ಅಂತ್ಯ ಸಂಸ್ಕಾರದಲ್ಲಿ 10ಕ್ಕಿಂತ ಹೆಚ್ಚು ಮಂದಿ ಭಾಗವಹಿಸಬಾರದು: ಬಿಬಿಎಂಪಿ

ಕೊರೋನಾ ವೈರಸ್ ಭೀತಿಯಿಂದಾಗಿ ಸತ್ತವರಿಗೆ ನೆಮ್ಮದಿಯಿಂದ ವಿದಾಯ ಹೇಳಲು ಸಾಧ್ಯವಾಗುತ್ತಿಲ್ಲ. ಕುಟುಂಬದಲ್ಲಿ ಯಾರಾದರೂ ಸಾವನ್ನಪ್ಪಿದರೇ ಅವರ ಅಂತ್ಯ ಸಂಸ್ಕಾರದಲ್ಲಿ 10 ಮಂದಿಗಿಂತ ಹೆಚ್ಚಿನವರು  ಸೇರಬಾರದು ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಭೀತಿಯಿಂದಾಗಿ ಸತ್ತವರಿಗೆ ನೆಮ್ಮದಿಯಿಂದ ವಿದಾಯ ಹೇಳಲು ಸಾಧ್ಯವಾಗುತ್ತಿಲ್ಲ. ಕುಟುಂಬದಲ್ಲಿ ಯಾರಾದರೂ ಸಾವನ್ನಪ್ಪಿದರೇ ಅವರ ಅಂತ್ಯ ಸಂಸ್ಕಾರದಲ್ಲಿ 10 ಮಂದಿಗಿಂತ ಹೆಚ್ಚಿನವರು  ಸೇರಬಾರದು ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನಲ್ಲಿ 132 ಸ್ಮಶಾನಗಳು ಮತ್ತು 13 ಶವಾಗಾರಗಳಿವೆ.  ಸ್ಮಶಾನಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತು ಖಾಸಗಿ ಟ್ರಸ್ಟ್ ಗಳು ನಿರ್ವಹಿಸುತ್ತವೆ. ನಗರಸಭೆಗಳು ಸ್ಮಶಾನವನ್ನು (ವಿದ್ಯುತ್ ಮತ್ತು ಉರುವಲು ಎರಡೂ) ನಿರ್ವಹಿಸುತ್ತದೆ.

ಅಂತ್ಯ ಸಂಸ್ಕಾರದಲ್ಲಿ ಕೇವಲ ತರ ಆಪ್ತರಾದ 10 ಮಂದಿ ಮಾತ್ರ ಭಾಗವಹಿಸಬೇಕು. ಹೆಚ್ಚಿನ ಜನ ಭಾಗವಹಿಸಲು ಅವಕಾಶ ನೀಡುವುದಿಲ್ಲ, ಜೊತೆಗೆ ಸೋಪು ಮತ್ತು ಹ್ಯಾಂಡ್ ವಾಶ್ ಗಳನ್ನು ಸ್ಮಶಾನದಲ್ಲಿರಿಸಬೇಕು. ದಿನಕ್ಕೆ 2 ಬಾರಿ ಸ್ಯಾನಿಟೈಸ್ ಮಾಡಬೇಕು ಎಂದು ಅನಿಲ್ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com