ದಕ್ಷ ಪೊಲೀಸ್ ಅಧಿಕಾರಿ ಲಾರಿ ಚಾಲಕನ ವೇಷದಲ್ಲಿ, ಸಿಕ್ಕಿ ಬಿದ್ದ ಆರ್‌ಟಿಒ ಅಧಿಕಾರಿಗಳು!

ಕರ್ನಾಟಕ ದಕ್ಷ ಪೊಲೀಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರು ಲಾರಿ ಚಾಲಕನ ಮಾರುವೇಷದಲ್ಲಿ ಹೋಗಿ ಭ್ರಷ್ಟ ಆರ್‌ಟಿಒ ಅಧಿಕಾರಿಗಳನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. 

Published: 03rd April 2020 03:16 PM  |   Last Updated: 03rd April 2020 03:16 PM   |  A+A-


Ravi D Channannanavar

ರವಿ ಡಿ ಚನ್ನಣನವರ್

Posted By : Vishwanath S
Source : Online Desk

ಬೆಂಗಳೂರು: ಕರ್ನಾಟಕ ದಕ್ಷ ಪೊಲೀಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರು ಲಾರಿ ಚಾಲಕನ ಮಾರುವೇಷದಲ್ಲಿ ಹೋಗಿ ಭ್ರಷ್ಟ ಆರ್‌ಟಿಒ ಅಧಿಕಾರಿಗಳನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. 

ಕರ್ನಾಟಕ-ತಮಿಳುನಾಡು ಗಡಿ ಭಾಗ ಅತ್ತಿಬೆಲೆಯಲ್ಲಿರುವ ಚೆಕ್ ಪೋಸ್ಟ್ ನಲ್ಲಿ ನಿನ್ನೆ ತಡರಾತ್ರಿ ಲಾರಿ ಚಾಲಕನ ವೇಷದಲ್ಲಿ ತೆರಳಿದ್ದರು. ಈ ವೇಳೆ ಚೆಕ್ ಪೋಸ್ಟ್ ನಲ್ಲಿ ಹೋಮ್ ಗಾರ್ಡ್ ವಿವೇಕ್, ಆರ್‌ಟಿಒ  ಬ್ರೇಕ್ ಇನ್ ಪೆಕ್ಟರ್ ಗಳಾದ ಕರಿಯಪ್ಪ ಮತ್ತು ಜಯಣ್ಣ ಅವರನ್ನು ಲಂಚ ಪಡೆದ ಆರೋಪದ ಮೇಲೆ ಬಂಧಿಸಲಾಗಿದೆ. 

ತಮಿಳುನಾಡಿನಿಂದ ಕರ್ನಾಟಕದ ಕಡೆಗೆ ಬರುತ್ತಿದ್ದ ವಾಹನಗಳನ್ನು ನಿಲ್ಲಿಸಲಾಗುತ್ತಿತ್ತು. ಸಾರಿಗೆ ಅಧಿಕಾರಿಗಳಾದ ಕರಿಯಪ್ಪ ಮತ್ತು ಜಯಣ್ಣ ಅವರ ಮಾರ್ಗದರ್ಶನದಲ್ಲಿ ವಿವೇಕ್ ಎಂಬ ಹೋಮ್ ಗಾರ್ಡ್ ಸಿಬ್ಬಂದಿ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದರು. ತಾತ್ಕಾಲಿಕ ಪರ್ಮಿಟ್ ಕೊಡುವ ಹೆಸರಲ್ಲಿ 400-500 ರುಪಾಯಿ ಹಣ ಪಡೆಯಲಾಗುತ್ತಿತ್ತು. 

ಈ ವೇಳೆ ರವಿ ಡಿ ಚನ್ನಣ್ಣನವರ್ ಅವರು ಅಧಿಕಾರಿಗಳನ್ನು ಬಂಧಿಸಿದ್ದು ಅವರಿಂದ 12,350 ರುಪಾಯಿಯನ್ನು ವಶಪಡಿಸಿಕೊಂಡಿದ್ದರು. ಇನ್ನು ಸಾರಿಗೆ ಅಧಿಕಾರಿಗಳಾದ ಜಯಣ್ಣ ಮತ್ತು ಕರಿಯಪ್ಪ ಅವರನ್ನು ಜಿಲ್ಲಾಧಿಕಾರಿ ಶಿವಮೂರ್ತಿ ಅವರು ಅಮಾನುತುಗೊಳಿಸಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp