ಅಧಿಕ ಬೆಲೆಗೆ ಥರ್ಮಾಮೀಟರ್ ಮಾರಾಟ ಮಾಡುತ್ತಿದ್ದವನ ಬಂಧನ

ಕೊರೊನಾವೈರಸ್​ ಭೀತಿ ಉಲ್ಬಣಗೊಳ್ಳುತ್ತಿರುವುದನ್ನೇ ದುರ್ಬಳಕೆ ಮಾಡಿಕೊಂಡು ನಿಗದಿತ ಬೆಲೆಗಿಂತ ಅಧಿಕ ಬೆಲೆಗೆ ಥರ್ಮಾಮೀಟರ್​ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ನಾರಾಯಣ್
ಆರೋಪಿ ನಾರಾಯಣ್

ಬೆಂಗಳೂರು: ಕೊರೊನಾವೈರಸ್​ ಭೀತಿ ಉಲ್ಬಣಗೊಳ್ಳುತ್ತಿರುವುದನ್ನೇ ದುರ್ಬಳಕೆ ಮಾಡಿಕೊಂಡು ನಿಗದಿತ ಬೆಲೆಗಿಂತ ಅಧಿಕ ಬೆಲೆಗೆ ಥರ್ಮಾಮೀಟರ್​ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನಾರಾಯಣ್, ಇನ್ಫ್ರಾರೆಡ್ ಪೋರ್​ಹೆಡ್ ಥರ್ಮಾಮೀಟರ್​ಗಳನ್ನು ಚೆನ್ನೈನಿಂದ ತರಿಸಿಕೊಂಡು ರಾಜಾಜಿ ನಗರದ ತನ್ನ ಸರ್ಜಿಕಲ್ ಮತ್ತು ಸೈಂಟಿಫಿಕ್ಸ್​ ಅಂಗಡಿಯಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು‌ ದಾಳಿ ನಡೆಸಿದ್ದರು.

ಬಂಧಿತನಿಂದ 8 ಲಕ್ಷ ರೂ ಮೌಲ್ಯದ 70 ಥರ್ಮಾಮೀಟರ್​ಗಳು ಹಾಗೂ ಅದಕ್ಕೆ ಸಂಬಂಧಿಸಿದ 60 ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ವಶಕ್ಕೆ ಪಡೆದಿರುವ ಥರ್ಮಾಮೀಟರ್ ಗಳಲ್ಲಿ ತಯಾರಿಕರ ಹೆಸರು ಹಾಗೂ ಇತರೆ ಮಾಹಿತಿಗಳು ಮುದ್ರಣಗೊಳ್ಳದೇ ಇರುವುದು ಕಂಡು ಬಂದಿದೆ. ಅಲ್ಲದೆ ಇವುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿರುವುದೂ ಕೂಡ ಕಂಡು ಬಂದಿದೆ. ದಾಳಿಯಲ್ಲಿ 5000ಕ್ಕೂ ಹೆಚ್ಚು ನಕಲಿ ಸ್ಯಾನಿಟೈಸರ್ ಬಾಟಲ್ ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com