ಕೋಟೇಶ್ವರದಿಂದ ಕುಕ್ಕೆಗೆ ಹೊರಟ ಬ್ರಹ್ಮರಥ, ಮಾರ್ಗದುದ್ದಕ್ಕೂ ಸ್ವಾಗತ, ವಿಶೇಷ ಪೂಜೆ

ವಿಶ್ವಖ್ಯಾತಿಯ ಯಾತ್ರಾಸ್ಥಳ ಕುಕ್ಕೆ ಸುಬ್ರಮಣ್ಯಕ್ಕಾಗಿ ನಿರ್ಮಾಣವಾಗಿರುವ ನೂತನ ಬ್ರಹ್ಮರಥವು ಸೋಮವರ ಕುಂದಾಪುರದ ಕೋಟೇಶ್ವರದಿಂದ ಹೊರಟಿದೆ. 

Published: 30th September 2019 08:12 PM  |   Last Updated: 30th September 2019 08:14 PM   |  A+A-


ಬ್ರಹ್ಮರಥ

Posted By : Raghavendra Adiga
Source : Online Desk

ಕುಂದಾಪುರ: ವಿಶ್ವಖ್ಯಾತಿಯ ಯಾತ್ರಾಸ್ಥಳ ಕುಕ್ಕೆ ಸುಬ್ರಮಣ್ಯಕ್ಕಾಗಿ ನಿರ್ಮಾಣವಾಗಿರುವ ನೂತನ ಬ್ರಹ್ಮರಥವು ಸೋಮವರ ಕುಂದಾಪುರದ ಕೋಟೇಶ್ವರದಿಂದ ಹೊರಟಿದೆ. 

ಕೋಟೇಶ್ವರದ ರಥ ಶಿಲ್ಪಿ ರಾಷ್ಟ್ರ ಪ್ರಶಸ್ತಿ ವಿಜೇತರಾದ ಲಕ್ಶ್ಮಿನಾರಾಯಣ ಆಚಾರ್ಯಾವರ ಗ್ಯಾಲರಿಯಿಂದ ದೊಡ ಟ್ರ್ಯಾಲಿಯಲ್ಲಿ ರಥವನ್ನು ಸಾಗಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ , ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಸೇರಿದಂತೆ ಶ್ರೀ ಕ್ಷೇತ್ರ ಸುಬ್ರಮಣ್ಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಡನೆ ಬ್ರಹ್ಮರಥದ ಸಾಗಾಟ ವಾಹನಕ್ಕೆ ಚಾಲನೆ ನೀಡಲಾಗಿದೆ.

ಕುಕ್ಕೆ ಸುಬ್ರಮಣ್ಯದ ಬ್ರಹ್ಮರಥ ಅತ್ಯಂತ ಹಳೆಯದಾಗಿದ್ದು ಜೀರ್ಣಾವಸ್ಥೆ ತಲುಪಿದ ಕಾರಣ ಹೊಸ ಬ್ರಹ್ಮರಥ ನಿರ್ಮಾಣಕ್ಕಾಗಿ ದೇವಾಲಯ ಮಂಡಳಿ ತೀರ್ಮಾನಿಸಿತ್ತು.

ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಮತ್ತು ಉದ್ಯಮಿ ಅಜಿತ್ ಶೆಟ್ಟಿಯವರು ಈ ರಥದ ನಿರ್ಮಾಣದ ಹೊಣೆ ಹೊತ್ತಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮುತ್ತಪ್ಪ ರೈ ಪತ್ನಿ ಅನುರಾಧಾ ಮುತ್ತಪ್ಪ ರೈ "ಸುಬ್ರಮಣ್ಯ ದೇವರಿಗೆ ಬ್ರಹ್ಮರಥ ಅರ್ಪಣೆ ಮಾಡುವ ಅವಕಾಶ ನಮಗೆ ಸಿಕ್ಕಿದ್ದು ದೇವರು ನಮ್ಮ ಪಾಲಿಗೆ ದೊರಕಿಸಿದ ದೊಡ್ಡ ಸೇವೆ. ಕೋಟ್ಯಾಂತರ ಭಕ್ತರಲ್ಲಿ ಒಬ್ಬರಿಗಷ್ಟೇ ದೇವರು ನಿಡುವ ವಿಶೇಷ ವರಪ್ರಸಾದವಿದು" ಎಂದಿದ್ದಾರೆ.

ರಥ ಸಾಗಿಸುವ ವಾಹನದ ಸಂಪೂರ್ಣ ವೆಚ್ಚವನ್ನು ಮಾಜಿ ಸಚಿವರಾದ ನಾಗರಾಜ ಶೆಟ್ಟಿ ಹಾಗೂ ಉದ್ಯಮಿ ಗಣೇಶ್ ಶೆಟ್ಟಿ ಹೊತ್ತಿದ್ದಾರೆ.

ಸೋಮವಾರ ಕುಂದಾಪುರದ ಕೋಟೇಶ್ವರದಿಂದ ಹೊರಟ ರಥ ಉಡುಪಿ, ಮುಲ್ಕಿ ಮಾರ್ಗವಾಗಿ ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ತಲುಪಲಿದೆ. ಮಂಗಳವಾರ ಬೆಳಿಗ್ಗೆ ಅಲ್ಲಿಂದ ಹೊರಟು ಸಂಜೆ ಕಡಬಕ್ಕೆ ತಲುಪಲಿದ್ದು ಬುಧವಾರ ಕಡಬದಿಂದ ಮೆರವಣಿಗೆ ಹಾಗೂ ವಿಶೇಷ ಜಾಥಾ ಮೂಲಕ ಸಾಗಿ ಸಂಜೆ ನಾಲ್ಕರ ವೇಳೆಗೆ ಕುಕ್ಕೆ ಸುಬ್ರಮಣ್ಯ ಸೇರಲಿದೆ.

 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp