ಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಶ್ನಿಸಿದ ಪಿಎಸ್ ಐ ಮೇಲೆ ಹಲ್ಲೆ

ಕರ್ತವ್ಯನಿರತ ಪೋಲೀಸರ ಮೇಲೆ ಹಲ್ಲೆ ನಡೆಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ವ್ಯಾಪಕವಾಗುತ್ತಿದೆ.. ಬೊಮ್ಮನಹಳ್ಳಿ ಜಂಕ್ಷನ್‌ನಲ್ಲಿ ಶುಕ್ರವಾರ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಒಬ್ಬನನ್ನು ಹಿಡಿದ ನಂತರಟ್ರಾಫಿಕ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನನ್ನು ಐದು ಜನರ ಗುಂಪು ಥಳಿಸಿ ಹಲ್ಲೆ ನಡೆಸಿದೆ.

Published: 30th September 2019 03:26 PM  |   Last Updated: 30th September 2019 03:26 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : The New Indian Express

ಬೆಂಗಳೂರು: ಕರ್ತವ್ಯನಿರತ ಪೋಲೀಸರ ಮೇಲೆ ಹಲ್ಲೆ ನಡೆಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ವ್ಯಾಪಕವಾಗುತ್ತಿದೆ.. ಬೊಮ್ಮನಹಳ್ಳಿ ಜಂಕ್ಷನ್‌ನಲ್ಲಿ ಶುಕ್ರವಾರ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಒಬ್ಬನನ್ನು ಹಿಡಿದ ನಂತರಟ್ರಾಫಿಕ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನನ್ನು ಐದು ಜನರ ಗುಂಪು ಥಳಿಸಿ ಹಲ್ಲೆ ನಡೆಸಿದೆ.

ಸಂಚಾರಿ ನಿಯಮ ಉಲ್ಲಂಘಿಸಿದ ವ್ಯಕ್ತಿಯನ್ನು ಹಿಡಿದ ನಂತರ ಆತ ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆತಂದಿದ್ದಾನೆ. ಹಾಗೆಯೇ ಪೋಲೀಸ್ ಅಧಿಕಾರಿ ತಪ್ಪಿಸಿಕೊಳ್ಳುವ ಮುನ್ನ ಆತನ ಮೇಲೆ ಹಲ್ಲೆ ನಡೆದಿದೆ.

ಘಟನೆ ವಿವರ

ಪಿಎಸ್ ಐ  ಟಿ ಡಿ ಜಯರಾಮ್ ಅವರು ಸಲ್ಲಿಸಿದ ದೂರಿನ ಪ್ರಕಾರ - ಮಡಿವಾಳ ಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ.ಈ ವ್ಯಾಪ್ತಿಯಲ್ಲಿ ಜಯರಾಮ್ ಹಾಗೂ ಇನ್ನಿಬ್ಬರು ಕಾನ್‌ಸ್ಟೆಬಲ್‌ಗಳಾದ ಕಾಂತರಾಜ್ ಮತ್ತು ನಟರಾಜ್ ಅವರನ್ನು ಸಂಚಾರ ನಿಯಮ ಉಲ್ಲಂಘಿಸುವವರನ್ನು ಹಿಡಿಯಲು ನಿಯೋಜಿಸಲಾಗಿದೆ. ಮೂವರೂ ಶುಕ್ರವಾರ ಸಂಜೆ 6.35 ರ ಸುಮಾರಿಗೆ ಬೊಮ್ಮನಹಳ್ಳಿ ಜಂಕ್ಷನ್ ಬಳಿ ಇದ್ದಾಗ, ಒಬ್ಬ ವ್ಯಕ್ತಿಯು ದ್ವಿಚಕ್ರ ವಾಹನವ ಚಾಲನೆಯಲ್ಲಿದ್ದ ಆ ವೇಳೆ ಹಿಂಬದಿ ಸವಾರ ಹೆಲ್ಮೆಟ್ ಧರಿಸಿರಲಿಲ್ಲ. ಆ ಬೈಕ್ ಸವಾರ ಬೇಗೂರು ರಸ್ತೆ ಕಡೆ ಸಾಗುತ್ತಿದ್ದದ್ದನ್ನು ಕಂಡ ಕಾನ್‌ಸ್ಟೆಬಲ್‌ಗಳು ಬೈಕ್‌ ನಿಲ್ಲಿಸಿ ಸವಾರನಿಗೆ ತನ್ನ ಚಾಲನಾ ಪರವಾನಗಿಯನ್ನು ತೋರಿಸುವಂತೆ ಹೇಳಿದರು.

ಆ ಸಮಯದಲ್ಲಿ ತನ್ನನ್ನು ಗುರುಮೂರ್ತಿ ಎಂದು ಪರಿಚಯಿಸಿಕೊಂಡ ಸವಾರ ಜಯರಾಮ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ.ಸವಾರ ಡಿಎಲ್ ಮತ್ತು ಇತರ ದಾಖಲೆಗಳನ್ನು ಹೊಂದಿಲ್ಲ ಎಂದು ತಿಳಿದ ಜಯರಾಮ್, ತನ್ನ ವೈಯಕ್ತಿಕ ಡಿಜಿಟಲ್ ಅಸಿಸ್ಟೆಂಟ್ (ಪಿಡಿಎ) ಯಂತ್ರದಲ್ಲಿ ಬೈಕು ವಿವರಗಳನ್ನು ನಮೂದಿಸಿ ಗುರುಮೂರ್ತಿಗೆ ನೋಟಿಸ್ ನೀಡಿದ್ದಾನೆ.ಆಗಸ್ಟ್ 25 ರಿಂದ ಹಿಂದಿನ ದಂಡ ಬಾಕಿ ಇರುವುದನ್ನು ಗಮನಿಸಿದ ಜಯರಾಮ್ ಅವರಿಗೆ ನೋಟಿಸ್ ನೀಡಿದ್ದಾರೆ. ವ್ಯಕ್ತಿಯು ನೋಟೀಸ್ ಗೆ ಸಹಿ ಹಾಕಿದನು ಮತ್ತು ತನ್ನ ಸ್ನೇಹಿತನೊಡನೆ ಅಲ್ಲಿಂದ ತೆರಳಿದ್ದಾನೆ.ಆದರೆ ನಂತರ ಸಂಜೆ 7 ಗಂಟೆಗೆ ಪೊಲೀಸರು ಬೇಗೂರ್ ರಸ್ತೆಯ ಬಿಡಿ ಹೋಟೆಲ್ ಬಳಿ ಇದ್ದಾಗ ಇತರ ನಾಲ್ವರೊಂದಿಗೆ ಸ್ಥಳಕ್ಕೆ ಆಗಮಿಸಿದ ಗುರುಮೂರ್ತಿ ಮತ್ತೆ ಜಯರಾಮ್ ಬಳಿ ಜಗಳಕ್ಕೆ ನಿಂತಿದ್ದಾನೆ. ಆ ವೇಳೆ ಆತ  ಜಯರಾಮ್ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳಿಗೆ ಬೆದರಿಕೆ ಹಾಕಿದ್ದಾನೆ.ಅವರ ಮೊಬೈಲ್ ಫೋನ್‌ಗಳಲ್ಲಿ ವೀಡಿಯೊವನ್ನು ಸಹ ತೆಗೆದುಕೊಂಡಿದ್ದಾನೆ. ಆವೇಳೆ ಆ ಗುಂಪು ಪೋಲೀಸರ ಮೇಲೆ ಹಲ್ಲೆ ಮಾಡಿದೆ ಎಂದು ಆರೋಪಿಸಲಾಗಿದೆ.ಮತ್ತು ಕಾನ್‌ಸ್ಟೆಬಲ್‌ಗಳು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪೋಲೀಸರಿಗೆ ಮಾಹಿತಿ ನೀಡಿದಾಗ  ಆ ವ್ಯಕ್ತಿ ಹಾಗೂ ಗುಂಪು ಅಲ್ಲಿಂದ ಕಾಲ್ಕಿತ್ತಿದೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯರಾಮ್ ಬೊಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖಾ ಅಧಿಕಾರಿಯೊಬ್ಬರು, "ನಾವು ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ ಮತ್ತು ಹಲ್ಲೆಕೋರರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ಕಾನ್‌ಸ್ಟೆಬಲ್ ಗೆ ಕಚ್ಚಿದ ವಿದೇಶೀ ಮಹಿಳೆ

ಪ್ಟೆಂಬರ್ 26 ರಂದು ಮುಂಜಾನೆ 1.30 ಕ್ಕೆ ಬಾಣಸವಾಡಿ  ಪೊಲೀಸ್ ಕಾನ್‌ಸ್ಟೆಬಲ್ ಗೋವಿಂದಪ್ಪ ಅವರನ್ನು ನೈಜೀರಿಯಾದ ಮೂಲದ ಮಹಿಳೆ ಕಚ್ಚಿದ್ದಾರೆ. 

ಗೋವಿಂದಪ್ಪ, ಪ್ರೊಬೆಷನರಿ ಪಿಎಸ್‌ಐ ಜೊತೆಗೆ ಗಸ್ತು ತಿರುಗುತ್ತಿದ್ದಾಗ, ಕಮ್ಮನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಹೋಟೆಲ್ ಬಳಿ ಆಫ್ರಿಕನ್ ಪ್ರಜೆ ಿಂತಿದ್ದು ಗಮನಿಸಿದ್ದಾರೆ. ಅಲ್ಲಿರುವುದು ಆಕೆಗೆ ಸುರಕ್ಷಿತವಲ್ಲ ಎಂದರಿತ ಪೋಲೀಸರು  ಅವಳನ್ನು ಹೊರಹೋಗುವಂತೆ ಹೇಳಿದ್ದಾರೆ. ಆಗ ಆ ಮಹಿಳೆ ನನಗೆ ರಾತ್ರಿ ಹೊತ್ತು ಹೊರಗಿರಲು, ಯಾರನ್ನಾದರೂ ಭೇಟಿಯಾಗಲು ಆಸೆ ಇದೆ ಎಂದು ಹೇಳಿದ್ದಲ್ಲದೆ ಪೋಲೀಸರ ಮೇಲೆ ಕೂಗಾಡಿದ್ದಾಳೆ. ಆಗ ತೀವ್ರ ವಾಗ್ವಾದ ನಡೆದು ಮಹಿಳೆ ಗೋವಿಂದಪ್ಪನ ಕೈಯನ್ನು ಕಚ್ಚಿ ಅವನ ಮೇಲೆ ಹಲ್ಲೆ ಮಾಡಿದಳು. ಗಾಯಗೊಂಡ ಗೋವಿಂದಪ್ಪ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಮಹಿಳೆಯನ್ನು ಬಾಣಸವಾಡಿ ಪೋಲೀಸರು ಬಂಧಿಸಿದ್ದಾರೆ.

Stay up to date on all the latest ರಾಜ್ಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp