ಸಂಕಷ್ಟದಲ್ಲಿ ರಾಜ್ಯದ ರೈತರು: 20 ಸಾವಿರ ದಂಡ ಹಿನ್ನೆಲೆ ಬಾಳೆ ಕಟಾವು ಮಾಡಲಾಗದ ಸ್ಥಿತಿಯಲ್ಲಿ ರೈತರು!

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನೂರಾರು ಎಕರೆಯಲ್ಲಿ ಬೆಳೆದಿರುವ ಬಾಳೆ ಬೆಲೆ ಕೊಯ್ಲಿಗೆ ಬಂದಿದ್ದರೂ ಕಟಾವು ಮಾಡಲು ಜನರ ಸಿಗದೆ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 
ರೈತರು
ರೈತರು

ಬೆಂಗಳೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನೂರಾರು ಎಕರೆಯಲ್ಲಿ ಬೆಳೆದಿರುವ ಬಾಳೆ ಬೆಲೆ ಕೊಯ್ಲಿಗೆ ಬಂದಿದ್ದರೂ ಕಟಾವು ಮಾಡಲು ಜನರ ಸಿಗದೆ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಲಕ್ಷಾಂತರ ರೂಪಾಯಿ ಬೆಳೆ ಬೆಳೆದಿದ್ದರೂ ಕಟಾವು ಮಾಡಲು ಜನರಿಲ್ಲದೆ ಜೊತೆಗೆ ಕೊಳ್ಳುವುದಕ್ಕೂ ಯಾರು ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕರ್ನಾಟಕ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕಿದೆ. ದೇಶವೇ ಸಂಕಷ್ಟದ ದಿನಗಳನ್ನು ಕಳೆಯುತ್ತಿರುವ ಸಂದರ್ಭದಲ್ಲಿ ರಾಜ್ಯದ ಬಾಳೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. 

ರಾಜ್ಯದ ರೈತರು ಕೇರಳ ಮತ್ತು ತಮಿಳುನಾಡು ಮಾರುಕಟ್ಟೆಗಳನ್ನು ಅವಲಂಬಿಸಿದ್ದಾರೆ. ಆದರೆ ಹೊರರಾಜ್ಯಗಳಿಂದ ಕಟಾವು ಮಾಡಲು ಜನರನ್ನು ಕರೆಸುವುದಕ್ಕೆ 20 ಸಾವಿರ ದಂಡ ಹಾಕಿರುವುದರಿಂದ ರೈತರು ತಲೆ ಮೇಲೆ ಕೈಕಟ್ಟಿ ಕೂರುವಂತಾಗಿದೆ. 

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬಾಳೆ ಕೊಯ್ಲಿಗೆ ಬಂದಿವೆ. ಆದರೆ ರಾಜ್ಯದಲ್ಲಿ ಬೆಳೆಗೆ ಸೂಕ್ತ ಬೆಲೆ ಸಿಗದೆ ಬೆಲೆಯನ್ನು ಎಸೆಯುಂತಾ ಪರಿಸ್ಥಿತಿ ನಿರ್ಮಾಣವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com