ಕರ್ನಾಟಕದಲ್ಲಿ ಕೊರೋನಾ ಕುರಿತು ಸಂಪೂರ್ಣ ವಿವರವುಳ್ಳ ವೆಬ್‌ಸೈಟ್ ಬಿಡುಗಡೆ

ರಾಜ್ಯದಲ್ಲಿ ಕೊರೋನಾ ಹಾವಳಿ ದಿನದಿನಕ್ಕೆ ಹೆಚ್ಚಾಗುತ್ತಿದ್ದು ನಿಯಂತ್ರಣಕ್ಕಾಗಿ ಸರ್ಕಾರ ನಾನಾ ಉಪಕ್ರಮ ತೆಗೆದುಕೊಳ್ಳುತ್ತಿದೆ.. ಈ ನಡುವೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಕೋವಿಡ್19 ಕುರಿತ ಸಂಪೂರ್ಣ ಮಾಹಿತಿ ಒಳಗೊಂಡಿರುವ ವೆಬ್‌ಸೈಟ್ ಒಂದನ್ನು ಬಿಡುಗಡೆ ಮಾಡಿದೆ.
ರ ಕೋವಿಡ್ 19 ವೆಬ್‌ಸೈಟ್
ರ ಕೋವಿಡ್ 19 ವೆಬ್‌ಸೈಟ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾವಳಿ ದಿನದಿನಕ್ಕೆ ಹೆಚ್ಚಾಗುತ್ತಿದ್ದು ನಿಯಂತ್ರಣಕ್ಕಾಗಿ ಸರ್ಕಾರ ನಾನಾ ಉಪಕ್ರಮ ತೆಗೆದುಕೊಳ್ಳುತ್ತಿದೆ.. ಈ ನಡುವೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಕೋವಿಡ್19 ಕುರಿತ ಸಂಪೂರ್ಣ ಮಾಹಿತಿ ಒಳಗೊಂಡಿರುವ ವೆಬ್‌ಸೈಟ್ ಒಂದನ್ನು ಬಿಡುಗಡೆ ಮಾಡಿದೆ.

ಈ ಕುರಿತು ಕರ್ನಾಟಕ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿವರಗಳನ್ನು ಹಾಕಲಾಗಿದೆ.

"ರಾಜ್ಯದಲ್ಲಿ #ಕೋವಿಡ್19 ಕುರಿತ ಸಂಪೂರ್ಣ ಮಾಹಿತಿ ಒಳಗೊಂಡಿರುವ ವೆಬ್‌ಸೈಟ್ ಬಿಡುಗಡೆಯಾಗಿದೆ. ಇದು ಸರ್ಕಾರದ ಅಧಿಕೃತ ವೆಬ್‌ಸೈಟ್ ಆಗಿದ್ದು ಪ್ರತಿದಿನ, ಪ್ರತಿಕ್ಷಣ #ಕೊರೊನ ಸೋಂಕು ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಿರುತ್ತವೆ." 

"ಸಹಾಯವಾಣಿ ವಿವರ, ಸೋಂಕು ತಡೆಯಲು ಮುನ್ನೆಚ್ಚರಿಕೆ ಕ್ರಮಗಳು, ಕೊರೊನ ಸೈನಿಕರಾಗಲು ಮಾಹಿತಿ ಇತ್ಯಾದಿ ವಿವರಗಳಿರುತ್ತವೆ. ನಿಖರ ಅಂಕಿ-ಅಂಶಗಳು ಮತ್ತಿತರ ಮುಖ್ಯವಾದ ಮಾಹಿತಿಗಾಗಿ ಈ ವೆಬ್‌ಸೈಟ್ ಅನ್ನು ಅನುಸರಿಸಬಹುದು." ಎಂದು ವಿವರಿಸಲಾಗಿದೆ.

ಸರ್ಕಾರದ ವೆಬ್‌ಸೈಟ್ ವಿಳಾಸ ಹೀಗಿದೆ- https://covid19.karnataka.gov.in/kn/

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com