ಕೊರೋನಾ ವೈರಸ್: ಬಾಗಲಕೋಟೆಯಲ್ಲಿ ಕೋವಿಡ್ 19 ಸೋಂಕಿತ ವೃದ್ಧ ಸಾವು, ರಾಜ್ಯದಲ್ಲಿ 4ಕ್ಕೇರಿದ ಸಾವಿನ ಸಂಖ್ಯೆ

ಕೊರೋನಾ ಸೋಂಕಿಗೆ ತುತ್ತಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ 75 ವರ್ಷದ ಕೋವಿಡ್ 19 ಸೋಂಕು ಪೀಡಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ

ಬಾಗಲಕೋಟೆ: ಕೊರೋನಾ ಸೋಂಕಿಗೆ ತುತ್ತಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ 75 ವರ್ಷದ ಕೋವಿಡ್ 19 ಸೋಂಕು ಪೀಡಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕೊರೋನಾ ಸೋಂಕಿಗೆ ತುತ್ತಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಹಳೆ ಬಾಗಲಕೋಟೆ ನಿವಾಸಿ 75 ವರ್ಷದ ವೃದ್ಧ ಶುಕ್ರವಾರ ಚಿಕಿತ್ಸೆ  ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ. 

ಬಾಗಲಕೋಟೆಯ ಮಾರುಕಟ್ಟೆ ಪ್ರದೇಶದಲ್ಲಿ ಖಾದ್ಯ ತೈಲ ಚಿಲ್ಲರೆ ಮಾರಾಟ ಅಂಗಡಿ ಇಟ್ಟುಕೊಂಡಿದ್ದ ವೃದ್ಧನನ್ನು ಅನಾರೋಗ್ಯದ ಕಾರಣ ಮಾರ್ಚ್ 31ರಂದು ಚಿಕಿತ್ಸೆಗಾಗಿ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್–19 ಸೋಂಕಿನ ಲಕ್ಷಣಗಳು ಕಂಡುಬಂದ ಕಾರಣ ಅವರ  ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಗುರುವಾರವಷ್ಟೇ ಸೊಂಕು ದೃಢಪಟ್ಟಿತ್ತು. ವೃದ್ಧ ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೃದಯಕ್ಕೆ ಸ್ಟಂಟ್ ಕೂಡ ಅಳವಡಿಸಲಾಗಿತ್ತು ಎಂದು  ತಿಳಿದುಬಂದಿದೆ. ವೃದ್ಧನಿಗೆ ಸೋಂಕು ಹೊರಗಿನಿಂದ ತಗುಲಿದ್ದರೆ ಬಾಗಲಕೋಟೆಯಲ್ಲಿ ಬೇರೆ ಸೋಂಕಿತರು ಇರಬಹುದು ಎಂಬುದು ಜಿಲ್ಲಾಡಳಿತದ ಅಂದಾಜು. ಹೀಗಾಗಿ ಸೋಂಕಿತ ವಾಸಿಸುತ್ತಿದ್ದ ಪ್ರದೇಶದಲ್ಲಿ ಮನೆ ಮನೆ ಸಮೀಕ್ಷೆ ಕಾರ್ಯ ಆರಂಭಿಸಿದೆ.

ಮಕ್ಕಳ ಫಲಿತಾಂಶ ನೆಗೆಟಿವ್
ಸೋಂಕಿತ ವ್ಯಕ್ತಿ ಇತ್ತೀಚೆಗೆ ಹೊರಗೆ ಎಲ್ಲಿಗೂ ಪ್ರಯಾಣಿಸಿರಲಿಲ್ಲ. ಅವರ ಪುತ್ರ ಹಾಗೂ ಪುತ್ರಿ ಇಬ್ಬರೂ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಲಾಕ್‌ಡೌನ್ ಘೋಷಣೆಯಾದ ನಂತರ ಅವರು ಬಾಗಲಕೋಟೆಗೆ ಮರಳಿದ್ದರು. ಅವರಿಂದ ಕೋವಿಡ್–19 ಸೊಂಕು ತಗುಲಿರಬಹುದು ಎಂದು ಶಂಕಿಸಿದ್ದ ಜಿಲ್ಲಾಡಳಿತ ವೃದ್ಧನ ಪತ್ನಿ, ಇಬ್ಬರು ಮಕ್ಕಳು, ಸಹೋದರ ಹಾಗೂ ಅವರ ಪತ್ನಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಿದ್ದರು. ಸೋಂಕಿತ ವ್ಯಕ್ತಿಯ ಪುತ್ರ, ಪುತ್ರಿ ಹಾಗೂ ಸಹೋದರನ ಪತ್ನಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯ ಫಲಿತಾಂಶ ಶುಕ್ರವಾರ ರಾತ್ರಿ ಬಂದಿದೆ. ಮೂವರದ್ದು ನೆಗೆಟಿವ್ ಆಗಿದೆ. ಇದು ಜಿಲ್ಲಾಡಳಿತದ ನಿದ್ರೆ ಕೆಡಿಸಿದೆ. ಇನ್ನಿಬ್ಬರದ್ದು ಫಲಿತಾಂಶ ನೆಗೆಟಿವ್ ಬಂದಲ್ಲಿ ವೃದ್ಧನಿಗೆ ಹೊರಗಿನವರಿಂದ ಸೊಂಕು ತಗುಲಿರುವುದು ಖಚಿತವಾಗಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com