟಕ ಬೆಸ್ಟ್; ಪರಿಸರ ಸಚಿವಾಲಯ ಶ್ಲಾಘನೆ 

ಆನೆಗಳ ಸಂತತಿಗೆ ಮಾತ್ರವಲ್ಲದೆ ಆನೆಗಳ ಸಂಘರ್ಷ ಹತ್ತಿಕ್ಕುವಲ್ಲಿ ಕೂಡ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಅನುಭವಿ ಸಿಬ್ಬಂದಿ, ಪಶುವೈದ್ಯರು, ಮಾವುತ ಮತ್ತು ಕಾವಾಡಿಗಳ ಪರಿಣತಿಯಿಂದಾಗಿ ಇದು ಸಾಧ್ಯವಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆನೆಗಳ ಸಂತತಿಗೆ ಮಾತ್ರವಲ್ಲದೆ ಆನೆಗಳ ಸಂಘರ್ಷ ಹತ್ತಿಕ್ಕುವಲ್ಲಿ ಕೂಡ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಅನುಭವಿ ಸಿಬ್ಬಂದಿ, ಪಶುವೈದ್ಯರು, ಮಾವುತ ಮತ್ತು ಕಾವಾಡಿಗಳ ಪರಿಣತಿಯಿಂದಾಗಿ ಇದು ಸಾಧ್ಯವಾಗಿದೆ. 


ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಕರ್ನಾಟಕ ರಾಜ್ಯದಲ್ಲಿ ಆನೆಗಳ ಸಂಘರ್ಷಗಳನ್ನು ತಗ್ಗಿಸುವ ಕ್ರಮ ದೇಶದಲ್ಲಿಯೇ ಉತ್ತಮವಾಗಿದೆ ಎಂದು ಹೇಳಿದೆ.ಮಾನವ-ಆನೆ ಸಂಘರ್ಷವನ್ನು ಎದುರಿಸುವ ಕುರಿತು ರಾಷ್ಟ್ರೀಯ ಪ್ರಾಣಿ ಯೋಜನೆ ಅಖಿಲ ಭಾರತ ಮನುಷ್ಯ-ಪ್ರಾಣಿ ಸಂಘರ್ಷ ಕೈಪಿಡಿಯನ್ನು ಕೇಂದ್ರ ಪರಿಸರ ಇಲಾಖೆ ಬಿಡುಗಡೆ ಮಾಡಿದ್ದು ಅದರಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.


ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕ ಸಂಜಯ್ ಮೋಹನ್, ಎಲ್ಲಾ ರಾಜ್ಯಗಳ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಇತ್ತೀಚೆಗೆ ನಡೆಯಿತು. ಅದರಲ್ಲಿ ಆಯಾ ರಾಜ್ಯಗಳಲ್ಲಿ ಆನೆಗಳ ಸಂಘರ್ಷ ಹತ್ತಿಕ್ಕಲು ಅನುಸರಿಸುವ ಉತ್ತಮ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು. ಕರ್ನಾಟಕದ ವಿಧಾನ ಅಧಿಕಾರಿಗಳಿಗೆ ಇಷ್ಟವಾಯಿತು. ಉತ್ತರ ಪ್ರದೇಶದಲ್ಲಿ 20 ದಿನಗಳಲ್ಲಿ 6 ಮಂದಿಯನ್ನು ಕೊಂದು ಹಾಕಿದ ಎರಡು ಆನೆಗಳನ್ನು ಕಾಡಿಗೆ ಓಡಿಸುವಲ್ಲಿ ಕರ್ನಾಟಕದ ಮಾದರಿಯನ್ನು ಅಳವಡಿಸಿ ಯಶಸ್ಸು ಕಂಡಿದ್ದರು. 1965ರ ನಂತರ ಉತ್ತರ ಪ್ರದೇಶದಲ್ಲಿ ಕಬ್ಬಿನ ಗದ್ದೆಗೆ ಆನೆಗಳು ನುಗ್ಗಿದ್ದವು ಎಂದರು.


ಉತ್ತರ ಪ್ರದೇಶಕ್ಕೆ ಕರ್ನಾಟಕದಿಂದ ನಾಲ್ಕು ಮಂದಿಯ ತಂಡವನ್ನು ಕಳುಹಿಸಲಾಗಿತ್ತು. ಅದರಲ್ಲಿ ಪಶು ವೈದ್ಯರು ಕೂಡ ಇದ್ದರು. ಮಾವುತ, ಸಿಬ್ಬಂದಿಗಳು ಆನೆಗಳನ್ನು ಪತ್ತೆಹಚ್ಚಿ ಅರಣ್ಯಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com