ಬೆಂಗಳೂರು: ದಾರಿತಪ್ಪಿ ಬೇರೆ ಅಪಾರ್ಟ್‌ಮೆಂಟ್‌ಗೆ ನುಗ್ಗಲು ಯತ್ನಿಸಿದ ವ್ಯಕ್ತಿ, ದರೋಡೆ ಪ್ರಕರಣ ದಾಖಲು

ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ತನ್ನ ಸೋದರಿಯ ಅಪಾರ್ಟ್‌ಮೆಂಟ್‌ಗೆ ತೆರಳುವ ಬದಲು ಆಕಸ್ಮಿಕವಾಗಿ ಪಕ್ಕದ ಅಪಾರ್ಟ್‌ಮೆಂಟ್‌ಗೆ ಹೋಗಿರುವುದಲ್ಲದೆ ಅಲ್ಲಿನ ಸೆಕ್ಯುರಿಟಿ ಗಾರ್ಡ್‌ ಗಳೊಡನೆ ವಾವ್ಗಾದ ನಡೆಸಿ ಹಲ್ಲೆ ಮಾಡಿದ್ದು. ಅಪಾರ್ಟ್‌ಮೆಂಟ್‌ನಲ್ಲಿ ನಿಲ್ಲಿಸಿದ್ದ ಕಾರನ್ನು ಸಹ ಜಖಂ ಗೊಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Published: 30th September 2019 02:53 PM  |   Last Updated: 30th September 2019 02:53 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : The New Indian Express

ಬೆಂಗಳೂರು: ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ತನ್ನ ಸೋದರಿಯ ಅಪಾರ್ಟ್‌ಮೆಂಟ್‌ಗೆ ತೆರಳುವ ಬದಲು ಆಕಸ್ಮಿಕವಾಗಿ ಪಕ್ಕದ ಅಪಾರ್ಟ್‌ಮೆಂಟ್‌ಗೆ ಹೋಗಿರುವುದಲ್ಲದೆ ಅಲ್ಲಿನ ಸೆಕ್ಯುರಿಟಿ ಗಾರ್ಡ್‌ ಗಳೊಡನೆ ವಾವ್ಗಾದ ನಡೆಸಿ ಹಲ್ಲೆ ಮಾಡಿದ್ದು. ಅಪಾರ್ಟ್‌ಮೆಂಟ್‌ನಲ್ಲಿ ನಿಲ್ಲಿಸಿದ್ದ ಕಾರನ್ನು ಸಹ ಜಖಂ ಗೊಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇದೇ ವೇಳೆ ಹಲ್ಲೆನಡೆಸಿದ್ದ ವ್ಯಕ್ತಿಯ ಸೋದರಿ ಅಲ್ಲಿಗಾಗಮಿಸಿದ್ದಾರೆ ಆದರೆ ಆಕೆರಿ ತನ್ನ ಸಹೋದರನಿಗೆ ಸಹಾಯ ಮಾಡುವ ನೆಪದಲ್ಲಿ ಜನರ ಗುಂಪು ತನ್ನ ಚಿನ್ನದ ಸರ, ಐಫೋನ್ ಮತ್ತು ಸನ್ ಗ್ಲಾಸ್ ಗಳನ್ನು ದೋಚಿದೆ ಎಂದು ಆರೋಪಿಸಿದ್ದಾರೆ.

ಘಟನೆ ವಿವರ

ಸಂತ್ರಸ್ಥ ವ್ಯಕ್ತಿ  ಸುರೇಂದ್ರ (ಹೆಸರು ಬದಲಾಯಿಸಲಾಗಿದೆ), ಬೆಳ್ಳಂದೂರು ನಿವಾಸಿಯಾಗಿದ್ದು ಟ್ಯಾಕ್ಸಿ ಅಗ್ರಿಗೇಟರ್‌ ಒಂದರಲ್ಲಿ  ಹಣಕಾಸು ವಿಭಾಗದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾನೆ.ರಾತ್ರಿ 11.30 ರ ಸುಮಾರಿಗೆ ಸುರೇಂದ್ರ  ಕಸವನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ತಂಗಿದ್ದ ತನ್ನ ಸಹೋದರಿಯ ಮನೆಗೆ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಕಸವನಹಳ್ಳಿ ರಸ್ತೆಯಲ್ಲಿನ ಓನರ್ಸ್ ಕೋರ್ಟ್ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಾನೆ.ಸೆಕ್ಯುರಿಟಿ ಗಾರ್ಡ್‌ಗಳು ಅವನನ್ನು ತಡೆದಾಗ, ಸುರೇಂದ್ರ ತೀವ್ರ ವಾಗ್ವಾದಕ್ಕೆ ಇಳಿದಿದ್ದು ಭದ್ರತಾ ಸಿಬಂದಿಗಳನ್ನು ನಿಂದಿಸಿ ಹೊಡೆಯಲು ಮುಂದಾಗಿದ್ದಾನೆ.

ಅದೇ ವೇಳೆ ಅಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ಕಾರಿನ ರಿಯರ್ ವ್ಯೂ ಮಿರರ್ ಹಾಗೂ ಗಾಜನ್ನು ಸಹ ಹಾನಿಗೊಳಿಸಿದ್ದಾನೆ.ಅಪಾರ್ಟ್‌ಮೆಂಟ್‌ ಎದುರು ಕಾವಲುಗಾರರು ಹಾಗೂ ಸುರೇಂದ್ರ ನಡುವೆ ನಡೆದ ಜಗಳಕ್ಕೆ ಸಾಕ್ಷಿಯಾದ  ಕೆಲವು ಕ್ಯಾಬ್ ಚಾಲಕರು ಸ್ಥಳಕ್ಕೆ ಧಾವಿಸಿದರು. ಸುರೇಂದ್ರ ಅವರನ್ನು ನಿಂದಿಸಿಹಲ್ಲೆಗೈದಿದ್ದಾರೆ.ಅಪಾರ್ಟ್‌ಮೆಂಟ್‌ ಭದ್ರತಾ ಸಿಬ್ಬಂದಿ ಹಿರಿಯರನ್ನು ಎಚ್ಚರಿಸಿದ್ದಾರೆ ಮತ್ತು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಆಗ ಹೊಯ್ಸಳ ಪೆಟ್ರೋಲಿಂಗ್ ವಾಹನ ಆಗಮಿಸಿ ಸುರೇಂದ್ರನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದೆ.

ಬೆಳ್ಳಂದೂರು  ಪೊಲೀಸ್ ಠಾಣೆಯ ತನಿಖಾಧಿಕಾರಿಯೊಬ್ಬರು, “ನಾವು ಐಪಿಸಿ ಸೆಕ್ಷನ್ 392 ರ ಅಡಿಯಲ್ಲಿ ದರೋಡೆ ಪ್ರಕರಣವನ್ನು ದಾಖಲಿಸಿದ್ದು  ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಲು ಅಪಾರ್ಟ್‌ಮೆಂಟ್‌ ನಿರ್ವಾಹಕರಿಗೆ ಕೇಳಿದ್ದೇವೆ" ಎಂದಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp