60 ಫೀವರ್ ಕ್ಲಿನಿಕ್ ಗಳು ಕಾರ್ಯಾರಂಭ, ಖಾಸಗಿ ಆಸ್ಪತ್ರೆಗಳ ಪಟ್ಟಿ ಇಲ್ಲಿದೆ...

ಕೊರೋನಾ ಸೋಂಕು ಶಂಕಿತರಿಕೆ ತುರ್ತು ತಪಾಸಣೆ ನಡೆಸುವ 60 ಫೀವರ್ ಕ್ಲಿನಿಕ್ ಗಳು ನಗರದಲ್ಲಿ ತನ್ನ ಕಾರ್ಯಗಳನ್ನು ಆರಂಭಿಸಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಸೋಂಕು ಶಂಕಿತರಿಕೆ ತುರ್ತು ತಪಾಸಣೆ ನಡೆಸುವ 60 ಫೀವರ್ ಕ್ಲಿನಿಕ್ ಗಳು ನಗರದಲ್ಲಿ ತನ್ನ ಕಾರ್ಯಗಳನ್ನು ಆರಂಭಿಸಿವೆ. 

ಮತ್ತಷ್ಟು ಫೀವರ್ ಕ್ಲಿನಿಕ್ ಗಳು ತನ್ನ ಕಾರ್ಯ ಆರಂಭಿಸಲು ಸಿದ್ಧವಾಗಿದ್ದರೂ, ವೈದ್ಯಕೀಯ ಸಲಕರಣೆಗಳಿಗಾಗಿ ಕಾಯುತ್ತಿವೆ ಎಂದು ವರದಿಗಲು ತಿಳಿಸಿವೆ. 

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಫೀವರ್ ಕ್ಲಿನಿಕ್ ಸ್ಥಾಪಿಸಲು 36 ಖಾಸಗಿ ಆಸ್ಪತ್ರೆಗಳು ಹಾಗೂ 60 ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿತ್ತು. ಇದರಲ್ಲಿ ಈಗಾಗಲೇ 60 ಫೀವರ್ ಕ್ಲಿನಿಕ್ ಗಳು ಕಾರ್ಯಾ ಆರಂಭಿಸಿದೆ ಎಂದು ತಿಳಿದುಬಂದಿದೆ. 

ಮಹಾವೀರ್ ಜೈನ್ ಆಸ್ಪತ್ರೆಯ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ.ಎಂ.ಡಿ.ಮಾರ್ಕೆರ್ ಮಾತನಾಡಿ, 10 ದಿನಗಳ ಹಿಂದೆಯೇ ನಾವು ಫೀವರ್ ಕ್ಲಿನಿಕ್ ಆರಂಬಿಸಿದ್ದೇವೆ. ರೋಗಿಗಳ ತಪಾಸಣೆ ಮಾಡಲು ವೈದ್ಯರು, ನರ್ಸ್ ಗಳು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಗಳೂ ಇದ್ದಾರೆ. ವೈರಸ್ ಲಕ್ಷಣಗಳು ಕಂಡುಬಂದ ವ್ಯಕ್ತಿಗಳ ಸ್ವಾಬ್ ಟೆಸ್ಟ್ ನಡೆಸಲಾಗುತ್ತದೆ. ವರದಿ ಬರುವವರೆಗೂ ಆ ವ್ಯಕ್ತಿಗಳನ್ನ ಕ್ವಾರಂಟೈನ್ ನಲ್ಲಿರುವಂಡೆ ತಿಳಿಸಲಾಗುತ್ತದೆ. ವರದಿಯಲ್ಲಿ ವೈರಸ್ ಇಲ್ಲ ಎಂದು ಬಂದರೂ ಕೂಡ ಮನೆಯಲ್ಲಿಯೇ 14 ದಿನ ಕ್ವಾರಂಟೈನ್ ನಲ್ಲಿರುವಂತೆ ತಿಳಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಸಂತೋಷ್ ಆಸ್ಪತ್ರೆಯ ನಿರ್ದೇಶಕ ಡಾ.ಸಂತೋಷ್ ಸಕ್ಲೇಚಾ ಮಾತನಾಡಿ, ಪಿಪಿಇ ನೀಡುವಂತೆ ಸರ್ಕಾರದೊಂದಿಗ ಸುದೀರ್ಘವಾಗಿ ಹೋರಾಟ ಮಾಡುತ್ತಲೇ ಇದ್ದೇವೆ. ಇದೀಗ ನಮ್ಮ ಹೋರಾಟ ಅಂತ್ಯಗೊಂಡಿದೆ. ಸೇವೆ ಸಲ್ಲಿಸಲು ನಾವು ಸಿದ್ಧರಿದ್ದೇವೆಂದು ಹೇಳಿದ್ದಾರೆ. 


36 ಖಾಸಗಿ ಫೀವರ್ ಕ್ಲಿನಿಕ್ಸ್'ಗಳು ಇಂತಿವೆ...
ಭಗವಾನ್ ಜೈನ್ ಹಾಸ್ಪಿಟಲ್
ಎನ್‌ಯು ಹಾಸ್ಪಿಟಲ್ಸ್
ಪೀಪಲ್ ಟ್ರೀ ಹಾಸ್ಪಿಟಲ್ಸ್
ಎನ್ ಆರ್ ಆರ್ ಹಾಸ್ಪಿಟಲ್
ಬ್ಯಾಪ್ಟಿಸ್ಟ್ ಹಾಸ್ಪಿಟಲ್ಸ್
ಸೇಂಟ್ ಫಿಲೋಮಿನಾ ಹಾಸ್ಪಿಟಲ್
ಸೇಂಟ್ ಮಾರ್ಥಾಸ್ ಹಾಸ್ಪಿಟಲ್ಸ್
ಸಿಎಸ್ಐ ಹಾಸ್ಪಿಟಲ್
ಆರ್ ಎಂ ವಿ ಹಾಸ್ಪಿಟಲ್ಸ್
ತೇಜಸ್ ನರ್ಸಿಂಗ್ ಹೋಮ್ಸ್
ಸಂಜೀವಿನಿ ಹಾಸ್ಪಿಟಲ್ಸ್
ಶ್ರೀನಿವಾಸ ಹಾಸ್ಪಿಟಲ್
ಫೋರ್ಟಿಸ್ ಹಾಸ್ಪಿಟಲ್ಸ್
ಸುಗುಣಾ ಹಾಸ್ಪಿಟಲ್
ಅಪೊಲೊ ಹಾಸ್ಪಿಟಲ್ಸ್, ಬೆಂಗಳೂರು
ಬ್ರೂಕ್ ಫೀಲ್ಡ್ ಹಾಸ್ಪಿಟಲ್
ಲೈಫ್ ಕೇರ್ ಹಾಸ್ಪಿಟಲ್ಸ್
ರಾಜಶೇಖರ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್
ಥೆರೇಸಾ ಹಾಸ್ಪಿಟಲ್
ಸುಬ್ಬಯ್ಯ ಹಾಸ್ಪಿಟಲ್
ಮಲ್ಯ ಹಾಸ್ಪಿಟಲ್
ಪ್ರಿಸ್ಟೀನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ
ಸಂತೋಷ್ ಹಾಸ್ಪಿಟಲ್
ಫೋರ್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ
ಶ್ರೀ ಲಕ್ಷ್ಮಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ
ಎಂ ಎಸ್ ರಾಮಯ್ಯ ಸ್ಮಾರಕ ಆಸ್ಪತ್ರೆ
ಆಸ್ಟರ್ ಹಾಸ್ಪಿಟಲ್
ವಾಸವಿ ಹಾಸ್ಪಿಟಲ್
ಸ್ಮೈಲ್ಸ್ ಹಾಸ್ಪಿಟಲ್
ಸಕ್ರಾ ಹಾಸ್ಪಿಟಲ್ಸ್
ನಾರಾಯಣ ಹೃದ್ರಾಯಾಲಯ
ಅಪೊಲೊ ಹಾಸ್ಪಿಟಲ್ಸ್ ಶೇಷಾದ್ರಿಪುರಂ
ಕೊಲಂಬಿಯಾ ಏಷ್ಯಾ ಹಾಸ್ಪಿಟಲ್, ಯಶವಂತಪುರ
ಕೊಲಂಬಿಯಾ ಏಷ್ಯಾ ಹಾಸ್ಪಿಟಲ್, ವೈಟ್‌ಫೀಲ್ಡ್
ಕೊಲಂಬಿಯಾ ಏಷ್ಯಾ ಹಾಸ್ಪಿಟಲ್, ಹೆಬ್ಬಾಳ
ಕೊಲಂಬಿಯಾ ಏಷ್ಯಾ ಹಾಸ್ಪಿಟಲ್, ದೊಡ್ಡಬಳ್ಳಾಪುರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com