ಹೊಸಪೇಟೆ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೋನಾ ಸೋಂಕು ಪತ್ತೆ

ಗಣಿನಾಡು ಬಳ್ಳಾರಿಯಲ್ಲಿ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಹೊಸಪೇಟೆಯಲ್ಲಿ ಸೋಂಕಿತ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಯಲ್ಲಿಯೂ ಇದೀಗ ವೈರಸ್ ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

Published: 04th April 2020 12:46 PM  |   Last Updated: 04th April 2020 07:21 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : RC Network

ಹೊಸಪೇಟೆ: ಗಣಿನಾಡು ಬಳ್ಳಾರಿಯಲ್ಲಿ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಹೊಸಪೇಟೆಯಲ್ಲಿ ಸೋಂಕಿತ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಯಲ್ಲಿಯೂ ಇದೀಗ ವೈರಸ್ ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಈ ಹಿಂದೆ ಎಸ್ಆರ್ ನಗರದ ಒಂದೇ ಕುಟುಂಬ ಮೂವರಲ್ಲಿ ಸೋಂಕು ದೃಢಪಟ್ಟಿತ್ತು. ಬಳಿಕ ಅವರ ಸಂಬಂಧಿಕರೊಬ್ಬರಲ್ಲಿ ಸೋಂಕು ತಗುಲಿರುವುದು ಕಂಡು ಬಂದಿತ್ತು. ಬಳಿಕ ವ್ಯಕ್ತಿಯನ್ನು ಬಳ್ಳಾರಿಯ ವಿಮ್ಸ್ ನಲ್ಲಿ ಐಸೋಲೇಷನ್ ನಲ್ಲಿರಿಸಲಾಗಿತ್ತು. 

ಕುಟುಂಬದ ಮೂವರಲ್ಲಿ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ನೆರೆಮನೆಯ ಒಟ್ಟು 10 ಜನರನ್ನು ಪ್ರತ್ಯೇಕವಾಗಿರಿಸಲಾಗಿತ್ತು. ಎಲ್ಲರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಒಬ್ಬರಿಗೆ ಸೋಂಕು ತಗುಲಿರುವುದು ಖಚಿತವಾಗಿದ್ದು, ಇನ್ನುಳಿದ 9 ಜನರ ವರದಿ ನೆಗೆಟಿವ್ ಬಂದಿದೆ. 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp