ಬೆಳಗಾವಿಯ 10, ಬೀದರ್ ನಲ್ಲಿ 26 ಮಂದಿಗೆ ಕ್ವಾರಂಟೈನ್: ಎಲ್ಲವೂ ನೆಗೆಟಿವ್

ಮಾರ್ಚ್ 17 ರಂದು ದೆಹಲಿಯ ನಿಜಾಮುದ್ದೂನ್ ದರ್ಗಾಕ್ಕೆ ತೆರೆಳಿದ್ದ ಬೆಳಗಾವಿಯ 10 ಹಾಗೂ ಬೀದರ್ ನ 26 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಅದರಲ್ಲಿ  ಒಂದು ಕೊರೋನಾ ಪಾಸಿಟಿವ್ ಬಂದಿಲ್ಲ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಮಾರ್ಚ್ 17 ರಂದು ದೆಹಲಿಯ ನಿಜಾಮುದ್ದೂನ್ ದರ್ಗಾಕ್ಕೆ ತೆರೆಳಿದ್ದ ಬೆಳಗಾವಿಯ 10 ಹಾಗೂ ಬೀದರ್ ನ 26 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಅದರಲ್ಲಿ  ಒಂದು ಕೊರೋನಾ ಪಾಸಿಟಿವ್ ಬಂದಿಲ್ಲ ಎಂದು ತಿಳಿದು ಬಂದಿದೆ.

ಗಂಟಲಿನ ಮಾದರಿ ಪರೀಕ್ಷೆ ಮಾಡಿದ್ದು ಬೆಳಗಾವಿ 10 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಬೆಳಗಾವಿ ಡಿಸಿ ಎಸ್ ಬಿ ಬೊಮ್ಮನಹಳ್ಳಿ ಹೇಳಿದ್ದಾರೆ. 15 ದಿನಗಳ ಹಿಂದೆ ಈ 10 ಮಂದಿ ದೆಹಲಿಯಿಂದ ವಾಪಸಾಗಿದ್ದರು ಎಂದು ತಿಳಿದು ಬಂದಿದೆ,

ದೆಹಲಿಗೆ ತೆರಳಿದ್ದ ಬೀಜರ್ ನ 15 ಮಂದಿಯ ಕಫದ ಪರೀಕ್ಷೆಯನ್ನು ಕಲಬುರಗಿ ಪ್ರಯೋಗಾಲಯದಲ್ಲಿನಡೆಸಲಾಗಿದ್ದು ಎಲ್ಲಾ ನೆಗೆಟಿವ್ ಬಂದಿದೆ. ಎರಡು ಬಾರಿ ಟೆಸ್ಟ್ ಮಾಡಿದಾಗಲೂ ಕೊರೋನಾ ನೆಗೆಟಿವ್ ಬಂದಿದೆ ಎಂದು ಬೀದರ್ ಡಿಸಿ ಮಹಾದೇವ್ ಹೇಳಿದ್ದಾರೆ, ದೆಹಲಿಗೆ ಪ್ರಯಾಣ ಮಾಡಿದ್ದವರ ವಿವರ ನೀಡುವಂತೆ ಬೀದರ್ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com