ಕೊವಿಡ್-19: ದೇಶೀಯ ವೆಂಟಿಲೇಟರ್ ತಯಾರಿಗೆ ಮುಂದಾದ ಐಐಎಸ್ ಸಿ ತಂಡ

ದೇಶದಲ್ಲಿ ಕೊರೋನಾ ವೈರಸ್ ಹಾವಳಿ ತಡೆಯಲು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ ಸಿ) ಎಲೆಕ್ಟ್ರೋ- ಮೆಕ್ಯಾನಿಕಲ್ ವೆಂಟಿಲೇಟರ್ ಸಿದ್ಧಪಡಿಸಲು ಮುಂದಾಗಿದೆ.

Published: 01st April 2020 06:15 PM  |   Last Updated: 01st April 2020 06:15 PM   |  A+A-


iisc1

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಬೆಂಗಳೂರು: ದೇಶದಲ್ಲಿ ಕೊರೋನಾ ವೈರಸ್ ಹಾವಳಿ ತಡೆಯಲು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ ಸಿ) ಎಲೆಕ್ಟ್ರೋ- ಮೆಕ್ಯಾನಿಕಲ್ ವೆಂಟಿಲೇಟರ್ ಸಿದ್ಧಪಡಿಸಲು ಮುಂದಾಗಿದೆ.

ಇದನ್ನು ರಷ್ಯಾ ಔಷಧಿ ಮತ್ತು ಆರೋಗ್ಯ ಸೇವಾ ಉತ್ಪನ್ನಗಳ ನಿಯಂತ್ರಣ ಏಜೆನ್ಸಿಯ ಮಾರ್ಗಸೂಚಿಯ ಅನುಸಾರ ದೇಶೀಯ ಉತ್ಪನ್ನಗಳನ್ನು ಬಳಸಿ ಎಲೆಕ್ಟ್ರೋ-ಮೆಕ್ಯಾನಿಕಲ್ ವೆಂಟಿಲೇಟರ್ ಅನ್ನು ತಯಾರಿಸಲಾಗುವುದು. ಇದನ್ನು ಅಗತ್ಯವುಳ್ಳವರಿಗೆ ಉಚಿತವಾಗಿ ಒದಗಿಸಲು ನಿರ್ಧರಿಸಲಾಗಿದೆ ಎಂದು ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಧಾನ ಸಂಶೋಧನಾ ವಿಜ್ಞಾನಿ ಟಿ.ವಿ.ಪ್ರಭಾಕರ್ ತಿಳಿಸಿದ್ದಾರೆ.

ಕಳೆದ 10 ದಿನಗಳಲ್ಲಿ ನಾವು ಈ ತಂತ್ರಜ್ಞಾನ ಅಳವಡಿಕೆಗೆ ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇವೆ. ಇದು ಏಪ್ರಿಲ್ ಅಂತ್ಯದ ವೇಳೆಗೆ ಸಿದ್ಧವಾಗುತ್ತದೆ ಎಂದು ನಾವು ಆಶಿಸುತ್ತೇವೆ. ಉತ್ಪಾದಕರು ತಮ್ಮದೇ ಆದ ವಿಧಾನಗಳನ್ನು ಹೊಂದಿದ್ದು, ಇದು ಯೋಜನೆಯನ್ನು ತ್ವರಿತಗೊಳಿಸುತ್ತದೆ ಎಂದು ಸಹ ಪ್ರೊಫೆಸರ್ ಗೌರವ್ ಬ್ಯಾನರ್ಜಿ ಹೇಳಿದ್ದಾರೆ.

ದೇಶದಲ್ಲಿ ಸದ್ಯ ಕೇವಲ 40 ಸಾವಿರ ವೆಂಟಿಲೇಟರ್ ಗಳಿದ್ದು, ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಿದಲ್ಲಿ ಇದರ ಸಾಕಷ್ಟು ಕೊರತೆ ಎದುರಾಗುವ ಆತಂಕವಿದೆ.

ಕೋವಿಡ್ -19ನಿಂದ ಗಂಭೀರವಾಗಿ ಹಾನಿಯಾಗಿರುವ ಮತ್ತು ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿರುವರಿಗೆ ವೆಂಟಿಲೇಟರ್ ಮೂಲಕ ಆಮ್ಲಜನಕ ಪೂರೈಸಬೇಕಾಗುತ್ತದೆ. ವೆಂಟಿಲೇಟರ್ ರೋಗಿಗೆ ಗಾಳಿ ಹಾಗೂ ಆಮ್ಲಜನಕ ಮತ್ತು ಆಹಾರವನ್ನು ಕೂಡ ಒದಗಿಸುತ್ತದೆ.

ವೆಂಟಿಲೇಟರ್ ನ ಹಲವು ಉಪಕರಣಗಳನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿಲ್ಲ. ಆದ್ದರಿಂದ ಐಐಎಸ್ ಸಿ ತಂಡ ಕೆಲ ಉಪಕರಣಗಳನ್ನು ಉಪತ್ಪಾದಿಸಲು ಯೋಜಿಸಿದೆ. ಮನೆಗಳಲ್ಲಿ ಲಭ್ಯವಿರುವ ಆರ್ ಒ ವಾಟರ್ ಪ್ಯೂರಿಫೈಯರ್ ಗಳಲ್ಲಿರುವ ಮರುಬಳಕೆಯ ನಿಕ್ಷೇಪದ ಟ್ಯಾಂಕ್ ಗಳನ್ನು ಗಾಳಿ ಹಾಗೂ ಆಮ್ಲಜನಕವನ್ನು ಮಿಶ್ರ ಮಾಡಲು ಮತ್ತು ಸಂಗ್ರಹಿಸಲು ಬಳಸಬಹುದಾಗಿದೆ.

ಈ ವೆಂಟಿಲೇಟರ್ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ವೈದ್ಯರು ಇಲ್ಲವೇ ನರ್ಸ್ ಗಳು ನ್ಯೂಮೋನಿಯಾ ಇಲ್ಲವೇ ತೀವ್ರ ಶ್ವಾಸಕೋಶದ ತೊಂದರೆ(ಎಆರ್ ಡಿಎಸ್ ) ಎಂಬ ಬಟನ್ ಒತ್ತಿದರೆ, ಅದಕ್ಕೆ ಬೇಕಾದಂತೆ ಅದು ಸೆಟ್ಟಿಂಗ್ ಬದಲಿಸಿಕೊಳ್ಳುತ್ತದೆ ಎಂದು ಬ್ಯಾನರ್ಜಿ ವಿವರಣೆ ನೀಡಿದ್ದಾರೆ.

Stay up to date on all the latest ರಾಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp