ಬೆಂಗಳೂರು: ಲಾಕ್‌ಡೌನ್‌ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, 3 ಆರೋಪಿಗಳ ಬಂಧನ

ಲಾಕ್‌ಡೌನ್ ವೇಳೆ ಕರ್ತವ್ಯನಿರತ ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಹುಳಿಮಾವು ಠಾಣೆ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Published: 04th April 2020 07:09 PM  |   Last Updated: 04th April 2020 07:09 PM   |  A+A-


bhaskar rao

ಭಾಸ್ಕರ್ ರಾವ್

Posted By : Vishwanath S
Source : UNI

ಬೆಂಗಳೂರು: ಲಾಕ್‌ಡೌನ್ ವೇಳೆ ಕರ್ತವ್ಯನಿರತ ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಹುಳಿಮಾವು ಠಾಣೆ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಳಿಮಾವುವಿನ ರವಿ (24), ರೋಹಿತ್(25) ಮತ್ತು ಪ್ರವೀಣ್(24) ಬಂಧಿತ ಆರೋಪಿಗಳು. ಬಂಧಿತರು ಏಪ್ರಿಲ್ 1ರಂದು ಸಂಜೆ 6 ಗಂಟೆ ವೇಳೆಯಲ್ಲಿ ಹುಳಿಮಾವು ಠಾಣೆಯ ಪೇದೆ ಹೇಮಾ ಎಂಬವರ ಮೇಲೆ ಇವರು ಹಲ್ಲೆ ನಡೆಸಿದ್ದರು. ಇದರಿಂದ ಹೇಮಾ ಅವರ ಮುಖ ಮತ್ತು ಕಣ್ಣಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ದೊಡ್ಡಕಮ್ಮನಹಳ್ಳಿಯ ಜುಂಜಪ್ಪ ಸರ್ಕಲ್ ಬಳಿ ಮುಖ್ಯಪೇದೆ ರಾಜೇಶ್ವರಿ, ಮಹಿಳಾ ಪೇದೆ ಹೇಮಾ ಮತ್ತು ಚಿಕ್ಕಪ್ಪ ಅವರನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅವರು ಅನವಶ್ಯಕವಾಗಿ ಮನೆಯಿಂದ ಹೊರಗೆ ಬರುವವರು ಮತ್ತು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ಬೈಕ್‌ನಲ್ಲಿ ಬಂದ ಮೂವರನ್ನು ತಡೆದು ತಪಾಸಣೆ ನಡೆಸುವ ವೇಳೆ ಘಟನೆ ನಡೆದಿದೆ.

ಪಾಸ್ ಇಲ್ಲದೆಯೇ, ಅನವಶ್ಯಕವಾಗಿ ಓಡಾಡುತ್ತಿರುವುದು ಕಂಡು ಬಂದಿದ್ದರಿಂದ ಮೂವರನ್ನೂ ತಡೆದು ನಿಲ್ಲಿಸಿ ತಪಾಸಣೆಗೆ ಒಳಪಡಿಸಲಾಗಿತ್ತು. ಇದೇ ಕಾರಣಕ್ಕೆ ಕರ್ತವ್ಯನಿರತ ಸಿಬ್ಬಂದಿ ಜತೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಮಹಿಳಾ ಪೇದೆ ಹೇಮಾ ಅವರ ಶರ್ಟ್ ಹಿಡಿದು ಎಳೆದು ತಳ್ಳಿದ್ದರು. ಇದರಿಂದ ಅವರ ಕಣ್ಣಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಅವರ ಮನೆಯಿಂದ ಬಂಧಿಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp