ಶಿವಮೊಗ್ಗ: ಆಯನೂರಿನ‌ ಮಸೀದಿಯಲ್ಲಿ ನಮಾಜ್, ಏಳು‌ ಮಂದಿಗೆ ಜ್ವರ

ಲಾಕ್‌ಡೌನ್ ಮತ್ತು ನಿಷೇಧಾಜ್ಞೆ ಆದೇಶ ಉಲ್ಲಂಘಿಸಿ ಮಸೀದಿಯೊಂದರಲ್ಲಿ ಜಮಾಜ್‌ಗೆ ಸೇರಿದ್ದ ಒಟ್ಟು 77 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಕ್ವಾರಂಟೈನ್’ನಲ್ಲಿ ಇರಿಸಿದ್ದಾರೆ.
ಸಾಂದರ್ಭಿ ಚಿತ್ರ
ಸಾಂದರ್ಭಿ ಚಿತ್ರ

ಶಿವಮೊಗ್ಗ: ಲಾಕ್‌ಡೌನ್ ಮತ್ತು ನಿಷೇಧಾಜ್ಞೆ ಆದೇಶ ಉಲ್ಲಂಘಿಸಿ ಮಸೀದಿಯೊಂದರಲ್ಲಿ ಜಮಾಜ್‌ಗೆ ಸೇರಿದ್ದ ಒಟ್ಟು 77 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಕ್ವಾರಂಟೈನ್’ನಲ್ಲಿ ಇರಿಸಿದ್ದಾರೆ.

ನಮಾಜ್’ನಲ್ಲಿ ಭಾಗಿಯಾದವರ ಪೈಕಿ ಏಳು ಮಂದಿಗೆ ಈಗ ಜ್ವರದ ಲಕ್ಷಣ ಇರುವುದು ಬೆಳಕಿಗೆ ಬಂದಿದೆ.

ಜಿಲ್ಲೆಯ ಆಯನೂರು ಸಮೀಪದ ಕೆಸವಿನಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರದ ನಮಾಜ್ ಮಾಡಲು 70ಕ್ಕೂ ಹೆಚ್ಚು ಮಂದಿ ಸೇರಿದ್ದಾರೆ ಎಂಬುದಾಗಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.

ಏಳು ಮಂದಿಯನ್ನು ಕೂಡಲೆ ಆಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ಉಳಿದ 70 ಮಂದಿಯನ್ನು ಸಮೀಪದ ಶಾಲೆಯೊಂದರ ಕಟ್ಟಡದಲ್ಲಿ ಕ್ವಾರಂಟೈನ್ ವಿಭಾಗದಲ್ಲಿ ಇರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. 

ಕುಂಸಿ ಠಾಣೆ ಸಬ್ ಇನ್ಸ್‌ಪೆಕ್ಟರ್ ನವೀನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com