ಕೋವಿದ್19 ಟೆಸ್ಟ್ ಗೆ ಪರಿಷ್ಕೃತ ಮಾರ್ಗಸೂಚಿ ಅಳವಡಿಕೆ: ಜಾವೇದ್ ಅಖ್ತರ್

ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕರ್ನಾಟಕದ ನಾಲ್ಕು ವರ್ಗದ ರೋಗಿಗಳಿಗೆ ಪರೀಕ್ಷಾ ಮಾನದಂಡಗಳನ್ನು ವಿಸ್ತರಿಸಲಾಗಿದೆ  ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಹೇಳಿದ್ದಾರೆ.

Published: 02nd April 2020 08:56 AM  |   Last Updated: 02nd April 2020 08:56 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಬೆಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕರ್ನಾಟಕದ ನಾಲ್ಕು ವರ್ಗದ ರೋಗಿಗಳಿಗೆ ಪರೀಕ್ಷಾ ಮಾನದಂಡಗಳನ್ನು ವಿಸ್ತರಿಸಲಾಗಿದೆ  ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯಿರುವ ಸುತ್ತೋಲೆ ಬಿಡುಗಡೆ ಮಾಡಿದ್ದಾರೆ. ಕಳೆದ 14 ದಿನಗಳಲ್ಲಿ ಅಂತರರಾಷ್ಟ್ರೀಯ ಪ್ರಯಾಣವರಲ್ಲಿ ರೋಗಲಕ್ಷಣ ಇರುವ ವ್ಯಕ್ತಿಗಳು ಇದರಲ್ಲಿ ಸೇರಿದ್ದಾರೆ.

 ಪ್ರಯೋಗಾಲಯ ದೃ ಢಪಡಿಸಿದ ಪ್ರಕರಣಗಳು ಹಾಗೂ   ರೋಗಲಕ್ಷಣದ ವಿರುವ ಆರೋಗ್ಯ ಕಾರ್ಯಕರ್ತರು, ಎಲ್ಲಾ ಆಸ್ಪತ್ರೆಗಳಲ್ಲಿರುವ ಗಂಭೀರ ಉಸಿರಾಟ ಸಮಸ್ಯೆ ಹೊಂದಿರುವ ರೋಗಿಗಳು  ಮತ್ತು ಕೋವಿದ್ 19 ಪಾಸಿಟಿವ್ ಇರುವವರ ಜೊತೆ ಸಂಪರ್ಕದಲ್ಲಿದ್ದು ಹೈ ರಿಸ್ಕ್ ಹೊಂದಿರುವವರಿಗೆ ದಿನಕ್ಕೆ ಒಂದು ಬಾರಿಯಂತೆ ಪ5ನೇ ದಿನದಿಂದ 14ನೇ ದಿನದವರೆಗೆ ಪರೀಕ್ಷೆ ನಡೆಸಬೇಕು.

ಕೊರೋನಾ ಪರೀಕ್ಷಿಸಲು ಕೇಂದ್ರ ಸರ್ಕಾರ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್- ನಿಂದ ಪರವನಾನಗಿ ಪಡೆದಿರುವ  ಶಿವಾಜಿನಗರದ ನ್ಯೂಬರ್ಗ್ ಆನಂದ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ ಮತ್ತು ಬಸವನಗುಡಿಯಲ್ಲಿನ ಕ್ಯಾನ್ಸೈಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಖಾಸಗಿ ಲ್ಯಾಬ್ ಗಳಲ್ಲಿ ಪರೀಕ್ಷೆ ನಡೆಸಬಹುದಾಗಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp