ಮಹಾಮಾರಿ ಕೊರೋನಾ ಕೊಲ್ಲಲು ಔಷಧಿ ಸಿದ್ಧ: ಅನುಮತಿಗಾಗಿ ಕೇಂದ್ರ ಆರೋಗ್ಯ ಇಲಾಖೆಗೆ ಪತ್ರ

ಕೊರೋನಾ ವೈರಸ್ ನಾಶಪಡಿಸಲು ಔಷಧಿ ಕಂಡುಹಿಡಿಯುವಲ್ಲಿ ಕರ್ನಾಟಕದ ವೈದ್ಯರ ತಂಡ ಯಶಸ್ವಿಯಾಗಿದ್ದು, ಅದನ್ನು ಪ್ರಯೋಗಾತ್ಮಕವಾಗಿ ಬಳಸುವಂತೆ ರಾಜ್ಯ ಸರ್ಕಾರ ಕೇಂದ್ರದ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ನಾಶಪಡಿಸಲು ಔಷಧಿ ಕಂಡುಹಿಡಿಯುವಲ್ಲಿ ಕರ್ನಾಟಕದ ವೈದ್ಯರ ತಂಡ ಯಶಸ್ವಿಯಾಗಿದ್ದು, ಅದನ್ನು ಪ್ರಯೋಗಾತ್ಮಕವಾಗಿ ಬಳಸುವಂತೆ ರಾಜ್ಯ ಸರ್ಕಾರ ಕೇಂದ್ರದ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದೆ.

ವೈದ್ಯರಾದ ಡಾ, ವಿಶಾಲ್ ರಾವ್ ಮತ್ತು ಜ್ಯೋತ್ಸ್ನಾ ರಾವ್ ಅವರ ತಂಡ ತಯಾರಿಸುವ ಕೋವಿದ್ ಥೆರಪಿ ಮೆಡಿಸನ್ ಅನ್ನು ಬಳಸುವಂತೆ ಕೋರಿ ಆರೋಗ್ಯ ಇಲಾಖೆ ಕಾರ್ಯದರ್ಶಿ ಪ್ರೀತಿ ಸುಡಾನ್ ಅವರಿಗೆ ಪತ್ರಬರೆದಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಹಹೆಚ್ಚುವರಿ ಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದ್ದಾರೆ.

ಈ ಔಷಧಿ ಕೊರೋನಾ ರೋಗಿಯ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಕೊರೋನಾ ವೈರಸ್ ಅನ್ನು ನಾಶಮಾಡುತ್ತದೆ. ಈ ಔಷಧಿಯ ತ್ವರಿತ ಪರಿಶೀಲನೆಗಾಗಿ ನಾವು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದರು.

ಸಾಮಾನ್ಯವಾಗಿ ವೈರಸ್ ಅನ್ನು ಕೊಲ್ಲುವ ಇಂಟರ್ಫೆರಾನ್ (ಪ್ರೋಟೀನ್) ಮಾನವರ ದೇಹದಲ್ಲಿ ಬಿಡುಗಡೆಯಾಗುತ್ತದೆ. ಆದರೆ ಕರೋನವೈರಸ್ ವಿಷಯದಲ್ಲಿ, ಈ ಪ್ರೋಟೀನ್ಗಳು ಬಿಡುಗಡೆಯಾಗುವುದಿಲ್ಲ. ಏಕೆಂದರೆ ಕೊರೋನವೈರಸ್ ಸೋಂಕಿನಿಂದ ಬಳಲುತ್ತಿರುವ ರೋಗಿಯ ರೋಗನಿರೋಧಕ ಶಕ್ತಿ ಸಾಮಾನ್ಯ ಮನುಷ್ಯರಿಗಿಂತ ತೀರಾ ಕಡಿಮೆ ಇರುತ್ತದೆ.

ಇದು ಮಗುವಿನ ರೋಗನಿರೋಧಕ ವ್ಯವಸ್ಥೆಯು ವೈರಸ್ ಅನ್ನು ಎದುರಿಸಲು ಹೇಗೆ ಸಮರ್ಥವಾಗಿದೆ ಮತ್ತು ವಯಸ್ಸಾದವರಲ್ಲಿ ಏಕೆ ಸಾಧ್ಯವಿಲ್ಲ ಎಂಬ ತಾರ್ಕಿಕತೆಯನ್ನು ಆಧರಿಸಿದೆ. ”ಕೊರೋನವೈರಸ್‌ನಿಂದ ಬಳಲುತ್ತಿರುವ ರೋಗಿಗೆ ಇಂಜೆಕ್ಷನ್ ಅಥವಾ ಐ.ವಿ (ಇಂಟ್ರಾವೆನಸ್) ವಿಧಾನದ ಮೂಲಕ ಸೈಟೊಕಿನ್‌ಗಳನ್ನು ನೀಡಲಾಗುತ್ತದೆ. ಸೈಟೊಕಿನ್ಗಳ ಮಿಶ್ರಣವನ್ನು ರೋಗಿಗೆ ಐವಿ ಮೂಲಕ ನೀಡಿದಾಗ, ಅವನಲ್ಲಿ ಅಥವಾ ಅವಳಲ್ಲಿ ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ. ಈ ಔಷಧಿಯು ಇಂಟರ್ಫೆರಾನ್ ಅನ್ನು ಬಿಡುಗಡೆ ಮಾಡಲು ದೇಹದ ಜೀವಕೋಶಗಳನ್ನು ಉತ್ತೇಜಿಸುತ್ತದೆ. ಇದು ವೈರಸನ್ನು ಕೊಲ್ಲುತ್ತದೆ ಎಂದು ವಿವರಿಸಿದ್ದಾರೆ.

ಈಗಾಗಲೇ ಈ ಔಷಧಿಗೆ ನೈತಿಕ ಸಮಿತಿಯ ಅನುಮತಿ ಪಡೆಯಲಾಗಿದೆ.ಹೀಗಾಗಿ ಭಾರತೀಯ ಮೆಡಿಕಲ್ ರಿಸೇರ್ಚ್ ಕೌನ್ಸಿಲ್ ಅವಶ್ಯಕ ಸೂಚನೆಗಳನ್ನು ನೀಡಬೇಕೆಂದು  ಹಾಗೂ ಪ್ರಯೋಗಾತ್ಮಕವಾಗಿ ಬಳಸಲು ಅನುಮತಿ ನೀಡಬೇಕೆಂದು ಕೋರಿದ್ದಾರೆ, ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಡಾ.ವಿಶಾಲ್ ರಾವ್ ಅವರುಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬೆಳಗಾವಿಯಲ್ಲಿ ಎಂಬಿಬಿಎಸ್ ಮುಗಿಸಿದರು. ವಿಶಾಲ್ ರಾವ್  
ರಾಜ್ ಸರ್ಕಾರದ ತಂಬಾಕು ನಿಯಂತ್ರಣ ಸಮಿತಿಯ ಸದಸ್ಯರಾಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com