ಕರ್ನಾಟಕ ಕೇರಳ ಸರ್ಕಾರವನ್ನು ಅನುಸರಿಸಬೇಕೆ?: ವೈದ್ಯರ ಪ್ರಿಸ್ಕ್ರಿಪ್ಷನ್ ತಂದವರಿಗೆ ಮದ್ಯ ಪೂರೈಸಬೇಕೆ?

ಭಾರತ ಲಾಕ್ ಡೌನ್ ನ ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಮದ್ಯ ಸಿಗದೆ ಅನೇಕ ಮಂದಿ ಆತ್ಮಹತ್ಯೆಯ ದಾರಿ ಹಿಡಿದಿದ್ದು ವರದಿಯಾಗಿದೆ. ಮದ್ಯದಂಗಡಿಗಳನ್ನು ಮರು ಪ್ರಾರಂಭಿಸಬೇಕು ಎಂಬ ಕೂಗು ರಾಜ್ಯದಾದ್ಯಂತ ಕೇಳಿ ಬರುತ್ತಿದೆ. 
ಕರ್ನಾಟಕ ಕೇರಳ ಸರ್ಕಾರವನ್ನು ಅನುಸರಿಸಬೇಕೆ?: ವೈದ್ಯರ ಪ್ರಿಸ್ಕ್ರಿಪ್ಷನ್ ತಂದವರಿಗೆ ಮದ್ಯ ಪೂರೈಸಬೇಕೆ?

ಬೆಂಗಳೂರು: ಭಾರತ ಲಾಕ್ ಡೌನ್ ನ ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಮದ್ಯ ಸಿಗದೆ ಅನೇಕ ಮಂದಿ ಆತ್ಮಹತ್ಯೆಯ ದಾರಿ ಹಿಡಿದಿದ್ದು ವರದಿಯಾಗಿದೆ. ಮದ್ಯದಂಗಡಿಗಳನ್ನು ಮರು ಪ್ರಾರಂಭಿಸಬೇಕು ಎಂಬ ಕೂಗು ರಾಜ್ಯದಾದ್ಯಂತ ಕೇಳಿ ಬರುತ್ತಿದೆ. 

ಇಂತಹ ಸಂದರ್ಭದಲ್ಲಿ ಕೇರಳ ಸರ್ಕಾರ ಮದ್ಯ ಅಗತ್ಯವಿರುವವರು ವೈದ್ಯರ ಬಳಿಯಿಂದ ಔಷಧ ಚೀಟಿ(ಪ್ರಿಸ್ಕ್ರಿಪ್ಷನ್) ತೆಗೆದುಕೊಂಡು ಬಂದು ಮದ್ಯ ಕೊಳ್ಳುವಂತೆ ಸೂಚಿಸಿದೆ. ಇದನ್ನು ಕರ್ನಾಟಕ ಸರ್ಕಾರ ಕೂಡ ಪಾಲಿಸಬೇಕೆಂದು ಮಾನಸಿಕ ಆರೋಗ್ಯ ತಜ್ಞರು ಹೇಳುತ್ತಾರೆ.

ಸದ್ಯ ಮದ್ಯ ಸಿಗದಿರುವುದರಿಂದ ಮದ್ಯದ ದಾಸಕ್ಕೆ ಒಳಗಾದವರಿಗೆ ವೈದ್ಯಕೀಯ ನೆರವು ಸಿಗುವುದು ಕಷ್ಟವಿದೆ.ಹೀಗಿರುವಾಗ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಯ ದಾರಿ ಕಂಡುಕೊಳ್ಳುತ್ತಿದ್ದಾರೆ. ಹೀಗಿರುವಾಗ ವೈದ್ಯರ ಪ್ರಿಸ್ಕ್ರಿಪ್ಷನ್ ಆಧಾರಿತ ಮದ್ಯಗಳನ್ನು ಪೂರೈಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com