ಗದಗ: ಎಣ್ಣೆ ಅಂಗಡಿ ತೆರೆಯಲಿದೆ ಎಂಬ ವದಂತಿ ನಂಬಿ ಏಪ್ರಿಲ್ ಫೂಲ್ ಆದ ಮದ್ಯವ್ಯಸನಿಗಳು!

ಏಪ್ರಿಲ್ 1ನ್ನು ಸಾಮಾನ್ಯವಾಗಿ ಮೂರ್ಖರ ದಿನವೆಂದು ಆಚರಿಸಲಾಗುತ್ತದೆ. ಆದರೆ ಗದಗ ಜಿಲ್ಲೆಯ ಕೆಲ ಮದ್ಯಪ್ರಿಯರು ಮಾತ್ರ ಇಂದು ವದಂತಿಗಳನ್ನು ನಂಬಿ ನಿಜಕ್ಕೂ ಮೂರ್ಖರಾಗಿದ್ದಾರೆ.. 
ಗದಗ: ಎಣ್ಣೆ ಅಂಗಡಿ ತೆರೆಯಲಿದೆ ಎಂಬ ವದಂತಿ ನಂಬಿ ಏಪ್ರಿಲ್ ಫೂಲ್ ಆದ ಮದ್ಯವ್ಯಸನಿಗಳು!
ಗದಗ: ಎಣ್ಣೆ ಅಂಗಡಿ ತೆರೆಯಲಿದೆ ಎಂಬ ವದಂತಿ ನಂಬಿ ಏಪ್ರಿಲ್ ಫೂಲ್ ಆದ ಮದ್ಯವ್ಯಸನಿಗಳು!

ಗದಗ: ಏಪ್ರಿಲ್ 1ನ್ನು ಸಾಮಾನ್ಯವಾಗಿ ಮೂರ್ಖರ ದಿನವೆಂದು ಆಚರಿಸಲಾಗುತ್ತದೆ. ಆದರೆ ಗದಗ ಜಿಲ್ಲೆಯ ಕೆಲ ಮದ್ಯಪ್ರಿಯರು ಮಾತ್ರ ಇಂದು ವದಂತಿಗಳನ್ನು ನಂಬಿ ನಿಜಕ್ಕೂ ಮೂರ್ಖರಾಗಿದ್ದಾರೆ.. 

ದೇಶಾದ್ಯಂತ ಏಪ್ರಿಲ್14ರವರೆಗೆ ಕೊರೋನಾ ಕಾರಣಕ್ಕೆ ಲಾಕ್ ಡೌನ್ ಆಗಿದ್ದು ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿದೆ. ಹಾಗಿದ್ದು ಗದಗ ನಗರದ ಕೆಲವೊಬ್ಬರು ಏಪ್ರಿಲ್ 1ರಂದು ಕೆಲ ಗಂಟೆಗಳ ಕಾಲ ಮದ್ಯದ ಅಂಗಡಿಗಳು ತೆರೆಯಲಿದೆ ಎಂಬ ವದಂತಿಗಳನ್ನು ನಂಬಿ ಮುಳಗುಂದ ರಸ್ತೆಯ ಎಂಎಸ್‍ಐಎಲ್ ಮದ್ಯದಂಗಡಿ ಮುಂದೆ ಸರದಿ ಸಾಲಿನಲ್ಲಿ ಕಾಯುತ್ತಾ ನಿಂತಿದ್ದರು.

ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದ ಸುಳ್ಲು ಸುದ್ದಿಯನ್ನು ನಂಬಿ ನೂರಾರು ಜನರು ಮದ್ಯದ ಮಳಿಗೆ ಮುಂದೆ ಜಮಾಯಿಸಿದ್ದರು. ಸರತಿ ಸಾಲಲ್ಲಿ ನಿಂತವರ ಪೈಕಿ ಓರ್ವ ಮಹಿಳೆಯೂ ಇದ್ದದ್ದು ವಿಶೇಷವಾಗಿತ್ತು. ಆದರೆ ಎಷ್ಟು ಸಮಯವಾದರೂ ಅಂಗಡಿ ಮಾತ್ರ ತೆರೆಯಲಿಲ್ಲ. ಕಡೆಗೆ ಜನ ಗುಂಪು ಸೇರಿದ್ದನ್ನು ಗಮನಿಸಿದ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕಾಗಮಿಸಿ ಎಚ್ಚರಿಸಿದ್ದಾರೆ. ಆ ತಕ್ಷಣ ಅಲ್ಲಿ ಸೇರಿದ್ದವರೆಲ್ಲಾ ಮತ್ತೆ ತಮ್ಮ ತಮ್ಮ ಮನೆಯತ್ತ ಪಾದ ಬೆಳೆಸಿದ್ದರು.

ಒಟ್ತಾರೆ ವದಂತಿ, ಸುಳ್ಳು ಮಾಹಿತಿಯನ್ನು ನಂಬಿದ ಮದ್ಯಪ್ರಿಯರಿಗೆ ಇಂದು ಏಪ್ರಿಲ್ ಫೂಲ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com