ಕೋವಿಡ್-19: ವೈದ್ಯಕೀಯ ಸಿಬ್ಬಂದಿ ಸುರಕ್ಷತೆಗಾಗಿ ಧಾರವಾಡ ಐಐಟಿಯಿಂದ 3ಡಿ ಮುದ್ರಿತ ಫೇಸ್ ಶೀಲ್ಡ್ಸ್ ತಯಾರಿಕೆ

ಕೊರೋನಾವೈರಸ್ ರೋಗಿಗಳು ಹಾಗೂ ಶಂಕಿತರನ್ನು ಆರೈಕೆ ಮಾಡುವ ವೈದ್ಯಕೀಯ ಸಿಬ್ಬಂದಿ ಸುರಕ್ಷತೆಗಾಗಿ ಮುಖಕ್ಕೆ ಹಾಕಿಕೊಳ್ಳುವ  ಫೇಸ್ ಶೀಲ್ಡ್ಸ್ ನೊಂದಿಗೆ ಧಾರಾವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ ಮುಂದೆ ಬಂದಿದೆ. ಇದು 500 ಫೇಸ್ ಶಿಲ್ಡ್ ಗಳನ್ನು ತಯಾರಿಸಿದ್ದು,   ಕಿಮ್ಸ್ ಆಸ್ಪತ್ರೆಗೆ ಹಸ್ತಾಂತರಿಸಿದೆ.
ಫೇಸ್ ಶೀಲ್ಡ್ಸ್
ಫೇಸ್ ಶೀಲ್ಡ್ಸ್

ಹುಬ್ಬಳ್ಳಿ: ಕೊರೋನಾವೈರಸ್ ರೋಗಿಗಳು ಹಾಗೂ ಶಂಕಿತರನ್ನು ಆರೈಕೆ ಮಾಡುವ ವೈದ್ಯಕೀಯ ಸಿಬ್ಬಂದಿ ಸುರಕ್ಷತೆಗಾಗಿ ಮುಖಕ್ಕೆ ಹಾಕಿಕೊಳ್ಳುವ  ಫೇಸ್ ಶೀಲ್ಡ್ಸ್ ನೊಂದಿಗೆ ಧಾರಾವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ ಮುಂದೆ ಬಂದಿದೆ. ಇದು 500 ಫೇಸ್ ಶಿಲ್ಡ್ ಗಳನ್ನು ತಯಾರಿಸಿದ್ದು,   ಕಿಮ್ಸ್ ಆಸ್ಪತ್ರೆಗೆ ಹಸ್ತಾಂತರಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂತ್ರದಂತೆ 3 ಡಿ ಮುದ್ರಿತ ತಂತ್ರಜ್ಞಾನದೊಂದಿಗೆ  ಕೈ ಗೆಟುಕುವ ಸರಕುಗಳೊಂದಿಗೆ ಈ ಶೀಲ್ಡ್ಸ್ ಗಳನ್ನು ವಿನ್ಯಾಸಗೊಳಿಸಲಾಗಿದೆ. 

ಧಾರಾವಾಡದ ಐಐಟಿ ಅಧ್ಯಾಪಕರು, ರಿಸರ್ಚ್ ಸ್ಕಾಲರ್ಸ್ ಗಳು, ಧಾರಾವಾಡದ ಸ್ವಯಂಸೇವಕರ ಜೊತೆಗೆ ಕಡಿಮೆ ವೆಚ್ಚದಲ್ಲಿ ಈ ಶೀಲ್ಡ್ಸ್ ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಕೊರೋನಾ ವೈರಸ್ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತಿತರ ಆರೋಗ್ಯ ಸಿಬ್ಬಂದಿಗೆ ಸೋಂಕು ಹರಡದಂತೆ ನೆರವಾಗಲಿದೆ. 

ಮುಖಕ್ಕೆ ಧರಿಸುವ ಈ ಶೀಲ್ಡ್ಸ್ ಗಳು   ವೈಯಕ್ತಿಕ ರಕ್ಷಕ ಸಾಧನ (ಪಿಪಿಇ) ಒಂದು ಭಾಗವಾಗಿದೆ. ರೋಗಿಗಳು ಕೆಮ್ಮುವಾಗ ಮತ್ತು ಸೀನುವಾಗ ಹೊರಹೊಮ್ಮುವ ಹನಿಗಳ ವಿರುದ್ಧ ತಡೆಗೋಡೆಯಾಗಿ ಇವುಗಳು ಕಾರ್ಯನಿರ್ವಹಿಸುತ್ತವೆ.  

ಕಿಮ್ಸ್ ಆಸ್ಪತ್ರೆಗಾಗಿ ತುರ್ತಾಗಿ 500 ಫೇಸ್ ಶೀಲ್ಡ್ ನೀಡುವಂತೆ ಜಿಲ್ಲಾಧಿಕಾರಿ ಕಚೇರಿಯಿಂದ ಆದೇಶಿಸಲಾಗಿತ್ತು. ಕಿಮ್ಸ್ ಆಸ್ಪತ್ರೆ ವೈದ್ಯರು ಇವುಗಳ ವಿನ್ಯಾಸದ ಬಗ್ಗೆ ಸಂತಸಗೊಂಡಿದ್ದಾರೆ. ಮತ್ತಷ್ಟು ರಕ್ಷಣಾ ಸಾಧನಗಳನ್ನು ತಯಾರಿಸಲಾಗುವುದು ಎಂದು ಮೆಕ್ಯಾನಿಕಲ್ ಎಂಜಿನಿಯರಿಂಗ್ ಇಲಾಖೆಯ ಪ್ರೊಫೆಸರ್ ಸೋಮಶೇಖರ್ ಹೇಳಿದ್ದಾರೆ. 

ಪ್ರಸ್ತುತ ಬೆಳಗಾವಿ, ಕಲಬುರಗಿ ಮತ್ತಿತರ ಜಿಲ್ಲೆಗಳಲ್ಲಿ ಫೇಸ್ ಶೀಲ್ಡ್ ಗೆ ಭಾರೀ ಬೇಡಿಕೆಯಿರುವುದಾಗಿ ಸೋಮಶೇಖರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com