ಮಾರುಕಟ್ಟೆ ವೀಕ್ಷಣೆ ನಡೆಸಿದ ಸಚಿವ ಬಿಸಿ ಪಾಟೀಲ್ ಟೀಂ: ಕೃಷಿ ಚಟುವಟಿಕೆಗಳಿಗೆ ತೊಂದರೆ ಮಾಡದಂತೆ  ತಾಕೀತು

ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ಬೆಳ್ಳಂಬೆಳಿಗ್ಗೆ ತೋಟಗಾರಿಕಾ ಸಚಿವ ನಾರಾಯಣಗೌಡ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ತರಕಾರಿ ಮತ್ತು ಈರುಳ್ಳಿ ಆಲೂಗಡ್ಡೆ ಮಾರುಕಟ್ಟೆಗಳಿಗೆ ಭೇಟಿ
ಮಾರುಕಟ್ಟೆ ವೀಕ್ಷಣೆ ನಡೆಸಿದ ಸಚಿವ ಬಿಸಿ ಪಾಟೀಲ್ ಟೀಂ
ಮಾರುಕಟ್ಟೆ ವೀಕ್ಷಣೆ ನಡೆಸಿದ ಸಚಿವ ಬಿಸಿ ಪಾಟೀಲ್ ಟೀಂ

ಬೆಂಗಳೂರು:  ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ಬೆಳ್ಳಂಬೆಳಿಗ್ಗೆ ತೋಟಗಾರಿಕಾ ಸಚಿವ ನಾರಾಯಣಗೌಡ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ತರಕಾರಿ ಮತ್ತು ಈರುಳ್ಳಿ ಆಲೂಗಡ್ಡೆ ಮಾರುಕಟ್ಟೆಗಳಿಗೆ ಭೇಟಿ ನೀಡಿದರು.

ಅಲ್ಲದೇ ಬ್ಯಾಟರಾಯನಪುರ ಹಾಗೂ ದಾಸನಪುರ ಮಾರುಕಟ್ಟೆ ಪ್ರಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್, ಸಾಮಾಜಿಕ ಅಂತರ ಎನ್ನುವುದು ಸ್ವಯಂ ಪ್ರೇರಣೆಯಾಗಬೇಕು. ಸಾಮಾಜಿಕ ತುರ್ತು ಪರಿಸ್ಥಿತಿ ಇದಾಗಿರುವುದರಿಂದ ನಮ್ಮಷ್ಟಕ್ಕೆ ನಾವು ನಿಬಂಧನೆ ಹಾಕಿಕೊಳ್ಳಬೇಕು. ಪೊಲೀಸರಿಂದಾಗಲೀ ಅಥವಾ ಸರ್ಕಾರದ ಒತ್ತಾಯವಾಗಿ ಆಗಲೀ ಆಗಬಾರದು. ಸಾಮಾಜಿಕ ಅಂತರ ಎನ್ನುವುದು ಕೊರೊನಾ ಮಹಾಮಾರಿಯ ವಿರುದ್ಧ ಸಮರ ಸಾರಲು ಇರುವ ಏಕೈಕ ಪರಿಹಾರ. ಜನರ ಹಾಗೂ ಸಾಮಾಜಿಕ ಆರೋಗ್ಯದ ಹಿತದೃಷ್ಟಿಯಿಂದಲೇ ಸಾಮಾಜಿಕ ಅಂತರ ಲಾಕ್‌ಡೌನ್‌ಗೆ ಕರೆ ನೀಡಲಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com